'ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಇದೆ, ಸಿದ್ದರಾಮಯ್ಯ ಹೇಳಿದ್ದು ಬೊಮ್ಮಾಯಿ ಭ್ರಷ್ಟ ಎಂದು': ಜಗದೀಶ್ ಶೆಟ್ಟರ್
ಕರ್ನಾಟಕದ ಹಾಲಿ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಇದ್ದು, ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಗೆ ತಿಳಿಯುತ್ತದೆ ಎಂದು ಮಾಜಿ ಸಿಎಂ, ಹುಬ್ಬಳ್ಳಿ-ಧಾರವಾಡ-ಮಧ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
Published: 24th April 2023 09:06 PM | Last Updated: 25th April 2023 02:13 PM | A+A A-

ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಮತ್ತು ಬೊಮ್ಮಾಯಿ
ಹುಬ್ಬಳ್ಳಿ: ಕರ್ನಾಟಕದ ಹಾಲಿ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಇದ್ದು, ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಗೆ ತಿಳಿಯುತ್ತದೆ ಎಂದು ಮಾಜಿ ಸಿಎಂ, ಹುಬ್ಬಳ್ಳಿ-ಧಾರವಾಡ-ಮಧ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಇದೆ.. ಅದನ್ನು ಜನರಿಗೆ ಬಿಡುತ್ತೇನೆ. ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಗೆ ತಿಳಿಯುತ್ತದೆ' ಎಂದು ಕರ್ನಾಟಕದ ಮಾಜಿ ಸಿಎಂ, ಹುಬ್ಬಳ್ಳಿ-ಧಾರವಾಡ-ಮಧ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
#WATCH | "There is some corruption. I leave it to the people. Public will know about the corruption that is going on," says former Karnataka CM and Congress candidate from Hubli-Dharwad-Central Jagadish Shettar. https://t.co/CK4hgPsxpx pic.twitter.com/zsjLLrHNpI
— ANI (@ANI) April 24, 2023
ಇದೇ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನಮಾನದ ಕುರಿತು ಮಾತನಾಡಿದ ಅವರು, "ಇದು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು, ಬಿಜೆಪಿಯಲ್ಲಿ ನನಗೆ ಗೌರವ ನೀಡಿಲ್ಲ ಮತ್ತು ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಕಾಂಗ್ರೆಸ್ ನಲ್ಲಿ ನನಗೆ ಯಾವುದೇ ಅಧಿಕಾರ ಅಥವಾ ಯಾವುದೂ ಬೇಡ..ನನಗೆ ಬೇಕಿರುವುದು ಕೇವಲ ಗೌರವ. ನನಗೆ ಆದ ಅಗೌರವದಿಂದ ನಾನು ಬಿಜೆಪಿ ತೊರೆಗು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ, ಅದು ನನಗೆ ನೋವುಂಟು ಮಾಡಿದೆ. ಬಿಜೆಪಿಯವರ ಉಪಚಾರ ನೋಡಿ ಎಷ್ಟೋ ಜನ ಕಾಂಗ್ರೆಸ್ ಸೇರತೊಡಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಕ್ಷೀಣಿಸುತ್ತಿದೆ ಮತ್ತು ಕಾಂಗ್ರೆಸ್‌ನ ಉದಯವನ್ನು ತೋರಿಸುತ್ತದೆ. ನನ್ನ ವಿಶ್ಲೇಷಣೆಯ ಪ್ರಕಾರ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆ ನಂತರ ಮೊದಲ ಬಾರಿಗೆ ರಾಹುಲ್ ಗಾಂಧಿ ಭೇಟಿ ಮಾಡಿದ ಜಗದೀಶ್ ಶೆಟ್ಟರ್: 'ಲಿಂಗಾಯತ ಮತ' ಪ್ರಮುಖ ಚರ್ಚಾ ವಿಷಯ
#WATCH | "It is left to the Congress party's high command. I told Congress people only that I have not been given the respect in BJP and have been ill-treated by them. I don't want any power or anything, just respect and honour," says Congress candidate from Hubli-Dharwad-Central… pic.twitter.com/pejkx1Wrj2
— ANI (@ANI) April 24, 2023
ಲಿಂಗಾಯತ ಸಿಎಂ ಕುರಿತ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಅವರ ಹೇಳಿಕೆ ಈಗಿನ ಸಿಎಂ ಬೊಮ್ಮಾಯಿ ವಿರುದ್ಧವೇ ಹೊರತು ಲಿಂಗಾಯತ ಸಮುದಾಯದ ವಿರುದ್ಧ ಅಲ್ಲ. ಅವರು ಎಲ್ಲಾ ಲಿಂಗಾಯತ ಸಿಎಂಗಳ ಬಗ್ಗೆ ಮಾತನಾಡಿಲ್ಲ. ಅವರು ಇತರ ಲಿಂಗಾಯತ ಸಿಎಂಗಳ ಬಗ್ಗೆ ಪ್ರತಿಕ್ರಿಯಿಸಲಿಲ್ಲ ಎಂದು ಹೇಳಿದರು.
#WATCH | "His comment was only on the present CM Bommai and not all Lingayat CMs. He did not comment on other Lingayat CMs..," says Congress candidate from Hubli-Dharwad-Central, Jagadish Shettar on Karnataka LoP Siddaramaiah's "Corrupt Lingayat Chief Minister" remark pic.twitter.com/W7q0Clg8mZ
— ANI (@ANI) April 24, 2023
ಇದನ್ನೂ ಓದಿ: ಹಳೇ ಪ್ಲೇಯರ್ ರಿಟೈರ್ಡ್ ಆಗಿ ಅಂದ್ರೆ ಬೇರೆ ಟೀಮ್‌ಗೆ ಹೋದ್ರು; ಶೆಟ್ಟರ್ ಬದಲಾಯಿಸಲು ತೀರ್ಮಾನಿಸಿದ್ದೇ ಮೋದಿ, ಅಮಿತ್ ಶಾ: ಜೋಶಿ
ಇನ್ನು ಕರ್ನಾಟಕ ಪ್ರವಾಸದಲ್ಲಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಶೆಟ್ಟರ್ ಬಿಜೆಪಿ ತೊರೆದು, ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಹಾಲಿ ಚುನಾವಣೆಯಲ್ಲಿ ಶೆಟ್ಟರ್ ಸೋಲುತ್ತಾರೆ. ಹುಬ್ಬಳ್ಳಿ ಮತದಾರರು ಯಾವಾಗಲೂ ಬಿಜೆಪಿಗೆ ಮತ ಹಾಕಿದ್ದಾರೆ ಮತ್ತು ಬಿಜೆಪಿಯ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ ಎಂದು ಹೇಳಿದ್ದರು.
#WATCH | Union HM Amit Shah slams Congress leader & Former Karnataka CM Jagdish Shettar who recently quit BJP,says,"There'll be no loss, Jagdish Shettar will himself lose election, Huballii has always voted for BJP & all workers of BJP are united"#KarnatakaAssemblyElection2023 pic.twitter.com/XWsDhv7Kqn
— ANI (@ANI) April 24, 2023