ವಿಧಾನಸಭೆ ಚುನಾವಣೆ ವೇಳೆ ಜಿಗಿ ನೆಗೆದಾಟ: 'ಕಾಂಗ್ರೆಸ್ ತಕ್ಕಡಿ'ಗೆ ಹಾರದಂತೆ ನಾಯಕರನ್ನು ಕಟ್ಟಿ ಹಾಕಲು ಬಿಜೆಪಿ ಹೆಣಗಾಟ!

ಟಿಕೆಟ್​​ಗಾಗಿ ಪಕ್ಷದ ಅಭ್ಯರ್ಥಿಗಳ ಮಧ್ಯೆ ಈಗಾಗಲೇ ಹಗ್ಗಜಗ್ಗಾಟ ಜೋರಾಗಿದ್ದು, ಕೆಲವರು ಟಿಕೆಟ್​ ಸಿಗಲ್ಲ ಎಂದು ಕಾತರಿಯಾಗುತ್ತಿದ್ದಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷದತ್ತೆ ವಲಸೆ ಹೋಗುತ್ತಿದ್ದಾರೆ.
ಸೋಮಣ್ಣ, ಪುಟ್ಟಣ್ಣ ಮತ್ತು ಮೋಹನ್ ಲಿಂಬಿಕಾಯಿ
ಸೋಮಣ್ಣ, ಪುಟ್ಟಣ್ಣ ಮತ್ತು ಮೋಹನ್ ಲಿಂಬಿಕಾಯಿ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಟಿಕೆಟ್​​ಗಾಗಿ ಪಕ್ಷದ ಅಭ್ಯರ್ಥಿಗಳ ಮಧ್ಯೆ ಈಗಾಗಲೇ ಹಗ್ಗಜಗ್ಗಾಟ ಜೋರಾಗಿದ್ದು, ಕೆಲವರು ಟಿಕೆಟ್​ ಸಿಗಲ್ಲ ಎಂದು ಕಾತರಿಯಾಗುತ್ತಿದ್ದಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷದತ್ತೆ ವಲಸೆ ಹೋಗುತ್ತಿದ್ದಾರೆ.

ಅದರಲ್ಲೂ ಮುಖ್ಯವಾಗಿ ಆಡಳಿರೂಢ ಬಿಜೆಪಿ ಪಕ್ಷದ ಮಾಜಿ ಶಾಸಕರು, ನಾಯಕರುಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಸೇರ್ಪಡೆಯಾಗುತ್ತಿದ್ದಾರೆ.

ಆಡಳಿತ ವಿರೋಧಿ ಅಂಶ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಆಡಳಿತಾರೂಢ ಬಿಜೆಪಿ ತನ್ನ ನಾಯಕರು ಕಾಂಗ್ರೆಸ್‌ಗೆ ಸೇರದಂತೆ ಉಳಿಸಿಕೊಳ್ಳಲು ಹೆಣಗಾಡುತ್ತಿರುವಂತೆ ಕಂಡುಬರುತ್ತಿದೆ.

ವಸತಿ ಸಚಿವ ವಿ ಸೋಮಣ್ಣ ಅವರನ್ನು ಮನವೊಲಿಸುವಲ್ಲಿ ಪಕ್ಷದ ಹೈಕಮಾಂಡ್ ಯಶಸ್ವಿಯಾಗಿದೆ. ಆದರೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಕಾನೂನು ಸಲಹೆಗಾರರಾಗಿದ್ದ ಹಿರಿಯ ನಾಯಕ ಮೋಹನ್ ಲಿಂಬಿಕಾಯಿ ಗುರುವಾರ ಬೆಳಗಾವಿಯಲ್ಲಿ ಕಾಂಗ್ರೆಸ್‌ ಸೇರಿದರು. ಮುಂಬರುವ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಲಿಂಬಿಕಾಯಿ ಸ್ಪರ್ಧಿಸುವ ಸಾಧ್ಯತೆ ಇದೆ.

ಇದಕ್ಕೂ ಮುನ್ನ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಕೆಜೆಪಿ ಮಾಜಿ ಶಾಸಕ ಯು.ಬಿ.ಬಣಕಾರ, ಚಿಕ್ಕಮಗಳೂರು ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ಕಾಂಗ್ರೆಸ್ ಸೇರ್ಪಡೆಗೊಂಡರು.

ಇವರೆಲ್ಲರೂ ವೀರಶೈವ-ಲಿಂಗಾಯತ ಸಮುದಾಯದವರಾಗಿದ್ದು, ಯಡಿಯೂರಪ್ಪನವರ ನಿಷ್ಠಾವಂತರಾಗಿದ್ದರು. ಮುಂಬರುವ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗುವ ನಿರೀಕ್ಷೆಯಿದೆ. ಏತನ್ಮಧ್ಯೆ, ಹಾಲಿ ಬಿಜೆಪಿ ಎಂಎಲ್‌ಸಿ, ಒಕ್ಕಲಿಗ ಪುಟ್ಟಣ್ಣ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಅವರ ಅವಧಿ ಇನ್ನೂ ಮೂರು ವರ್ಷ  ಉಳಿದಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತಹ ನಾಯಕರು ಮಧ್ಯಪ್ರವೇಶಿಸುವುದರೊಂದಿಗೆ ಸೋಮಣ್ಣ ಅವರಂತಹ ಅನುಭವಿಗಳು ಪಕ್ಷ ತೊರೆಯುವುದನ್ನು ತಡೆಯಲು ಬಿಜೆಪಿಗೆ ಸಾಧ್ಯವಾಯಿತು, ಆದರೆ ಎರಡನೇ ಹಂತದ ನಾಯಕರೊಂದಿಗೆ  ಮಾತನಾಡಲು ಹೈಕಮಾಂಡ್ ಗೆ  ಸಾಧ್ಯವಾಗಲಿಲ್ಲ. ಚುನಾವಣೆಗಳು ಸಮೀಪಿಸುತ್ತಿರುವಾಗ, ಹೆಚ್ಚಿನ ನಾಯಕರು ಪಕ್ಷಗಳನ್ನು ಬದಲಾಯಿಸುವುದನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಮೂಲವೊಂದು ದಿ ನ್ಯೂ ಇಂಜಿಯನ್ ಎತ್ಸ್ ಪ್ರೆಸ್ ಗೆ ಗೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com