ವಿಧಾನಸಭೆ ಚುನಾವಣೆಯಲ್ಲಿ ಹಳೆ ಮುಖಗಳಿಗೆ ಮತ್ತೆ ಬಿಜೆಪಿ ಮಣೆ: ರಾಜ್ಯ ರಾಜಧಾನಿ ಗೆಲ್ಲುವ ಹೊಣೆ!

ರಾಜ್ಯ ರಾಜಧಾನಿಯಲ್ಲಿ ತನ್ನ ಹಿಡಿತವನ್ನು ಉಳಿಸಿಕೊಳ್ಳಲು ಆಡಳಿತಾರೂಢ ಬಿಜೆಪಿ ಕಾರ್ಯತಂತ್ರ ರೂಪಿಸಿದೆ, ತನ್ನ ಹೆಚ್ಚಿನ ಹಾಲಿ ಶಾಸಕರಿಗೆ ಟಿಕೆಟ್ ನೀಡಿದೆ ಮತ್ತು ಬಿಜೆಪಿಯೇತರ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಮಾಜಿ ಬಿಬಿಎಂಪಿ ಕೌನ್ಸಿಲರ್‌ಗಳನ್ನು ಕಣಕ್ಕಿಳಿಸುತ್ತಿದೆ.
ಸುರೇಶ್ ಕುಮಾರ್ ಮತ್ತು ರವಿ ಸುಬ್ರಮಣ್ಯ
ಸುರೇಶ್ ಕುಮಾರ್ ಮತ್ತು ರವಿ ಸುಬ್ರಮಣ್ಯ
Updated on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ತನ್ನ ಹಿಡಿತವನ್ನು ಉಳಿಸಿಕೊಳ್ಳಲು ಆಡಳಿತಾರೂಢ ಬಿಜೆಪಿ ಕಾರ್ಯತಂತ್ರ ರೂಪಿಸಿದೆ, ತನ್ನ ಹೆಚ್ಚಿನ ಹಾಲಿ ಶಾಸಕರಿಗೆ ಟಿಕೆಟ್ ನೀಡಿದೆ ಮತ್ತು ಬಿಜೆಪಿಯೇತರ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಮಾಜಿ ಬಿಬಿಎಂಪಿ ಕೌನ್ಸಿಲರ್‌ಗಳನ್ನು ಕಣಕ್ಕಿಳಿಸುತ್ತಿದೆ.

ಮಂಗಳವಾರ ಘೋಷಿಸಲಾದ 189 ಅಭ್ಯರ್ಥಿಗಳ ಪೈಕಿ 13 ಬಿಜೆಪಿ ಶಾಸಕರು ಬೆಂಗಳೂರಿನವರಾಗಿದ್ದಾರೆ, ಸದ್ಯ ಬಿಜೆಪಿ 15 ಶಾಸಕರನ್ನು ಹೊಂದಿದೆ. ಬಿಜೆಪಿ ಸೇರಿ 2019ರ ಉಪಚುನಾವಣೆಯಲ್ಲಿ ಗೆದ್ದಿದ್ದ ಎಲ್ಲ ಶಾಸಕರಿಗೂ ಟಿಕೆಟ್‌ ಸಿಕ್ಕಿದೆ. ಈ ಶಾಸಕರು ಕನಿಷ್ಠ ಎರಡು ಬಾರಿ ಗೆದ್ದಿದ್ದಾರೆ ಮತ್ತು ಗೆಲ್ಲಬಲ್ಲ’ ಅಭ್ಯರ್ಥಿಗಳೆಂದು ಪರಿಗಣಿಸಲಾಗಿದೆ ಎಂದು ಪಕ್ಷದ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

ಆರಂಭದಲ್ಲಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಕೆಲ ನಾಯಕರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಮತ್ತೊಂದೆಡೆ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಹೆಸರು ಘೋಷಣೆಯಾಗಿಲ್ಲ. ಇದೇ ವೇಳೆ ಲಿಂಬಾವಳಿ ಅವರು ಪಕ್ಷದ ಮುಖಂಡರನ್ನು ಭೇಟಿ ಮಾಡಲು ಬುಧವಾರ ನವದೆಹಲಿಗೆ ತೆರಳಿದ್ದಾರೆ.

ವರುಣಾ ಮತ್ತು ಚಾಮರಾಜನಗರದಿಂದ ಸ್ಪರ್ಧಿಸಲಿರುವ ವಿ ಸೋಮಣ್ಣ ಪ್ರತಿನಿಧಿಸುವ ಗೋವಿಂದರಾಜನಗರಕ್ಕೆ ಮಾಜಿ ಕೌನ್ಸಿಲರ್ ಉಮೇಶ್ ಶೆಟ್ಟಿ ಹೆಸರು ಕೇಳಿಬರುತ್ತಿದೆ. ಮಾಜಿ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಹೆಬ್ಬಾಳ ಟಿಕೆಟ್‌ ನೀಡಬೇಕು ಎಂಬ ಒತ್ತಡವೂ ಇದೆ.

ಬೆಂಗಳೂರಿನಲ್ಲಿ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಮುಖ್ಯವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಈ ಹಂತದಲ್ಲಿ ಅಪಾಯವನ್ನು ತೆಗೆದುಕೊಳ್ಳಲು ಪಕ್ಷದ ನಾಯಕರು ಬಯಸುವುದಿಲ್ಲ.

ಬಿಬಿಎಂಪಿ ಕೌನ್ಸಿಲ್ ಇಲ್ಲದ ಕಾರಣ ಶಾಸಕರು ಕೌನ್ಸಿಲರ್‌ಗಳಾಗಿ ಜನರನ್ನು ತಲುಪುವ ಕೆಲಸ ಮಾಡಿದ್ದಾರೆ. ಜನರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು ನಗರ ಜನತೆಯ ನಾಡಿಮಿಡಿತ ಅರಿತಿದ್ದಾರೆ. ಆದ್ದರಿಂದ ಅವರನ್ನು ಬದಲಾಯಿಸುವುದು ಉತ್ತಮ ಆಲೋಚನೆಯಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಬಿಜೆಪಿ ಮಾಜಿ ಬಿಬಿಎಂಪಿ ಕೌನ್ಸಿಲರ್‌ಗಳಾದ, ಸರ್ವಜ್ಞನಗರದಿಂದ ಪದ್ಮನಾಭ ರೆಡ್ಡಿ, ವಿಜಯನಗರದಿಂದ ಎಚ್ ರವೀಂದ್ರ, ಶಾಂತಿನಗರದಿಂದ ಶಿವಕುಮಾರ್, ಶಿವಾಜಿನಗರದಿಂದ ಎನ್ ಚಂದ್ರು, ಜಯನಗರದಿಂದ ಸಿಕೆ ರಾಮಮೂರ್ತಿ ಮತ್ತು ಬಿಟಿಎಂ ಲೇಔಟ್‌ನಿಂದ ಎನ್‌ಆರ್ ಶ್ರೀಧರ್ ರೆಡ್ಡಿ ಅವರನ್ನು ಕಣಕ್ಕಿಳಿಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಈ ನಾಯಕರು ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ತಿಳಿದಿದ್ದಾರೆ ಮತ್ತು ಸ್ಥಳೀಯ ಜನರೊಂದಿಗೆ ಸಂಪರ್ಕ ಹೊಂದಿದ್ದಾರೆ ಅದು ಅವರಿಗೆ ಗೆಲ್ಲಲು ಸಹಾಯ ಮಾಡುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್  ಹೇಳಿದ್ದಾರೆ. ಬಸವನಗುಡಿ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಬಿಜೆಪಿಯ ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಈಗ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com