ಮಹಿಳೆಯ ಅಳಲಿಗೆ ಸ್ಪಂದಿಸದ, ಕಾಮನ್ ಸೆನ್ಸ್ ಇಲ್ಲದ ಸಿಎಂ ಬೊಮ್ಮಾಯಿ- ಕಾಂಗ್ರೆಸ್ ಟೀಕೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನಿವಾಸದ ಬಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ವೇಳೆ ಮಹಿಳೆಯೊಬ್ಬರ ಅಳುವನ್ನು ಕೇಳಿಸಿದರೂ ಕೇಳಿಸದಂತೆ ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
Published: 17th March 2023 03:55 PM | Last Updated: 17th March 2023 03:57 PM | A+A A-

ಮಹಿಳೆಯೊಬ್ಬರು ತನ್ನ ಸಂಕಷ್ಟವನ್ನು ಸಿಎಂ ಬಳಿ ಹೇಳಿಕೊಳ್ಳುತ್ತಿರುವ ಚಿತ್ರ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನಿವಾಸದ ಬಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ವೇಳೆ ಮಹಿಳೆಯೊಬ್ಬರ ಅಳುವನ್ನು ಕೇಳಿಸಿದರೂ ಕೇಳಿಸದಂತೆ ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತ ವಿಡಿಯೋವೊಂದನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಮನ್ ಮ್ಯಾನ್ ಸಿಎಂ ಎಂದು ಕರೆದುಕೊಳ್ಳುವುದಕ್ಕಿಂತ ಕಾಮನ್ ಸೆನ್ಸ್ ಇಲ್ಲದ ಸಿಎಂ ಎಂದರೆ ಸೂಕ್ತ ಎಂದು ಕಿಡಿಕಾರಿದೆ.
ಇದನ್ನೂ ಓದಿ: ಕಾಂಗ್ರೆಸ್ ಚುನಾವಣಾ ಭರವಸೆಗಳು ಕೇವಲ ವಿಸಿಟಿಂಗ್ ಕಾರ್ಡ್ ಅಷ್ಟೇ! ಸಿಎಂ ಬೊಮ್ಮಾಯಿ!
ಮುಖ್ಯಮಂತ್ರಿ ಹುದ್ದೆ ಎಂದರೆ ದರ್ಪ, ದೌಲತ್ತು, ಅಹಂಕಾರ ಪ್ರದರ್ಶಿಸುವ ಹುದ್ದೆಯಲ್ಲ.
— Karnataka Congress (@INCKarnataka) March 17, 2023
ಜನರ ನೋವು ಆಲಿಸಿ, ಪರಿಹರಿಸುವ ಜನಸೇವೆಯ ಶ್ರೇಷ್ಠ ಸ್ಥಾನ.
ಮಹಿಳೆಯೊಬ್ಬರ ಅಳುವಿನ ಅಳಲು ಕೇಳಿಸಿದರೂ ಕೇಳಿಸದಂತೆ ನಿರ್ಲಕ್ಷಿ ಹೋದ @BSBommai ಅವರು ಕಾಮನ್ ಮ್ಯಾನ್ ಸಿಎಂ ಎಂದು ಕರೆದುಕೊಳ್ಳುವುದಕ್ಕಿಂತ ಕಾಮನ್ ಸೆನ್ಸ್ ಇಲ್ಲದ ಸಿಎಂ ಎಂದರೆ ಸೂಕ್ತ! pic.twitter.com/KTCtLuq6Rp
ಮುಖ್ಯಮಂತ್ರಿ ಹುದ್ದೆ ಎಂದರೆ ದರ್ಪ, ದೌಲತ್ತು, ಅಹಂಕಾರ ಪ್ರದರ್ಶಿಸುವ ಹುದ್ದೆಯಲ್ಲ. ಜನರ ನೋವು ಆಲಿಸಿ, ಪರಿಹರಿಸುವ ಜನಸೇವೆಯ ಶ್ರೇಷ್ಠ ಸ್ಥಾನ ಎಂದು ಟೀಕಿಸಿದೆ.