ಪ್ರತಿಪಕ್ಷಗಳು ಗೊಂದಲ ಸೃಷ್ಟಿಸಬೇಡಿ; 'ಗ್ಯಾರಂಟಿ' ಜಾರಿಗೆ ಸಮಯ ಕೊಡಿ: ಬಿಜೆಪಿ ಎಂಎಲ್ ಸಿ ವಿಶ್ವನಾಥ್
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಮಯಾವಕಾಶ ನೀಡಬೇಕೆಂದು ಬಿಜೆಪಿ ಎಂಎಲ್ ಸಿ ಎಚ್. ವಿಶ್ವನಾಥ್ ಹೇಳಿದ್ದಾರೆ.
Published: 01st June 2023 09:58 AM | Last Updated: 02nd June 2023 07:30 PM | A+A A-

ಎಚ್. ವಿಶ್ವನಾಥ್
ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಮಯಾವಕಾಶ ನೀಡಬೇಕೆಂದು ಬಿಜೆಪಿ ಎಂಎಲ್ ಸಿ ಎಚ್. ವಿಶ್ವನಾಥ್ ಹೇಳಿದ್ದಾರೆ.
ಒಂದೆಡೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಬಿಜೆಪಿ ಒತ್ತಡ ಹೇರುತ್ತಿದೆ. ಮತ್ತೊಂದೆಡೆ, ಪ್ರತಿಪಕ್ಷಗಳು ಯಾವುದೇ ಗೊಂದಲವನ್ನು ಸೃಷ್ಟಿಸಬಾರದು, ಕಾಂಗ್ರೆಸ್ ಸರ್ಕಾರ ತನ್ನ ಕೆಲಸವನ್ನು ಮಾಡಲು ಬಿಡಬೇಕು ಎಂದು ಹೇಳುವ ಮೂಲಕ ಬಿಜೆಪಿ ಎಂಎಲ್ ಸಿ ಎಚ್ ವಿಶ್ವನಾಥ್ ಹೇಳಿಕೆ ಸಂಚಲನ ಮೂಡಿಸಿದೆ.
ಈ ಯೋಜನೆಗಳನ್ನು ಹೊರತರುವ ಮೊದಲು ಕೆಲವು ನಿಯಮ ಹಾಗೂ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ನಾವು ಶಾಂತವಾಗಿರೋಣ ಮತ್ತು ಅವರು ನೀಡಿದ ಭರವಸೆಗಳನ್ನು ಕಾರ್ಯಗತಗೊಳಿಸಲು ಅವಕಾಶ ಮಾಡಿಕೊಡೋಣ ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: ವರುಣಾದಲ್ಲಿ ಸಿದ್ದರಾಮಯ್ಯ ಸೋಲಿಸಲು ಬಿಜೆಪಿಯಿಂದ ದೊಡ್ಡ ಪಿತೂರಿ: ಎಂಎಲ್'ಸಿ ವಿಶ್ವನಾಥ್
ಎಪ್ಪತ್ತರ ದಶಕದಲ್ಲಿ ಕೂಡ ಇಂದಿನಂತೆಯ ಹಲವು ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತು. ಟಿ ನರಸೀಪುರದಲ್ಲಿ ಕಾಂಗ್ರೆಸ್ ನ ರಾಚಯ್ಯ ಅವರು ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದರು. ಅದು ಭವಿಷ್ಯದಲ್ಲಿ ಅತ್ಯಂತ ದೊಡ್ಡ ಕಲ್ಯಾಣ ಯೋಜನೆಯಾಗಿ ಮಾರ್ಪಟ್ಟಿತು. ನಂತರ ರಾಚಯ್ಯ ಚಿವರಾಗಿ ಮತ್ತು ನಂತರ ರಾಜ್ಯಪಾಲರಾಗಿ ಕೆಲಸ ಮಾಡಿದರು ಎಂದು ವಿಶ್ವನಾಥ್ ಸ್ಮರಿಸಿದರು.
ಕೇಂದ್ರ ಸರ್ಕಾರವು ಅಂಗನವಾಡಿ ಯೋಜನೆಯಿಂದ ಪ್ರಭಾವಿತವಾಗಿತ್ತು, ಆಗಿನ ಪ್ರಧಾನಿ ಇಂದಿರಾಗಾಂಧಿ ಇದನ್ನು 1975 ರಲ್ಲಿ ಜಾರಿಗೆ ತಂದರು ಎಂದು ತಿಳಿಸಿದರು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯಶಸ್ವಿನಿ ಆರೋಗ್ಯ ಯೋಜನೆಯ ಕಾಂಗ್ರೆಸ್ ಸರ್ಕಾರದ ಕನಸಿನ ಕೂಸು, ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿರುವ ವಿಶ್ವನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಎಂಎಲ್ ಸಿ ಹುದ್ದೆ ಕಳೆದುಕೊಳ್ಳುವ ಭೀತಿ: ಮರಳಿ ಗೂಡು ಸೇರುವ ನಿರ್ಧಾರ 'ಕೈ' ಬಿಟ್ಟ 'ಹಳ್ಳಿ ಹಕ್ಕಿ'
ಮಕ್ಕಳ ಶಾಲಾ ಮತ್ತು ಕಾಲೇಜು ಶುಲ್ಕಗಳು ಹಾಗೂ ಆರೋಗ್ಯ ಸೇವೆ ಜನರಿಗೆ ಹೆಚ್ಚಿನ ವೆಚ್ಚದ ಹೊರೆಯಾಗಿದೆ. ಹೀಗಾಗಿ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಕೈಗೆಟಕುವ ದರದಲ್ಲಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದ್ದಾರೆ.
ರೈತರನ್ನು ನೇರವಾಗಿ ಬಾಧಿಸುವ ನಕಲಿ ಬೀಜಗಳು, ಕೀಟನಾಶಕಗಳು ಮತ್ತು ರಸಗೊಬ್ಬರಗಳ ಹಾವಳಿ ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು, ರೈತರಿಗೆ ಸಬ್ಸಿಡಿ ಸಹಿತ ಸಾಲ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಸರ್ಕಾರದ ಭರವಸೆಗಳು ಬೆಳವಣಿಗೆ ಮತ್ತು ಅಭಿವೃದ್ಧಿಯ ಗುರಿಯನ್ನು ಹೊಂದಿರುವ ಕಲ್ಯಾಣ ಕ್ರಮಗಳಾಗಿವೆ ಹೀಗಾಗಿ ಇವನ್ನು ಪ್ರೋತ್ಸಾಹಿಸಬೇಕು ಎಂದು ಅರ್ಥಶಾಸ್ತ್ರಜ್ಞ ಡಾ.ನರೇಂದರ್ ಪಾಣಿ ಹೇಳಿದ್ದಾರೆ. ಇವು ಉಚಿತ ಮಾತ್ರವಲ್ಲ ಜನರ ಅತ್ಯಗತ್ಯಗಳು ಎಂದಿದ್ದಾರೆ.
ಇದನ್ನೂ ಓದಿ: ಮೈಸೂರು: ಬಿಜೆಪಿ ಸರ್ಕಾರ ಬರಲು ಕಾರಣವಾಗಿದ್ದಕ್ಕೆ ಎಚ್.ವಿಶ್ವನಾಥ್ 'ಪಶ್ಚಾತಾಪ ಸತ್ಯಾಗ್ರಹ'
ಶ್ರೀಮಂತ ಕೈಗಾರಿಕೋದ್ಯಮಿಗಳು ಅಥವಾ ಐಟಿ ವಲಯದವರು ಮಾರುಕಟ್ಟೆ ಮೌಲ್ಯದಲ್ಲಿ ಭೂಮಿ ಖರೀದಿಸಲು ಸಮರ್ಥರಾಗಿದ್ದಾಗಲೂ ಅವರಿಗೆ ಭೂಮಿಯನ್ನು ಫ್ರೀಯಾಗಿ ನೀಡುವುದು ನಿಜವಾದ ಉಚಿತ ಭಾಗ್ಯಗಳು. ನಿರುದ್ಯೋಗಿಗಳಿಗೆ ಆಹಾರ ಮತ್ತು ದುಡ್ಡು ನೀಡುವುದನ್ನು ಟೀಕಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ.