ಕಲಬುರಗಿ: ಅಫಜಲಪುರದಲ್ಲಿ ಟಿಕೆಟ್‌ಗಾಗಿ ಗುತ್ತೇದಾರ್ ಸಹೋದರರ ಪೈಪೋಟಿ!

ಅಫಜಲಪುರ ತಾಲೂಕಿನ ಬಿಜೆಪಿ ಮುಖಂಡರ ನಡುವೆ ಬಿರುಕು ಕಾಣಿಸಿಕೊಂಡಿದೆ. ನಿತಿನ್ ಗುತ್ತೇದಾರ್ ಮತ್ತು ಸತೀಶ್ ಗುತ್ತೇದಾರ್ ನೇತೃತ್ವದ ಬಿಜೆಪಿ ಬಣ, ಅವರ ಹಿರಿಯ ಸಹೋದರ ಮತ್ತು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. 
ಸಿದ್ದರಾಮಯ್ಯ ಜೊತೆಯಲ್ಲಿರುವ ಮಾಲೀಕಯ್ಯ ಗುತ್ತೇದಾರ್
ಸಿದ್ದರಾಮಯ್ಯ ಜೊತೆಯಲ್ಲಿರುವ ಮಾಲೀಕಯ್ಯ ಗುತ್ತೇದಾರ್

ಕಲಬುರಗಿ: ಅಫಜಲಪುರ ತಾಲೂಕಿನ ಬಿಜೆಪಿ ಮುಖಂಡರ ನಡುವೆ ಬಿರುಕು ಕಾಣಿಸಿಕೊಂಡಿದೆ. ನಿತಿನ್ ಗುತ್ತೇದಾರ್ ಮತ್ತು ಸತೀಶ್ ಗುತ್ತೇದಾರ್ ನೇತೃತ್ವದ ಬಿಜೆಪಿ ಬಣ, ಅವರ ಹಿರಿಯ ಸಹೋದರ ಮತ್ತು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. 

ನಿತಿನ್ ಮತ್ತು ಮಾಲೀಕಯ್ಯ ಅಫಜಲಪುರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಒಂದೆಡೆ ಟಿಕೆಟ್ ಪಡೆಯಲು ಬೇಕಾದ ಅನುಭವ ಮತ್ತು ಪರಿಣಿತಿ ನನಗಿದೆ ಎಂದು ಮಾಲೀಕಯ್ಯ ಹೇಳಿಕೊಂಡಿದ್ದಾರೆ. ಒಂದು ವೇಳೆ ನನಗೆ ಟಿಕೆಟ್ ನೀಡಿದರೆ ನಿತಿನ್ ಹಾಗೂ ಬಿಜೆಪಿಯ ಎಲ್ಲ ಕಾರ್ಯಕರ್ತರು ಬೆಂಬಲಿಸಬೇಕು ಎಂದಿದ್ದಾರೆ.

<strong>ಸುದ್ದಿಗೋಷ್ಠಿಯಲ್ಲಿ ನಿತೀನ್ ಗುತ್ತೇದಾರ್</strong>
ಸುದ್ದಿಗೋಷ್ಠಿಯಲ್ಲಿ ನಿತೀನ್ ಗುತ್ತೇದಾರ್

ಮತ್ತೊಂದೆಡೆ ಗುರುವಾರ ಕಲಬುರಗಿಯಲ್ಲಿ ನಿತಿನ್ ಮತ್ತು ಸತೀಶ್ ಸಭೆ ನಡೆಸಿದ ನಿತಿನ್, 2018 ರ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಮುಂದಿನ ಬಾರಿ ಟಿಕೆಟ್ ಸಿಗುತ್ತದೆ ಎಂದು ಮಾಲೀಕಯ್ಯ ತನಗೆ ಭರವಸೆ ನೀಡಿದ್ದರು. "ನನ್ನ ಅಣ್ಣ ತನ್ನ ಮಾತನ್ನು ಉಳಿಸಿಕೊಳ್ಳಬೇಕು" ಎಂದು ಅವರು ಹೇಳಿದರು. ಮಾಲೀಕಯ್ಯ ಹೊರತುಪಡಿಸಿ ಗುತ್ತೇದಾರ್ ಕುಟುಂಬದ ಸದಸ್ಯರು ಕಲಬುರಗಿ ಜಿಪಂ ಅಧ್ಯಕ್ಷರಾಗಿದ್ದ ನಿತಿನ್ ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ನಿತಿನ್ ಮತ್ತು ಸತೀಶ್ ಹೇಳಿದರು.

ಬಿಜೆಪಿ ಹೈಕಮಾಂಡ್ ನಮ್ಮ ಬೇಡಿಕೆ ನಿರ್ಲಕ್ಷಿಸಿದರೆ, ಗುತ್ತೇದಾರ್ ಕುಟುಂಬದ 5,000 ಕ್ಕೂ ಹೆಚ್ಚು ಬೆಂಬಲಿಗರು ಮತ್ತೊಮ್ಮೆ ಸಭೆ ಸೇರಿ, ಸ್ವತಂತ್ರ ಅಭ್ಯರ್ಥಿಯಾಗಿ ನಿತಿನ್ ಅವರನ್ನು ಕಣಕ್ಕಿಳಿಸುವ ಬಗ್ಗೆ ನಿರ್ಧರಿಸುತ್ತಾರೆ ಎಂದು ಸತೀಶ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com