ಪ್ರಾದೇಶಿಕ ಪಕ್ಷಗಳು 'ಪುಟಗೋಸಿ' ಎಂದ ಕಾಂಗ್ರೆಸ್ ಮುಖಂಡ ನರೇಂದ್ರ ಸ್ವಾಮಿ ವಿರುದ್ಧ ಜೆಡಿಎಸ್ ಕಿಡಿ
ಮಂಡ್ಯ ಜಿಲ್ಲೆ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎಂ.ಪಿ. ನರೇಂದ್ರ ಸ್ವಾಮಿ ಪ್ರಾದೇಶಿಕ ಪಕ್ಷಗಳು ಪುಟಗೋಸಿ ಎಂದು ಹೀಯಾಳಿಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
Published: 17th March 2023 04:24 PM | Last Updated: 17th March 2023 04:24 PM | A+A A-

ಕಾಂಗ್ರೆಸ್ ಮುಖಂಡ ನರೇಂದ್ರ ಸ್ವಾಮಿ
ಬೆಂಗಳೂರು: ಮಂಡ್ಯ ಜಿಲ್ಲೆ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎಂ.ಪಿ. ನರೇಂದ್ರ ಸ್ವಾಮಿ ಪ್ರಾದೇಶಿಕ ಪಕ್ಷಗಳು ಪುಟಗೋಸಿ ಎಂದು ಹೀಯಾಳಿಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಈ ಕುರಿತ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಜೆಡಿಎಸ್, ನರೇಂದ್ರ ಸ್ವಾಮಿ ಅವರೆ, ರಾಷ್ಟ್ರಿಯ ಪಕ್ಷಗಳ ಹೊರತಾಗಿ ಪ್ರಾದೇಶಿಕ ಅಸ್ಮಿತೆಯನ್ನು ಎತ್ತಿ ಹಿಡಿಯುವ ಪಕ್ಷಗಳನ್ನು ಪುಟಗೋಸಿ ಎಂದು ಹೀಯಾಳಿಸುವ ಅವಿವೇಕತನ ಯಾಕೆ? ಎಂದು ಪ್ರಶ್ನಿಸಿದ್ದು, ನೀವು ನಿಮ್ಮ ಪಕ್ಷದ ರಾಜ್ಯ ಮುಖಂಡರು ಏನೇ ಕಿಸಿದರೂ ಮಂಡ್ಯದ ಜನರ ಸ್ವಾಭಿಮಾನಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ. ಈ ಚುನಾವಣೆಯಲ್ಲಿ ಜನರೇ ನಿಮಗೆ ಉತ್ತರ ಕೊಡುತ್ತಾರೆ ಎಂದು ಎಚ್ಚರಿಸಲಾಗಿದೆ.
ಕರುನಾಡಿಗೆ @INCKarnataka , @BJP4Karnataka ಎರಡೂ ರಾಷ್ಟ್ರೀಯ ಪಕ್ಷಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಪಿ. ಎಂ. ನರೇಂದ್ರ ಸ್ವಾಮಿಯವರ ಈ ದುರಹಂಕಾರದ ಮಾತುಗಳೇ ಸಾಕ್ಷಿ. ರಾಷ್ಟ್ರೀಯ ಪಕ್ಷ ಎಂದರೆ ಅದಕ್ಕೇನು ಎರಡು ಕೊಂಬು ಇರುತ್ತದೆಯೆ? ಇದು ದಬ್ಬಾಳಿಕೆಯ ಧ್ವನಿ.1/2 pic.twitter.com/mKw6ojnKFc
— Janata Dal Secular (@JanataDal_S) March 17, 2023
ಕರುನಾಡಿಗೆ ಎರಡೂ ರಾಷ್ಟ್ರೀಯ ಪಕ್ಷಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಪಿ. ಎಂ. ನರೇಂದ್ರ ಸ್ವಾಮಿಯವರ ಈ ದುರಹಂಕಾರದ ಮಾತುಗಳೇ ಸಾಕ್ಷಿ. ರಾಷ್ಟ್ರೀಯ ಪಕ್ಷ ಎಂದರೆ ಅದಕ್ಕೇನು ಎರಡು ಕೊಂಬು ಇರುತ್ತದೆಯೆ? ಇದು ದಬ್ಬಾಳಿಕೆಯ ಧ್ವನಿ ಎಂದು ಜೆಡಿಎಸ್ ಕಿಡಿಕಾರಿದೆ.