ಅಪ್ಪನ ಮಾತು ಕೇಳಿ ಜೆಡಿಎಸ್‌ ಸೇರಿದ್ದರೆ ಎಂಎಲ್‌ಎ, ಮಂತ್ರಿ ಆಗುತ್ತಿರಲಿಲ್ಲ: ಸಿಟಿ ರವಿ

ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ಅವರ ಅಭಿಮಾನಿಯಾಗಿದ್ದ ತಂದೆಯ ಸಲಹೆಯನ್ನು ಪಾಲಿಸಿದ್ದರೆ ಜೆಡಿಎಸ್ ವರಿಷ್ಠರು ಹಾಗೂ ಅವರ ಪುತ್ರರ ಕೊಂಡಾಡುವುದರಲ್ಲೇ ಜೀವನ ಮುಗಿಯುತ್ತಿತ್ತೇ ಹೊರತು ಎಂದಿಗೂ ಶಾಸಕ ಅಥವಾ ಸಚಿವನಾಗುತ್ತಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಸೋಮವಾರ ಹೇಳಿದ್ದಾರೆ.
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ಅವರ ಅಭಿಮಾನಿಯಾಗಿದ್ದ ತಂದೆಯ ಸಲಹೆಯನ್ನು ಪಾಲಿಸಿದ್ದರೆ ಜೆಡಿಎಸ್ ವರಿಷ್ಠರು ಹಾಗೂ ಅವರ ಪುತ್ರರ ಕೊಂಡಾಡುವುದರಲ್ಲೇ ಜೀವನ ಮುಗಿಯುತ್ತಿತ್ತೇ ಹೊರತು ಎಂದಿಗೂ ಶಾಸಕ ಅಥವಾ ಸಚಿವನಾಗುತ್ತಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಸೋಮವಾರ ಹೇಳಿದ್ದಾರೆ.

ಸೋಮವಾರ ಸದನದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮಂಡಿಸಿ ಮಾತನಾಡಿದ ಅವರು, ಬಿಜೆಪಿ ನನಗೆ ಭಾರತ್ ಮಾತಾ ಕಿ ಜೈ ಹೇಳುವುದನ್ನು ಕಲಿಸಿತು. ಸಾಮಾನ್ಯ ಕಾರ್ಯಕರ್ತನೊಬ್ಬ ಇಂದು ಏನಾದರೂ ಕೀರ್ತಿ ಗಳಿದ್ದಾನೆ ಎಂದರೆ ಅದಕ್ಕೆ ಜೆರಿ ನಡ್ಡಾ ನೇತೃತ್ವದ ಪಕ್ಷ ಕಾರಣ. ನನ್ನ ತಂದೆ ದೇವೇಗೌಡರ ಕಟ್ಟಾ ಅಭಿಮಾನಿಯಾಗಿದ್ದರು. ಅಪ್ಪನ ಮಾತನ್ನು ಪಾಲಿಸಿದ್ದರೆ ‘ದೊಡ್ಡಗೌಡರಿಗೆ, ಜೂನಿಯರ್ ಗೌಡ, ಮರೀಗೌಡರಿಗೆ ಜೈ ಎನ್ನುವುದನ್ನು ಕಲಿಯುತ್ತಿದ್ದೆ. ಆದರೆ, ಎಂದಿಗೂ ಶಾಸಕನಾಗಲೀ ಅಥವಾ ಸಚಿವನಾಗಲೀ ಆಗುತ್ತಿರಲಿಲ್ಲ ಎಂದು ಹೇಳಿದರು.

ನಾನು ನನ್ನ ತಂದೆಯ ಮಾತನ್ನು ಕೇಳದ ಕಾರಣ ಇಲ್ಲಿ (ಬಿಜೆಪಿಯಲ್ಲಿ) ನನಗೆ ಭಾರತ್ ಮಾತಾ ಕಿ ಜೈ ಎಂದು ಕಲಿಸಲಾಯಿತು ಮತ್ತು ಸಾಮಾನ್ಯ ಮಧ್ಯಮ ವರ್ಗದ ರೈತನ ಮಗನಾಗಿ ಇಂದು ನಾನು ಇಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ನಾಲ್ಕು ಬಾರಿ ಶಾಸಕರಾಗಿದ್ದೇನೆಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com