ಎಂಎಲ್ ಸಿ ಹುದ್ದೆ ಕಳೆದುಕೊಳ್ಳುವ ಭೀತಿ: ಮರಳಿ ಗೂಡು ಸೇರುವ ನಿರ್ಧಾರ 'ಕೈ' ಬಿಟ್ಟ 'ಹಳ್ಳಿ ಹಕ್ಕಿ'

ವಿಧಾನಸಭೆ ಚುನಾವಣೆಗು ಮುನ್ನ ಕಾಂಗ್ರೆಸ್ ಪಕ್ಷ ಸೇರಲು ಕೆಪಿಸಿಸಿ ಕಚೇರಿಗೆ ಸಂಭ್ರಮದಿಂದ ಆಗಮಿಸಿದ್ದ ಮಾಜಿ ಸಚಿವ, ಬಿಜೆಪಿ ಎಂಎಲ್‌ಸಿ ಎ ಎಚ್‌ ವಿಶ್ವನಾಥ್‌ ಅವರು ಕಾನೂನು ತೊಡಕಿನಿಂದಾಗಿ ಹಿಂತಿರುಗಬೇಕಾಯಿತು.
ಎಚ್. ವಿಶ್ವನಾಥ್
ಎಚ್. ವಿಶ್ವನಾಥ್

ಬೆಂಗಳೂರು: ವಿಧಾನಸಭೆ ಚುನಾವಣೆಗು ಮುನ್ನ ಕಾಂಗ್ರೆಸ್ ಪಕ್ಷ ಸೇರಲು ಕೆಪಿಸಿಸಿ ಕಚೇರಿಗೆ ಸಂಭ್ರಮದಿಂದ ಆಗಮಿಸಿದ್ದ ಮಾಜಿ ಸಚಿವ, ಬಿಜೆಪಿ ಎಂಎಲ್‌ಸಿ ಎ ಎಚ್‌ ವಿಶ್ವನಾಥ್‌ ಅವರು ಕಾನೂನು ತೊಡಕಿನಿಂದಾಗಿ ಹಿಂತಿರುಗಬೇಕಾಯಿತು.

ಜುಲೈ 2026ರ ವರೆಗೆ ಅವರ ಅಧಿಕಾರಾವಧಿ ಇದ್ದು, ಪಕ್ಷಾಂತರ ನಿಷೇಧ ಕಾಯಿದೆಯಿಂದಾಗಿ ಎಂಎಲ್‌ಸಿ ಹುದ್ದೆ ಕಳೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಕಾನೂನು ತಜ್ಞರ ಸಲಹೆಯಂತೆ ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆಯಾಗಲಿಲ್ಲ.

ಸಾಹಿತ್ಯ ಕೋಟಾದಡಿ ರಾಜ್ಯಪಾಲರು  ನಾಮನಿರ್ದೇಶನ ಮಾಡಿದ್ದರಿಂದ ಎಂಎಲ್‌ಸಿ ಹುದ್ದೆಯನ್ನು ಇಟ್ಟುಕೊಂಡು ಕಾಂಗ್ರೆಸ್ ಸೇರಲು ಬಯಸಿದ್ದರು. ಆದರೆ ಅವರು ಎಂಎಲ್‌ಸಿ ಆದ ಆರು ತಿಂಗಳೊಳಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ಬೇರೆ ಪಕ್ಷಕ್ಕೆ ಬದಲಾಗುವುದು ಕಾನೂನುಬಾಹಿರ ಎಂದು ತಜ್ಞರು ಸೂಚನೆ ನೀಡಿದ್ದಾರೆ.

ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಮುಖ್ಯಸ್ಥ ಡಿ ಕೆ ಶಿವಕುಮಾರ್ ಇಬ್ಬರೂ ನನಗೆ ಸಲಹೆ ನೀಡಿದ್ದರು ಮತ್ತು ನಾನು ಪಕ್ಷಕ್ಕೆ ಸೇರದಿರಲು ನಿರ್ಧರಿಸಿದೆ. ಆದರೆ ನಮ್ಮ ಅಭ್ಯರ್ಥಿಗಳ ಆಯ್ಕೆಗಾಗಿ ನಾನು ಸ್ವತಂತ್ರವಾಗಿ ಪ್ರಚಾರ ಮಾಡುತ್ತೇನೆ. ನಾನು ರಾಜ್ಯಪಾಲರಿಂದ ನಾಮನಿರ್ದೇಶನಗೊಂಡ ಎಂಎಲ್‌ಸಿ ಹೀಗಾಗಿ ನಾನು ಬೆಂಬಲಿಸಬಹುದು, ಆದರೆ ಪಕ್ಷಕ್ಕೆ ಸೇರಲು ಸಾಧ್ಯವಿಲ್ಲ ಎಂದು ವಿಶ್ವನಾಥ್ ಹೇಳಿದರು.

ಸದ್ಯಕ್ಕೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಅವರ ಮುಂದಿನ ನಿರ್ಧಾರ ಕೈಗೊಳ್ಳುವವರೆಗೂ ಇದೇ ಸ್ಥಾನದಲ್ಲಿ  ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಮಾಜಿ ಸಚಿವ ಬಿ ಸೋಮಶೇಖರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com