ಒಕ್ಕಲಿಗ ನಾಯಕರ ಮುಸುಕಿನ ಗುದ್ದಾಟ: ಸಭೆಗೆ ತಡವಾಗಿ ಬಂದ ಡಿಕೆಶಿ; ಆಕ್ರೋಶಗೊಂಡು ಹೊರನಡೆದ ಅಶ್ವತ್ಥನಾರಾಯಣ!

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅಶ್ವತ್ಥ ನಾರಾಯಣ, ನನ್ನ ಜೊತೆಗೆ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಎನ್.ಮುನಿರಾಜು ಸೇರಿದಂತೆ ಬಿಜೆಪಿ ಮುಖಂಡರು ಹೊರನಡೆದರು ಎಂದು ಮಾಹಿತಿ ನೀಡಿದರು.
ಅಶ್ವತ್ಥನಾರಾಯಣ ಮತ್ತು ಡಿ.ಕೆ ಶಿವಕುಮಾರ್
ಅಶ್ವತ್ಥನಾರಾಯಣ ಮತ್ತು ಡಿ.ಕೆ ಶಿವಕುಮಾರ್

ಬೆಂಗಳೂರು: ನಗರದಲ್ಲಿ ಮಳೆಹಾನಿ ತಡೆಗೆ ಮುನ್ನೆಚ್ಚರಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ವಿಧಾನಸೌಧದಲ್ಲಿ ಕರೆದಿದ್ದ ಸಭೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಡವಾಗಿ ಬಂದಿದ್ದರಿಂದ ಅಸಮಾಧಾನಗೊಂಡು ಸಭೆಯಿಂದ ಹೊರ ಬಂದಿದ್ದಾಗಿ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅಶ್ವತ್ಥ ನಾರಾಯಣ, ನನ್ನ ಜೊತೆಗೆ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಎನ್.ಮುನಿರಾಜು ಸೇರಿದಂತೆ ಬಿಜೆಪಿ ಮುಖಂಡರು ಹೊರನಡೆದರು ಎಂದು ಮಾಹಿತಿ ನೀಡಿದರು.

ಒಕ್ಕಲಿಗ ನಾಯಕರಾದ ಶಿವಕುಮಾರ್ ಮತ್ತು ಅಶ್ವಥ್ ನಾರಾಯಣ್ ನಡುವಿನ ಭಿನ್ನಾಭಿಪ್ರಾಯದ ಮುಂದುವರಿದಿದೆ. ಚುನಾವಣೆಗೂ ಮುನ್ನ ಅಶ್ವಥ್ ನಾರಾಯಣ್ ಹೇಳಿಕೆಗೆ ಸಂಸದ ಹಾಗೂ ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಸಾರ್ವಜನಿಕ ಸಮಾರಂಭವೊಂದರಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಾಂಸಕ್ಕಾಗಿ ಎಮ್ಮೆಗಳನ್ನು ಕೊಂದರೆ ಗೋಹತ್ಯೆ ತಪ್ಪಲ್ಲ ಎಂಬ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗೋವು ಕಾಮಧೇನು, ಹಸುವನ್ನು ಹೇಗೆ ಕೊಲ್ಲುವುದು? ಇತರ ಸಮುದಾಯಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದನ್ನು ಮುಖ್ಯವೆಂದು ಒಪ್ಪಿಕೊಳ್ಳಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ಸರ್ಕಾರ ಹನಿಮೂನ್ ಪೀರಿಯಡ್ ನಲ್ಲಿದೆ. ಅವರು ತಮ್ಮ ಕಾರ್ಯಕ್ರಮಗಳು ಮತ್ತು ನೀತಿಗಳೊಂದಿಗೆ ಸೆಟಲ್ ಆಗಲಿ, ನಂತರ ನಾವು ಪ್ರತಿಕ್ರಿಯಿಸುತ್ತೇವೆ. ನಾವು ಗೋಹತ್ಯೆ ವಿಚಾರದಲ್ಲಿ ಪ್ರತಿಭಟನೆ ನಡೆಸಿದ್ದೇವೆ. ನಾಳೆ, ಫ್ರೀಡಂ ಪಾರ್ಕ್‌ನಲ್ಲಿ, ಚುನಾಯಿತ ಸದಸ್ಯರು ಮತ್ತು ಇತರರು ಪ್ರಮುಖ ವಿಷಯಗಳ ಕುರಿತು ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಜೆಪಿಯ ಚುನಾವಣಾ ಸೋಲಿನ ಬಗ್ಗೆ ಸಾರ್ವಜನಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಪಕ್ಷವು 150 ಸ್ಥಾನಗಳೊಂದಿಗೆ ಹಿಂತಿರುಗುತ್ತದೆ ಏಕೆಂದರೆ ಕಾಂಗ್ರೆಸ್ ತನ್ನನ್ನು ತಾನೇ ನಾಶಪಡಿಸಿಕೊಳ್ಳುತ್ತದೆ ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಗೆ  ಬಿಜೆಪಿ, ಪ್ರಧಾನಿ ಮೋದಿ ಅಂಶವನ್ನು ಅವಲಂಬಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಮೋದಿ ಅವರು ಸರ್ವೋಚ್ಚ ನಾಯಕರಾಗಿದ್ದಾರೆ ಎಂದರು.

ಸಚಿವರಾದ ಗೋವಿಂದ್ ಕಾರಜೋಳ, ಬಿ ಶ್ರೀರಾಮುಲು, ಜೆಸಿ ಮಧು ಸ್ವಾಮಿ, ಬಿ.ಸಿ.ನಾಗೇಶ್, ವಿ.ಸೋಮಣ್ಣ ಸೇರಿದಂತೆ ಇತರ ಸಚಿವರು ಸೋಲಿನ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬಿಜೆಪಿಗೆ ಪ್ರಬಲ ಬೆಂಬಲವಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ 20-25 ರಷ್ಟು ಕುಸಿದಿರುವ ಲಿಂಗಾಯತ ಬೆಂಬಲಕ್ಕಿಂತ ಹಿಂದುತ್ವದ ಮೇಲೆ ಬಿಜೆಪಿ ಹೆಚ್ಚು ಗಮನಹರಿಸುತ್ತಿದೆಯೇ ಎಂಬ ಪ್ರಶ್ನೆಗೆ, ಉತ್ತರಿಸಿದ ಅಶ್ವತ್ಥ ನಾರಾಯಣ "ಬಿಜೆಪಿ ಅಭಿವೃದ್ಧಿ, ರಾಷ್ಟ್ರೀಯತೆ ಮತ್ತು ಉತ್ತಮ ಆಡಳಿತಕ್ಕೆ ಒತ್ತು ನೀಡುತ್ತದೆ. ನಮ್ಮದು ಎಲ್ಲರನ್ನೂ ಒಳಗೊಳ್ಳುವ ಪಕ್ಷ, ಒಡೆದುಹಾಕುವ ಪಕ್ಷವಲ್ಲ. ನಾವು. ಜಾತಿ ಮತ್ತು ಸಮುದಾಯದ ಸಮೀಕರಣಗಳಿಗೆ ಟ್ಯೂನ್ ಆಗಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com