ವೈರಲ್‌ ವಿಡಿಯೋ; ಪ್ರಜಾಧ್ವನಿ ಯಾತ್ರೆ ವೇಳೆ ಕಲಾವಿದರಿಗೆ 500 ರೂ ನೋಟು ಎಸೆದ ಡಿಕೆ ಶಿವಕುಮಾರ್‌

ಪ್ರಜಾಧ್ವನಿ ಯಾತ್ರೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಡವಟ್ಟು ಮಾಡಿಕೊಂಡಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಲಾವಿದರ ಮೇಲೆ 500 ರೂ ನೋಟುಗಳನ್ನು ಎಸೆದು ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಕಲಾವಿದರಿಗೆ 500 ರೂ ನೋಟು ಎಸೆದ ಡಿಕೆ ಶಿವಕುಮಾರ್‌
ಕಲಾವಿದರಿಗೆ 500 ರೂ ನೋಟು ಎಸೆದ ಡಿಕೆ ಶಿವಕುಮಾರ್‌

ಮಂಡ್ಯ: ಪ್ರಜಾಧ್ವನಿ ಯಾತ್ರೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಡವಟ್ಟು ಮಾಡಿಕೊಂಡಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಲಾವಿದರ ಮೇಲೆ 500 ರೂ ನೋಟುಗಳನ್ನು ಎಸೆದು ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಮಂಡ್ಯ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಪ್ರಜಾಧ್ವನಿ ಯಾತ್ರೆ ವೇಳೆ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಲಾವಿದರತ್ತ 5೦೦ರೂ. ಮುಖಬೆಲೆಯ ನೋಟುಗಳನ್ನು ಎಸೆದಿದ್ದು, ಈ ಘಟನೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಪ್ರಜಾಧ್ವನಿ ಯಾತ್ರೆ ನಿಗದಿಯಾಗಿತ್ತು. ಅದರಂತೆ ಮಂಡ್ಯ ತಾಲೂಕು ಕ್ಯಾತುಂಗೆರೆ ಬಳಿಯಿಂದ ಯಾತ್ರೆ ಆರಂಭಿಸಿದ ಡಿಕೆ ಶಿವಕುಮಾರ್‌ ಅವರು ಬಸ್‌ನಲ್ಲೇ ಬೇವಿನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಆಗ ಬಸ್‌ನ ರೂಫ್ ಟಾಪ್ ಮೂಲಕ ರೋಡ್‌ ಶೋ ಮಾಡುತ್ತಾ ಜನರತ್ತ ಕೈ ಬೀಸುತ್ತಾ ಸಾಗುತ್ತಿದ್ದ ಡಿಕೆಶಿ ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕಲಾವಿದರನ್ನು, ಅವರ ಮೇಲೆ 500 ರೂ ನೋಟುಗಳನ್ನು ಎಸೆದಿದ್ದಾರೆ.

ಡಿಕೆಶಿ ಅವರು ತಮ್ಮ ಜೇಬಿನಿಂದ ಒಂದಷ್ಟು ಹಣವನ್ನು ತೆಗೆದು, ಒಂದೊಂದೇ ನೋಟುಗಳನ್ನು ಬಸ್ ಮೇಲಿನಿಂದ ಕೆಳಗೆ ಬಿಟ್ಟಿದ್ದಾರೆ. ಆಗ ಅದು ನೇರವಾಗಿ ಕಲಾವಿದರ ಕೈಸೇರದಿದ್ದಾಗ ಒಂದಷ್ಟು ನೋಟುಗಳನ್ನು ಮಡಿಚಿ, ಕಲಾವಿದರತ್ತ ತೂರಿದ್ದಾರೆ. ಬಳಿಕ ಕೈಯಲ್ಲಿದ್ದ ಉಳಿದ ನೋಟುಗಳನ್ನು ಜೇಬಿಗೆ ಹಾಕಿ ಕೊಂಡು, ಜನರತ್ತ ಕೈ ಬೀಸುತ್ತಾ ಯಾತ್ರೆಯಲ್ಲಿ ಮುಂದೆ ಸಾಗಿದರು. ಡಿಕೆ ಶಿವಕುಮಾರ್‌ ಕಲಾವಿದರ ಕಡೆ ಹಣ ಎಸೆದಿರುವ ದೃಶ್ಯದ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡಿಕೆ ಶಿವಕುಮಾರ್ ಅವರಿಗೆ ಹಣ ದುರಹಂಕಾರ. ಕಲಾವಿದರಿಗೆ ಗೌರವ ಕೊಡುವುದು ಕಲಿಯಿರಿ ಎಂದೆಲ್ಲಾ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ಮುಖಂಡರ ಸಮರ್ಥನೆ
ಡಿಕೆ ಶಿವಕುಮಾರ್‌ ಅವರ ಈ ವರ್ತನೆ ಬಗ್ಗೆ ಪರ-ವಿರೋಧ ಬಗ್ಗೆ ಚರ್ಚೆಯಾಗುತ್ತಿದೆ. ಕಲಾವಿದರ ಮೇಲೆ ಬಸ್ ಮೇಲಿನಿಂದಲೇ ಹಣ ಎಸೆದು ಡಿಕೆಶಿ ದುರಂಹಕಾರ ಪ್ರದರ್ಶಿಸಿದ್ದಾರೆ ಎಂದು ಪ್ರತಿಪಕ್ಷದವರು ಟೀಕಿಸುತ್ತಿದ್ದಾರೆ. ಇನ್ನು ಡಿಕೆಶಿ ವರ್ತನೆಯನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ನಾಯಕರು, ಬಸ್ ಮೇಲಿದ್ದಾಗ ಜನರ ಕೈಗೆ ಹಣ ಕೊಡಲಾಗುತ್ತದೆಯೇ? ಕಲಾವಿದರು ಹಣ ಕೇಳಿದಾಗಿ ಸಹಜವಾಗಿ ನೋಟುಗಳನ್ನು ಮೇಲಿನಿಂದ ಬಿಟ್ಟಿದ್ದಾರೆ. ಅದನ್ನು ತಪ್ಪಾಗಿ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಡಿಕೆಶಿ ಅವರನ್ನು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಸಮರ್ಥಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com