ಬಿಜೆಪಿ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸುತ್ತಿದೆ: ಡಿಕೆ ಶಿವಕುಮಾರ್

ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಇತಿಹಾಸವನ್ನು ತಿರುಚಲು ರಾಜ್ಯ ಸರ್ಕಾರ "ಸುಳ್ಳು ಕಥೆಗಳು ಮತ್ತು ಕಾಲ್ಪನಿಕ ಪಾತ್ರಗಳನ್ನು" ಸೃಷ್ಟಿಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಳಗಾವಿ: ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಇತಿಹಾಸವನ್ನು ತಿರುಚಲು ರಾಜ್ಯ ಸರ್ಕಾರ "ಸುಳ್ಳು ಕಥೆಗಳು ಮತ್ತು ಕಾಲ್ಪನಿಕ ಪಾತ್ರಗಳನ್ನು" ಸೃಷ್ಟಿಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್/ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಅದರ ನಾಯಕರು ಕೋಮು ತಂತ್ರಗಳ ರೂಪಿಸುವ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಹೇಳಿದರು.

ಇದೇ ವೇಳೆ ಯಾವುದೇ ತಾರ್ಕಿಕ ಕಾರಣಗಳಿಲ್ಲದೆ ಇತಿಹಾಸವನ್ನು ತಿರುಚುವ ಮತ್ತು ಬದಲಾಯಿಸುವ ಸರ್ಕಾರದ ಪ್ರಯತ್ನಗಳನ್ನು ವಿರೋಧಿಸುವಂತೆ ನಿರ್ಮಲಾನಂದ ಸ್ವಾಮೀಜಿಗಳಿಗೆ ಮನವಿ ಮಾಡಿಕೊಂಡರು.

“ಟಿಪ್ಪು ಸುಲ್ತಾನ್ 200 ವರ್ಷಗಳ ಹಿಂದೆ ನಿಧನರಾದರು. ಈಗ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಸಿ.ಟಿ.ರವಿ ಮತ್ತು ಇತರ ಕೆಲವು ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್ ಬಗ್ಗೆ ಸುಳ್ಳು ಕಥೆಗಳು ಸೃಷ್ಟಿಸುವ ಮೂಲಕ ಪುಸ್ತಕವನ್ನು ಹೊರತರುವ ಪ್ರಯತ್ನ ಮಾಡುತ್ತಿದ್ದಾರೆ.

ಅಶ್ವತ್ಥನಾರಾಯಣ ಮತ್ತು ಸಿ.ಟಿ.ರವಿ ಅವರ ಶಿಕ್ಷಕರು ಇತಿಹಾಸವನ್ನು ತಿರುಚುತ್ತಿರುವ ರೀತಿಯನ್ನು ನೋಡಿ  ತಮ್ಮ ವಿದ್ಯಾರ್ಥಿಗಳಿಗೆ ಯಾವ ರೀತಿಯ ಇತಿಹಾಸದ ಪಾಠ ಹೇಳಿಕೊಟ್ಟಿದ್ದೇವೆಂದು ಆಶ್ಚರ್ಯ ಪಡುತ್ತಿರಬೇಕು ಎಂದು ವ್ಯಂಗ್ಯವಾಡಿದರು.

ಬಿಜೆಪಿ ನಾಯಕರು ಸುಳ್ಳು ಇತಿಹಾಸ ಸೃಷ್ಟಿಸುವುದನ್ನು ತಪ್ಪಿಸಲು ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವ ವಹಿಸಿ, ಚುನಾವಣೆಗೂ ಮುನ್ನ ಇಂತಹ ತಂತ್ರಗಳನ್ನು ಅನುಸರಿಸುವ. ಸಮಾಜದ  ದಾರಿ ತಪ್ಪಿಸುವ ನಾಯಕರು ಮತ್ತು ಪಕ್ಷಗಳನ್ನು ಬಹಿಷ್ಕರಿಸಬೇಕು ಎಂದು ಮನವಿ ಮಾಡಿಕೊಂಡರು. ಇದೇ ವೇಳೆ ಬಿಜೆಪಿಯ ನಡೆಸುತ್ತಿರುವ ದಬ್ಬಾಳಿಕೆ ವಿರುದ್ಧ ಎಲ್ಲಾ ಸಮುದಾಯಗಳು ಧ್ವನಿ ಎತ್ತುವಂತೆ ವಿನಂತಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com