ದಕ್ಷಿಣ ಕನ್ನಡದಲ್ಲಿ ಬಿಜೆಪಿ ಎದುರಿಸಲು ಯುವ ನಾಯಕರಿಗೆ ಕಾಂಗ್ರೆಸ್ ಟಿಕೆಟ್!
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ದಕ್ಷಿಣ ಕನ್ನಡದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಹಿರಿಯ ನಾಯಕರ ಬದಲಿಗೆ ಯುವಕರನ್ನು ಕಾಂಗ್ರೆಸ್ ಬದಲಿಗೆ ಕಣಕ್ಕಿಳಿಸಿದೆ.
Published: 26th March 2023 11:06 AM | Last Updated: 27th March 2023 03:13 PM | A+A A-

ಸಂಗ್ರಹ ಚಿತ್ರ
ಮಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ದಕ್ಷಿಣ ಕನ್ನಡದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಹಿರಿಯ ನಾಯಕರ ಬದಲಿಗೆ ಯುವಕರನ್ನು ಕಾಂಗ್ರೆಸ್ ಬದಲಿಗೆ ಕಣಕ್ಕಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಕಾಂಗ್ರೆಸ್ ಪಕ್ಷವು ಶನಿವಾರ ಬಿಡುಗಡೆ ಮಾಡಿದೆ.
ಮೊದಲ ಪಟ್ಟಿಯಲ್ಲಿ ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಹಾಲಿ ಶಾಸಕ ಯು.ಟಿ.ಖಾದರ್, ಬಂಟ್ವಾಳ ಕ್ಷೇತ್ರದಲ್ಲಿ ಹಿರಿಯ ನಾಯಕ ಬಿ.ರಮಾನಾಥ ರೈ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ವಿರುದ್ಧ ಸೋತಿದ್ದ ಮಿಥುನ್ ರೈ ಅವರಿಗೆ ಮೂಲ್ಕಿ–ಮೂಡುಬಿದಿರೆ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಮಾಡಲಾಗಿದೆ.
ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಕೃಷ್ಣಪ್ಪ ಬಿ. ಹಾಗೂ ತೀವ್ರ ಕುತೂಹಲ ಕೆರಳಿಸಿದ್ದ ಬೆಳ್ತಂಗಡಿ ಕ್ಷೇತ್ರದಲ್ಲಿ ರಕ್ಷಿತ್ ಶಿವರಾಂ ಅವರಿಗೆ ಮೊದಲ ಪಟ್ಟಿಯಲ್ಲೇ ಟಿಕೆಟ್ ಹಂಚಿಕೆ ಮಾಡಲಾಗಿದೆ.
ಇದನ್ನೂ ಓದಿ: ವಿಧಾನಸಭೆ ಚುನಾವಣೆಯಲ್ಲಿ 'ಕೈ' ಕಲಿಗಳು: ಮಹಾಸಮರದ ಕಣದಲ್ಲಿ ಅಪ್ಪ-ಮಗ, ತಂದೆ-ಮಗಳು; ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸ್ ಮಣೆ!
ಮಿಥುನ್ ರೈ ಹಾಗೂ ರಕ್ಷಿತ್ ಶಿವರಾಮ್ ಇಬ್ಬರು 30ರ ಹರೆಯದವರಾಗಿದ್ದು, ಮೂಡುಬಿದಿರೆ ಮತ್ತು ಬೆಳ್ತಂಗಡಿಯಿಂದ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅಭಯಚಂದ್ರ ಜೈನ್ ಮತ್ತು ವಸಂತ ಬಂಗೇರರಂತಹ ಅನುಭವಿ ನಾಯಕರ ಬದಲಿಗೆ ಯುವನಾಯಕರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಆರಂಭದಲ್ಲಿ ಪಕ್ಷವು 71 ವರ್ಷದ ರಮಾನಾಥ್ ರೈ ಅವರಿಗೆ ಟಿಕೆಟ್ ನೀಡದಿರುವ ಕುರಿತು ಚಿಂತನೆ ನಡೆಸಿದ್ದು, ಆದರೆ, ಇದು ನನ್ನ ಕೊನೆಯ ಚುನಾವಣೆ ಎಂದು ರಮಾನಾಥ್ ಅವರು ಘೋಷಿಸಿದ ಹಿನ್ನೆಲೆಯಲ್ಲಿ ಕೊನೆಯ ಸಮಯದಲ್ಲಿ ಈ ನಿರ್ಧಾರವನ್ನು ಬದಲಿಸಿ ಅವರಿಗೆ ಟಿಕೆಟ್ ನೀಡಲಾಯಿತು ಎಂದು ತಿಳಿದುಬಂದಿದೆ.
2ನೇ ಪತ್ತಿಯಲ್ಲಿ ಪದ್ಮರಾಜ್ ಆರ್ (ಮಂಗಳೂರು ದಕ್ಷಿಣ), ಇನಾಯತ್ ಅಲಿ (ಮಂಗಳೂರು ಉತ್ತರ) ಮತ್ತು ಅಶೋಕ್ ರೈ (ಪುತ್ತೂರು) ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.