ತೆಲಂಗಾಣ ಚುನಾವಣೆ ಬೆಟ್ಟಿಂಗ್ ಭರಾಟೆ: ಸಟ್ಟಾ ಬಜಾರ್‌ನಲ್ಲಿ 'ಕಾಂಗ್ರೆಸ್' ಹಾಟ್ ಫೇವರಿಟ್!

ಚುನಾವಣಾ ಬೆಟ್ಟಿಂಗ್ ಸಕ್ರಿಯವಾಗಿದ್ದು, ಕಾಂಗ್ರೆಸ್‌, ಬಿಆರ್‌ಎಸ್, ಬಿಜೆಪಿ, ಎಂಐಎಂ ಎಷ್ಟು ಸ್ಥಾನಗಳಲ್ಲಿ ವಿಜಯಿ ಆಗಲಿದೆ ಎಂಬ ವಿಷಯದ ಮೇಲೆ ಬೆಟ್ಟಿಂಗ್ ನಡೆದಿದೆ.
ಕಾಂಗ್ರೆಸ್ ಲೋಗೋ
ಕಾಂಗ್ರೆಸ್ ಲೋಗೋ

ಬೆಂಗಳೂರು: ತೆಲಂಗಾಣ ಚುನಾವಣೆಯ ಮತದಾನ ಮುಗಿದಿದ್ದು ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ತೆಲಂಗಾಣ ಚುನಾವಣೆಯ ಪ್ರಚಾರ ಮುಗಿದ ಬೆನ್ನಿಗೆ ಸಟ್ಟಾ ಬಜಾರ್‌ನಲ್ಲಿ ಬೆಟ್ಟಿಂಗ್ ಜೋರಾಗಿದೆ. ಚುನಾವಣಾ ಬೆಟ್ಟಿಂಗ್ ಸಕ್ರಿಯವಾಗಿದ್ದು, ಕಾಂಗ್ರೆಸ್‌, ಬಿಆರ್‌ಎಸ್, ಬಿಜೆಪಿ, ಎಂಐಎಂ ಎಷ್ಟು ಸ್ಥಾನಗಳಲ್ಲಿ ವಿಜಯಿ ಆಗಲಿದೆ ಎಂಬ ವಿಷಯದ ಮೇಲೆ ಬೆಟ್ಟಿಂಗ್ ನಡೆದಿದೆ.

ಸಟ್ಟಾ ಬಜಾರಲ್ಲಿ ಕಂಡುಬರುವ ಒಲವು ನಿಖರ ಫಲಿತಾಂಶಕ್ಕೆ ಸಮೀಪ ಇರುತ್ತದೆ ಎಂಬ ನಂಬಿಕೆ ಜನಮಾನಸದ ನಡುವೆ ಬಲವಾಗಿ ಬೇರೂರಿದೆ. ಹಿಂದಿ ಭಾಷೆಯಲ್ಲಿ ಸಟ್ಟಾ ಬಜಾರ್ ಎಂದರೆ ಬೆಟ್ಟಿಂಗ್ ಮಾರುಕಟ್ಟೆ. ಇದು ಒಂದು ರೀತಿಯ ಜೂಜು. ಇದಕ್ಕೆ ಕಾನೂನು ಮಾನ್ಯತೆ ಇಲ್ಲ. ಜೂಜು ಆಗಿರುವ ಕಾರಣ ಇದು ಅಕ್ರಮ. ಇದು ಪರಸ್ಪರ ವಿಶ್ವಾಸದ ಮೇಲೆ ನಡೆಯುವ ವಹಿವಾಟಿನ ಮಾರುಕಟ್ಟೆ.

ಎಕ್ಸಿಟ್ ಪೋಲ್‌ಗಳು ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಒಲವು ತೋರುವ ಅಂಕಿಅಂಶಗಳು ಬಂದಿದೆ, ಇದರ ಜೊತೆಗೆ ಬೆಟ್ಟಿಂಗ್ ಮಾರುಕಟ್ಟೆ ಮತ್ತು ಸಟ್ಟಾ ಮಾರುಕಟ್ಟೆಗಳು ಬೆಳಿಗ್ಗೆಯಿಂದಲೇ ಕಾಂಗ್ರೆಸ್‌ಗೆ ಪರವಾಗಿ ನಿಂತಿವೆ. ಕಳೆದ ಚುನಾವಣೆಯಲ್ಲಿ ಭಾರತ್ ರಾಷ್ಟ್ರ ಸಮಿತಿಯ 99 ಸ್ಥಾನಗಳನ್ನು ಪಡೆದಿತ್ತು, ಕಾಂಗ್ರೆಸ್ ಕೇವಲ ಏಳು ಸ್ಥಾನಗಳಿಗೆ ತೃಪ್ತಿ ಪಟ್ಟಿತ್ತು. ಪರಿಸ್ಥಿತಿ ಹೀಗಿದ್ದರೂ ಸಟ್ಟಾ ಮಾರುಕಟ್ಟೆಯಲ್ಲಿ ಕಾಂಗ್ರೆಸ್ ಪರ ಹೆಚ್ಚು ಒಲವು ತೋರಿ ಬರುತ್ತಿದೆ.

ಎಕ್ಸಿಟ್ ಪೋಲ್ ನಲ್ಲಿ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಕಾಂಗ್ರೆಸ್‌ಗೆ 63-79 ಸ್ಥಾನಗಳನ್ನು ನೀಡಿದ್ದು, ಆಡಳಿತಾರೂಢ ಬಿಆರ್‌ಎಸ್‌ಗೆ 31-47 ಸ್ಥಾನಗಳನ್ನು ನೀಡಿದೆ. ಜನ್ ಕಿ ಬಾತ್ ಕಾಂಗ್ರೆಸ್‌ಗೆ 64 ಸ್ಥಾನಗಳನ್ನು ಮತ್ತು ಬಿಆರ್‌ಎಸ್‌ಗೆ 55 ಸ್ಥಾನಗಳನ್ನು ನೀಡಿದರೆ, ರಿಪಬ್ಲಿಕ್ ಮ್ಯಾಟ್ರಿಜ್ ಕಾಂಗ್ರೆಸ್ ಗೆ 68 ಸ್ಥಾನಗಳನ್ನು ಮತ್ತು ಬಿಆರ್ ಎಸ್ ಗೆ 56 ಸ್ಥಾನಗಳ ಗರಿಷ್ಠ ಮಿತಿಯನ್ನು ನಿಗದಿ ಪಡಿಸಿದೆ.

ತೆಲಂಗಾಣದಲ್ಲಿ ಬುಕ್ಕಿಗಳು ಕಾಂಗ್ರೆಸ್ ಪರವಾಗಿ 55 ಹಾಗೂ ಬಿಆರ್ ಎಸ್ ಗೆ 45 ಅವಕಾಶಗಳನ್ನು ನೀಡುತ್ತಿದ್ದಾರೆ. 1,000 ರೂಪಾಯಿ ಬೆಟ್ಟಿಂಗ್‌ ನಲ್ಲಿ, ಕಾಂಗ್ರೆಸ್ ಗೆದ್ದರೆ, 1,900 ರೂ. ಮತ್ತು ಬಿಆರ್‌ಎಸ್‌ ಗೆದ್ದರೆ 1,000 ರೂ.ಗೆ 2,100 ರೂ. ಬೆಟ್ಟಿಂಗ್ ನಡೆಯುತ್ತಿದೆ. ಸಟ್ಟಾ ಮಾರುಕಟ್ಟೆ ಕೂಡ ಕಾಂಗ್ರೆಸ್‌ ಪರ ಒಲವು ತೋರಿದ್ದು ಸುಮಾರು 11 ಅಂಕಗಳ ವ್ಯತ್ಯಾಸವಿದೆ.

ತೆಲಂಗಾಣದಲ್ಲಿ ಎರಡು ಅವಧಿಗೆ ಅಧಿಕಾರದಲ್ಲಿದ್ದ ಬಿಆರ್‌ಎಸ್ ಮತ್ತು 2018ರ ಚುನಾವಣೆಯಲ್ಲಿ ಬಿಆರ್‌ಎಸ್‌ ವಿರುದ್ಧ ಹೀನಾಯವಾಗಿ ಸೋತ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ತೆಲಂಗಾಣದಲ್ಲಿ 120 ಸದಸ್ಯರ ಸದನವಿದ್ದು, ಸರಳ ಗೆಲುವಿಗೆ 61 ಸ್ಥಾನಗಳ ಅಗತ್ಯವಿದೆ.

ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಖಾನ್ ಅವರು ತಮ್ಮ ಆಂತರಿಕ ಸಮೀಕ್ಷೆಗಳು ಕಾಂಗ್ರೆಸ್‌ಗೆ 63 ರಿಂದ 73 ಸ್ಥಾನಗಳನ್ನು ನೀಡುತ್ತಿವೆ, ಪಕ್ಷದ ಮತಗಳ ಪ್ರಮಾಣವು ಕನಿಷ್ಠ ಶೇಕಡಾ 43 ಕ್ಕೆ ಏರಿದೆ,  ಕಳೆದ ಬಾರಿಗಿಂತ ಹೆಚ್ಚಿದೆ ಎಂದಿದ್ದಾರೆ.

ತೆಲಂಗಾಣದಲ್ಲಿ ಇದು ಅತ್ಯಂತ ಕಠಿಣ ಹೋರಾಟವಾಗಿದ್ದು, ಡಿಸೆಂಬರ್ 3 ರಂದು ಕಾಂಗ್ರೆಸ್ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು. ದಿನದ ಆರಂಭದಲ್ಲಿ ಬೆಟ್ಟಿಂಗ್ ದೊಡ್ಡದಾಗಿರಲಿಲ್ಲ ಮತ್ತು ಮತದಾನ ಮುಕ್ತಾಯವಾಗುತ್ತಿದ್ದಂತೆ ಸಂಜೆಯ ನಂತರ ಹೆಚ್ಚಾಯಿತು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com