ಬಿಜೆಪಿ ಶಾಸಕ ಮಾಡಾಳ್ ಭ್ರಷ್ಟಾಚಾರ ಪ್ರಕರಣ ಕುರಿತು ಮೌನವೇಕೆ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ರಾಜ್ಯಕ್ಕೆ ಭೇಟಿ ನೀಡಿದ್ದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಸರಣಿ ಟ್ವೀಟ್‌ ಗಳ ಮೂಲಕ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಯುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್‌ಗಳ ಮೂಲಕ ಪ್ರಧಾನಿ ಮೋದಿಯವರಿಗೆ ಹಲವು ಪ್ರಶ್ನೆಗಳನ್ನು ಕೇಳಿ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ರಾಜ್ಯಕ್ಕೆ ಭೇಟಿ ನೀಡಿದ್ದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಸರಣಿ ಟ್ವೀಟ್‌ ಗಳ ಮೂಲಕ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಯುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್‌ಗಳ ಮೂಲಕ ಪ್ರಧಾನಿ ಮೋದಿಯವರಿಗೆ ಹಲವು ಪ್ರಶ್ನೆಗಳನ್ನು ಕೇಳಿ ವಾಗ್ದಾಳಿ ನಡೆಸಿದ್ದಾರೆ.

ಮೋದಿಯವರಿಗೆ ಹಲವು ಕೇಳಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಜೊತೆಗೆ ಉತ್ತರ ಕೊಡಿ ಮೋದಿ ಎಂಬ ಹ್ಯಾಶ್‌ಟ್ಯಾಗ್‌ ಆರಂಭಿಸಿದ್ದಾರೆ.

  • ಅತಿ ಆಪ್ತರಾದ ಅದಾನಿ, ಅಂಬಾನಿ, ಧಮಾನಿ ಮತ್ತಿತರ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಿರಿ. ದಿಲ್ಲಿಯಲ್ಲಿ ರೈತರ ವೀರೋಚಿತ ಹೋರಾಟಕ್ಕೆ ಮಣಿದು ತಿದ್ದುಪಡಿ ಹಿಂಪಡೆದಿರಿ. ಆದರೆ, ಕರ್ನಾಟಕದಲ್ಲಿಈ ಮನೆಹಾಳು ಕಾಯಿದೆ ಉಳಿಸಿದ್ದೀರಿ ಏಕೆ?
  • ಪ್ರತಿ ಕ್ವಿಂಟಾಲ್‌ಗೆ 18,000ರಿಂದ 20,000 ರೂ.ಗೆ ಮಾರಾಟವಾಗುತ್ತಿದ್ದ ಕೊಬ್ಬರಿ 9,000ಕ್ಕೆ ಕುಸಿದಿದೆ. ನೀವು ಮೌನವಾಗಿದ್ದೀರಿ. ತೆಂಗು ಬೆಳೆಗಾರರ ಸಂಕಷ್ಟಕ್ಕೆ ನೀವು ಎಪಿಎಂಸಿ ದುರ್ಬಲಗೊಳಿಸಿದ್ದು ಕಾರಣ ಅಲ್ಲವೆ?
  • ಮಂಡ್ಯ, ಮೈಸೂರಿನ ಕೆಲವು ಕಡೆ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ರೈತರು ವ್ಯಾಪಕವಾಗಿ ಅರಿಶಿಣ ಬೆಳೆಯುತ್ತಾರೆ. ಬೆಂಬಲ ಬೆಲೆ ಇಲ್ಲದೆ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
  • ರಾಜ್ಯದಲ್ಲಿ9 ಲಕ್ಷ ರೈತರು ಲಕ್ಷಾಂತರ ಎಕರೆಯಲ್ಲಿಅಡಕೆ ಬೆಳೆಯುತ್ತಿದ್ದಾರೆ. ಕೆಲವು ತಿಂಗಳ ಹಿಂದೆ 60,000 ರೂ.ಗೆ ಕ್ವಿಂಟಾಲ್‌ ಅಡಿಕೆ ಮಾರಾಟವಾಗುತ್ತಿತ್ತು. ಈಗ 40,000 ರೂ. ಕುಸಿದಿದೆ. ಅಡಕೆ ಬೆಳೆಯುವ ಜಿಲ್ಲೆಗಳ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ನಿಮ್ಮ ಬಿಜೆಪಿ ಸರಕಾರ ತಂದೊಡ್ಡಿದೆ. ನಿಮ್ಮ ಸರಕಾರಗಳಿಂದ ಇದುವರೆಗೆ ಅಡಿಕೆ ಬೆಳೆಗೆ ಬಂದಿರುವ ಹಳದಿ ರೋಗ, ಎಲೆಚುಕ್ಕಿ ರೋಗಕ್ಕೆ ಔಷಧ ಕಂಡುಹಿಡಿಯಲಾಗಿಲ್ಲ. ಅಡಕೆ ಬೆಳೆಗಾರರ ಸಂಕಷ್ಟಕ್ಕೆ ನೀವು ನೇರವಾಗಿ ಕಾರಣ ಅಲ್ಲವೆ?
  • ನಿಮ್ಮ ಪಕ್ಷದ ಮಾಡಾಳ್‌ ವಿರೂಪಾಕ್ಷಪ್ಪ ಮನೆಯಲ್ಲಿ8 ಕೋಟಿ ರೂ.ಗೂ ಹೆಚ್ಚು ಹಣ ಒಂದೇ ಕಂತಿನಲ್ಲಿಸಿಕ್ಕಿದೆ. ಒಬ್ಬ ಎಂಎಲ್ಎ ಬಳಿ ಇಷ್ಟೊಂದು ಹಣ ಸಿಕ್ಕಿದೆಧಿಯೆಂದರೆ ಇನ್ನು ಸಚಿವರ ಬಳಿ ಎಷ್ಟು ಇರಬಹುದು? 40 ಪರ್ಸೆಂಟ್‌ ಭ್ರಷ್ಟಾಚಾರಕ್ಕೆ ಇದಕ್ಕಿಂತ ಉತ್ತಮ ಉದಾಧಿಹರಣೆ ಬೇಕೆ? ನಿಮ್ಮ ಸಿಬಿಐ, ಇಡಿಗಳು ಏನು ಮಾಡುತ್ತಿವೆ?
  • ಕಬ್ಬಿನ ಎಫ್‌ಆರ್‌ಪಿ ದರ ಟನ್‌ಗೆ 3,000 ರೂ. ನಿಗದಿಯಾಗಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ಟನ್‌ ಕಬ್ಬಿನಿಂದ 6,500 ರೂ.ಗೂ ಹೆಚ್ಚು ಸಂಪಾದಿಸುತ್ತಿವೆ. ಅವುಗಳ ಲಾಭದಲ್ಲಿರೈತರಿಗೆ ಪಾಲಿಲ್ಲ. ಕಬ್ಬು ಬೆಳೆಯುವ ರೈತರೂ ಸಂಕಷ್ಟದ ಬಗ್ಗೆಯೂ ತುಟಿಬಿಚ್ಚುತ್ತೀರಾ?
  • ನಿಮ್ಮ ಸರಕಾರಗಳ ಕಾರ್ಪೊರೇಟ್‌ ಪರ ನೀತಿಯಿಂದ ಗುಜರಾತ್‌ನಲ್ಲಿಅಮುಲ್‌ ಸಂಸ್ಥೆಯನ್ನು ರೈತರಿಂದ ದೂರ ಮಾಡಿ ಹಾಳು ಮಾಡುತ್ತಿದ್ದೀರಿ. ಈಗ, ಕೆಎಂಎಫ್‌ ಅನ್ನೂ ಕಾರ್ಪೊರೇಟ್‌ ಹಿತಾಸಕ್ತಿಗಳ ನಿಯಂತ್ರಣಕ್ಕೆ ಕೊಡುವ ಹುನ್ನಾರ ನಡೆಸುತ್ತಿದ್ದೀರಿ. ಈ ಬಗ್ಗೆ ಉತ್ತರ ಕೊಡಿ ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com