ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ವಿಪಕ್ಷ ನಾಯಕರ ಸಭೆ: ಜುಲೈ 17ರಂದು ಸಿಎಂ ಔತಣಕೂಟ ಏರ್ಪಾಡು

ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಭಾರೀ ಸ್ಪರ್ಧೆಯೊಡ್ಡಲು ಪರ್ಯಾಯ ಶಕ್ತಿ ರಚಿಸಲು ವಿಪಕ್ಷಗಳೆಲ್ಲಾ ಒಗ್ಗೂಡಲು ಮುಂದೆ ಬಂದಿದ್ದು ಎಲ್ಲಾ ಪ್ರತಿಪಕ್ಷ ನಾಯಕರುಗಳ ಎರಡನೇ ಸುತ್ತಿನ ಸಭೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ಪಾಟ್ನಾದಲ್ಲಿ ನಡೆದ ವಿಪಕ್ಷ ನಾಯಕರ ಸಭೆಯ ಸಂಗ್ರಹ ಚಿತ್ರ
ಪಾಟ್ನಾದಲ್ಲಿ ನಡೆದ ವಿಪಕ್ಷ ನಾಯಕರ ಸಭೆಯ ಸಂಗ್ರಹ ಚಿತ್ರ

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಭಾರೀ ಸ್ಪರ್ಧೆಯೊಡ್ಡಲು ಪರ್ಯಾಯ ಶಕ್ತಿ ರಚಿಸಲು ವಿಪಕ್ಷಗಳೆಲ್ಲಾ ಒಗ್ಗೂಡಲು ಮುಂದೆ ಬಂದಿದ್ದು ಎಲ್ಲಾ ಪ್ರತಿಪಕ್ಷ ನಾಯಕರುಗಳ ಎರಡನೇ ಸುತ್ತಿನ ಸಭೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಸುಮಾರು 80 ಮಂದಿ ವಿರೋಧ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದು ಜುಲೈ 17ರಂದು ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಔತಣಕೂಟ ಏರ್ಪಡಿಸಿದ್ದಾರೆ ಎಂದು ತಿಳಿದುಬರುತ್ತಿದೆ.

ಆರಂಭದಲ್ಲಿ ಜುಲೈ 13 ಮತ್ತು 14ರಂದು ಸಭೆ ದಿನಾಂಕಗಳು ನಿಗದಿಯಾಗಿದ್ದವು. ಆದರೆ ಅದನ್ನು ಮುಂದೂಡಿ ಇದೀಗ ಜುಲೈ 17 ಮತ್ತು 18ರಂದು ಬೆಂಗಳೂರಿನಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com