ವಿಧಾನಸೌಧದಲ್ಲಿ ಅನಧಿಕೃತ ಹಣ ಸಾಗಾಟ: ಎಲ್ಲಾ ಅಕ್ರಮಗಳಿಗೆ ಬೊಮ್ಮಾಯಿ ಶ್ರೀರಕ್ಷೆ- ಕಾಂಗ್ರೆಸ್ ಟೀಕೆ

ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಸಿಕ್ಕ 10 ಲಕ್ಷ ರೂ. ಅಕ್ರಮ ಹಣವು ಪೇ ಸಿಎಂ ವಸೂಲಿಗೆ ಸಾಕ್ಷಿಯಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಸಿಎಂ ಬೊಮ್ಮಾಯಿ ಸಾಂದರ್ಭಿಕ ಚಿತ್ರ
ಸಿಎಂ ಬೊಮ್ಮಾಯಿ ಸಾಂದರ್ಭಿಕ ಚಿತ್ರ

ಬೆಂಗಳೂರು: ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಸಿಕ್ಕ 10 ಲಕ್ಷ ರೂ. ಅಕ್ರಮ ಹಣವು ಪೇ ಸಿಎಂ ವಸೂಲಿಗೆ ಸಾಕ್ಷಿಯಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್,  ವಿಧಾನಸೌಧದವಷ್ಟೇ ಅಲ್ಲ, ಸಿಎಂ ಬೊಮ್ಮಾಯಿ ಕುರ್ಚಿಯ ಅಡಿಯಲ್ಲೇ ಹವಾಲಾ ದಂಧೆ, ಕಮಿಷನ್ ಲೂಟಿ, ಹಫ್ತಾ ವಸೂಲಿ ನಡೆಯುತ್ತಿದ್ದರೂ ಬೊಮ್ಮಾಯಿ ಅರಿವಿಗೆ ಬಂದಿಲ್ಲ ಎಂದೇನೂ ಇಲ್ಲ. ಅವರ ಶ್ರೀರಕ್ಷೆಯಲ್ಲೇ ಎಲ್ಲಾ ಅಕ್ರಮಗಳು ನಡೆಯುತ್ತಿವೆ ಎಂದು ಅಪಾದಿಸಿದೆ.

ಜಗದೀಶ್ ನಿನ್ನೆ ಸಂಜೆ 5.30 ಸುಮಾರಿಗೆ 10 ಲಕ್ಷದೊಂದಿಗೆ ವಿಧಾನಸೌಧಕ್ಕೆ ಬಂದಾಗ ಸಚಿವ ಸಿಸಿ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿರುತ್ತಾರೆ. ಸಚಿವರ ಹೊರತಾಗಿ ವಿಧಾನಸೌಧದ ಕೆಲಸದ ಅವಧಿ ಮುಗಿದು ಬಹುತೇಕ ಖಾಲಿಯಾಗಿರುತ್ತದೆ.

ಈ ಹಣಕ್ಕೂ, ಆ ಸಚಿವರಿಗೂ ಸಂಬಂಧವಿದೆಯೇ? ಸರ್ಕಾರ ರಹಸ್ಯ ಕಾಪಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದೆ.

ಮತ್ತೊಂದೆಡೆ ರಾಜ್ಯದ ಪಡಿತರ ಚೀಟಿದಾರರಿಗೆ ಉಚಿತವಾಗಿ ನೀಡಲಾಗುತ್ತಿದ್ದ 10 ಕೆಜಿ ಅಕ್ಕಿಯಲ್ಲಿ ಮುಂದಿನ ತಿಂಗಳಿನಿಂದ 4 ಕೆಜಿ ಕಡಿತ ಮಾಡುತ್ತಿರುವುದಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಕಾಂಗ್ರೆಸ್ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆಯ 5 ಕೆಜಿ ಅಕ್ಕಿಯನ್ನು ಹೊರತುಪಡಿಸಿ ಉಳಿದ 5 ಕೆಜಿ ಅಕ್ಕಿಯನ್ನು ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ ಬಡವರ ಹಸಿದ ಹೊಟ್ಟೆಯನ್ನು ಅಣಕಿಸುತ್ತಿದೆ. ಒಟ್ಟು 10 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 6 ಕೆಜಿಗೆ ಇಳಿಸಿದ ಸರ್ಕಾರ ಬಡವರ ಹೊಟ್ಟೆಗೆ ಹೊಡೆದಿದೆ ಎಂದು ಟೀಕಾ ಪ್ರಹಾರ ನಡೆಸಿದೆ.

ಶ್ರೀಮಂತ ಉದ್ಯಮಿಗಳ 10 ಲಕ್ಷ ಕೋಟಿಯನ್ನು ಮನ್ನಾ ಮಾಡುವ ಸರ್ಕಾರಕ್ಕೆ ಬಡವರಿಗೆ ನೀಡುವ ಅಕ್ಕಿ ಹೊರೆ ಆಯ್ತೇ? ಎಂದು ಪ್ರಶ್ನಿಸಿದ್ದು,  ಬಿಜೆಪಿಯದ್ದು ದಾಸೋಹ ತತ್ವವಲ್ಲ ಅಲ್ಲ "ಗುಳುಂ ಸ್ವಾಹಾ"ದ ತತ್ವವಾಗಿದೆ. ಅನ್ನಭಾಗ್ಯದ ಅಕ್ಕಿ ಮೋದಿಯದ್ದು ಎಂಬ ಸುಳ್ಳು ಪೋಣಿಸುವ ರಾಜ್ಯ ಬಿಜೆಪಿ, ಅನ್ನ ಹಾಕುವ ಬದಲು ಕನ್ನ ಹಾಕುತ್ತಿದೆ ಎಂದು ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com