ಮಾದರಿ ನೀತಿ ಸಂಹಿತೆ ಜಾರಿ: ಸಿಎಂ ಬೊಮ್ಮಾಯಿ ಕಾರ್ಯಕ್ರಮ ರದ್ಧು; ಸರ್ಕಾರಿ ಸವಲತ್ತು ತ್ಯಜಿಸಿದ ರಾಜಕೀಯ ನೇತಾರರು!

ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸುತ್ತಿದ್ದಂತೆ, ನೀತಿ ಸಂಹಿತೆಯು ಜಾರಿಗೊಂಡಿದೆ. ಈ ಹಿನ್ನೆಲೆಯಲ್ಲಿ, ಸಾಂವಿಧಾನಿಕ ಸ್ಥಾನಮಾನಗಳಲ್ಲಿರುವ ರಾಜಕೀಯ ನೇತಾರರು ಹಾಗೂ ಸರ್ಕಾರಿ ಸವಲತ್ತುಗಳನ್ನು ಹೊಂದಿರುವ ರಾಜಕೀಯ ನೇತಾರರು ಆ ಎಲ್ಲಾ ಸೌಲಭ್ಯಗಳನ್ನು ತ್ಯಜಿಸಬೇಕಿದೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸುತ್ತಿದ್ದಂತೆ, ನೀತಿ ಸಂಹಿತೆಯು ಜಾರಿಗೊಂಡಿದೆ. ಈ ಹಿನ್ನೆಲೆಯಲ್ಲಿ, ಸಾಂವಿಧಾನಿಕ ಸ್ಥಾನಮಾನಗಳಲ್ಲಿರುವ ರಾಜಕೀಯ ನೇತಾರರು ಹಾಗೂ ಸರ್ಕಾರಿ ಸವಲತ್ತುಗಳನ್ನು ಹೊಂದಿರುವ ರಾಜಕೀಯ ನೇತಾರರು ಆ ಎಲ್ಲಾ ಸೌಲಭ್ಯಗಳನ್ನು ತ್ಯಜಿಸಬೇಕಿದೆ.

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ಧು ಪಡಿಸಲಾಗಿದೆ. ಬಸವರಾಜ ಬೊಮ್ಮಾಯಿ ಅವರು ಕೊಪ್ಪಳ, ಹಾವೇರಿ ಮತ್ತು ಧಾರವಾಡಕ್ಕೆ ಬುಧವಾರ ತೆರಳಬೇಕಿತ್ತು. ಇದರ ಜೊತೆಗೆ ಗುರುವಾರ ನಡೆಯಬೇಕಿದ್ದ ವಿಜಯಪುರ ಮತ್ತು ಬಾಗಲಕೋಟೆ ಭೇಟಿಯೂ ರದ್ದಾಗಿದೆ.

2018 ರಲ್ಲಿ, ಚಿಕ್ಕಬಳ್ಳಾಪುರದಲ್ಲಿ ಕೆಎಂಎಫ್ ಸೌಲಭ್ಯವನ್ನು ಉದ್ಘಾಟಿಸಲು ಹೊರಟಿದ್ದ ಕಾಂಗ್ರೆಸ್‌ನ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾರ್ಚ್ 27 ರಂದು ಹಠಾತ್ ಚುನಾವಣೆ ಘೋಷಣೆಯಾದ ನಂತರ ಖಾಸಗಿ ಕಾರಿನಲ್ಲಿ ಹಿಂತಿರುಗಬೇಕಾಯಿತು. ಕಾರ್ಯಕ್ರಮಕ್ಕಾಗಿ ತೆರಳಿದ್ದ ಸಿದ್ದರಾಮಯ್ಯ ಮತ್ತವರ ತಂಡದವರು ಒಂದು ಕಪ್ ಕಾಫಿ ಸೇವಿಸಿ ಕಾರ್ಯಕ್ರಮ ಉದ್ಘಾಟನೆ ಮಾಡದೆ ವಾಪಸಾದರು ಎಂದು ಅಂದಿನ ಮುಖ್ಯಮಂತ್ರಿ ಕಚೇರಿಯ ಸದಸ್ಯರು ತಿಳಿಸಿದ್ದಾರೆ.

2013 ರಲ್ಲಿ ದಿನದ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಸರ್ಕಾರದ ಅಧಿಕೃತ ವಾಹನಗಳನ್ನು ಹಿಂದಿರುಗಿಸಲಾಯಿತು, ಜೊತೆಗೆ ಅಲ್ಲಿಂದ ತೆರಳಲು ಖಾಸಗಿ ವಾಹನ ಬಳಸಲಾಯಿತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಬುಧವಾರ ಸಚಿವ ಸಂಪುಟದ ಸಚಿವರು ತಮ್ಮ ವಾಹನಗಳನ್ನು ಒಪ್ಪಿಸಿ, ಬೆಂಗಾವಲು ಮತ್ತು ಪೈಲಟ್ ವಾಹನಗಳಿಲ್ಲದೆ ತಮ್ಮ ಖಾಸಗಿ ವಾಹನಗಳಲ್ಲಿ ಬೊಮ್ಮಾಯಿ ಅವರ ನಿವಾಸಕ್ಕೆ ಆಗಮಿಸಿದರು.

ಎಲ್ಲಾ ಪಕ್ಷಗಳು ಮತ್ತು ಸ್ಪರ್ಧಿಗಳಿಗೂ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ ಎಂದು 2018 ಮತ್ತು 2019 ರ ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡಿದ ಮಾಜಿ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಮಾದರಿ ಸಂಹಿತೆಯಿಂದ ಕೆಲವು ವ್ಯಕ್ತಿಗಳು ಹೆಚ್ಚಿನ ಸಂಪನ್ಮೂಲಗಳ ಬಳಕೆ, ಅಂದರೆ ಕಾರುಗಳು, ಅತಿಥಿಗೃಹಗಳ ಉಪಯೋಗ ಮಾಡಿಕೊಳ್ಳುವುದನ್ನು ತಡೆಯುತ್ತದೆ ಎಂದು ಅವರು ಹೇಳಿದರು.  ಸರ್ಕಾರಿ ಸೌಲಭ್ಯಗಳು ಆಡಳಿತ ಪಕ್ಷದ ಏಕಸ್ವಾಮ್ಯವಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ.

ಹಣಬಲದ ದುರುಪಯೋಗವನ್ನು ತಡೆಯಲು, ಭಾರತದ ಚುನಾವಣಾ ಆಯೋಗವು ನಗದು ವ್ಯಾನ್‌ಗಳ ಚಲನೆಯ ಮೇಲೂ ನಿರ್ಬಂಧಗಳನ್ನು ವಿಧಿಸುತ್ತದೆ. ಇಂತಹ ನಿರ್ಬಂಧಗಳ ಹೊರತಾಗಿಯೂ, ಹಿಂದಿನ ಚುನಾವಣೆಗಳಲ್ಲಿ ಬಳ್ಳಾರಿ, ರಾಯಚೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಗದು ಸಾಗಿಸಲು ಆಂಬ್ಯುಲೆನ್ಸ್‌ಗಳನ್ನು ಹೇಗೆ ಬಳಸಲಾಯಿತು ಎಂಬುದನ್ನು ಕೆಲವರು ಸ್ಮರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com