ಹಿಂದುತ್ವ ಬೇರೆ, ಹಿಂದೂ ಧರ್ಮ ಬೇರೆ: ವಿವಾದ ಸೃಷ್ಟಿಸಿದ ಸಿದ್ದರಾಮಯ್ಯ ಹೇಳಿಕೆ

ನನ್ನನ್ನು ಹಿಂದೂ ಧರ್ಮದ ವಿರೋಧಿ ಎಂದು ಹೇಳುತ್ತಾರೆ. ಆದರೆ, ನಾನು ಹಿಂದೂ ಧರ್ಮದ ವಿರೋಧಿಯಲ್ಲ. ನಾನೂ ಹಿಂದೂನೆ. ನಾನು ಮನುವಾದದ ವಿರೋಧಿ, ಹಿಂದುತ್ವದ ವಿರೋಧಿ. ಹಿಂದುತ್ವ ಬೇರೆ, ಹಿಂದೂ ಧರ್ಮ ಬೇರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದು, ಈ ಹೇಳಿಕೆ ವಿವಾದ ಹುಟ್ಟುಹಾಕಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ನನ್ನನ್ನು ಹಿಂದೂ ಧರ್ಮದ ವಿರೋಧಿ ಎಂದು ಹೇಳುತ್ತಾರೆ. ಆದರೆ, ನಾನು ಹಿಂದೂ ಧರ್ಮದ ವಿರೋಧಿಯಲ್ಲ. ನಾನೂ ಹಿಂದೂನೆ. ನಾನು ಮನುವಾದದ ವಿರೋಧಿ, ಹಿಂದುತ್ವದ ವಿರೋಧಿ. ಹಿಂದುತ್ವ ಬೇರೆ, ಹಿಂದೂ ಧರ್ಮ ಬೇರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದು, ಈ ಹೇಳಿಕೆ ವಿವಾದ ಹುಟ್ಟುಹಾಕಿದೆ.

ಮಾಜಿ ಶಾಸಕ ಬಿ.ಆರ್.ಪಾಟೀಲ್ ಅವರ ಜೀವನಕಥೆಯ ನಿರ್ಭಯ ಸಮಾಜವಾದದೆಡೆಗೆ ಎಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹಿಂದುತ್ವ ಸಂವಿಧಾನಕ್ಕೆ ವಿರುದ್ಧವಾಗಿದೆ, ಹಿಂದುತ್ವ ಮತ್ತು ಹಿಂದೂ ಧರ್ಮ ಬೇರೆ ಬೇರೆ, ನಾನು ಹಿಂದೂ ಧರ್ಮದ ವಿರೋಧಿಯಲ್ಲ, ನಾನು ಹಿಂದೂ. ಆದರೆ, ಮನುವಾದ ಮತ್ತು ಹಿಂದುತ್ವವನ್ನು ವಿರೋಧಿಸುತ್ತೇನೆಂದು ಹೇಳಿದರು.

"ಯಾವುದೇ ಧರ್ಮವು ಕೊಲೆ ಮತ್ತು ಹಿಂಸೆಯನ್ನು ಬೆಂಬಲಿಸುವುದಿಲ್ಲ ಆದರೆ ಹಿಂದುತ್ವ ಮತ್ತು ಮನುವಾದವು ಕೊಲೆ, ಹಿಂಸೆ ಮತ್ತು ತಾರತಮ್ಯವನ್ನು ಬೆಂಬಲಿಸುತ್ತದೆ" ಎಂದು ತಿಳಿಸಿದರು.

ಬಳಿಕ ರಾಜ್ಯದಲ್ಲಿ ಪದೇ ಪದೇ ಮೋದಿಯವರು ಪ್ರವಾಸ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಅಡುಗೆ ಮಾಡುತ್ತಿದ್ದೇವೆ. ಅವರು ಬಡಿಸೋಕೆ ಬರುತ್ತಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಾವು ಮಾಡಿದ ಕೆಲಸಗಳಿಗೆ ಅವರು ಚಾಲನೆ ನೀಡುತ್ತಿದ್ದಾರೆ. ಬಿಜೆಪಿಯಲ್ಲಿ ಯಾರದೂ ನಾಯಕತ್ವ ಇಲ್ಲ. ಬಿಜೆಪಿಯವರಿಗೆ ಮೋದಿಯವರೇ ಬಂಡವಾಳ ಎಂದು ಛೇಡಿಸಿದರು.

ನಂತರ ಕುಮಾರಸ್ವಾಮಿಯವರ ಹೇಳಿಕೆ ಕುರಿತು ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರು ಸಿಎಂ ಆಗುತ್ತಾರೆಂಬ ಕುಮಾರಸ್ವಾಮಿಯವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಸಿಎಂ ವಿಚಾರವನ್ನು ಆರ್'ಎಸ್ಎಸ್'ನವರು ತೀರ್ಮಾನ ಮಾಡುತ್ತಾರೆ. ಕುಮಾರಸ್ವಾಮಿ ಅಲ್ಲ. ಬಿಜೆಪಿ ಬಹುಮತ ಬಂದರೆ ಅಲ್ಲವೇ ತೀರ್ಮಾನ ಮಾಡೋದು? ರಾಜ್ಯದಲ್ಲಿ ಬಿಜೆಪಿಗೆ ಯಾವಾಗ ಬಹುಮತ ಬಂದಿದೆ ಹೇಳಿ? 2023ರಲ್ಲಿ ಬಿಜೆಪಿಗೆ 50ರಿಂದ 60 ಸೀಟ್ ಮಾತ್ರ ಬರಬಹುದು ಎಂದು ಭವಿಷ್ಯ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com