ಕರ್ನಾಟಕ ವಿಧಾನಸಭೆ ಚುನಾವಣೆ: ಮೂರು ಪಕ್ಷಗಳ ಅಬ್ಬರದ ನಡುವೆ ರಾಜ್ಯದಲ್ಲಿ ಅಸ್ತಿತ್ವದ ಹುಡುಕಾಟದಲ್ಲಿ ಎಎಪಿ

ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ ಮೂರು ದೊಡ್ಡ ಪಕ್ಷಗಳ ಪ್ರಾಬಲ್ಯ ಹೊಂದಿರುವ ಕರ್ನಾಟಕ ರಾಜಕೀಯ ರಂಗದಲ್ಲಿ, ಎಎಪಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಮತ್ತು ರಾಜ್ಯ ರಾಜಕೀಯದಲ್ಲಿ ಪ್ರಮುಖ ಹಂತಕ್ಕೆ ತಲುಪಲು ಶ್ರಮಿಸುತ್ತಿದೆ.
ಎಎಪಿ ಸಾಂದರ್ಭಿಕ ಚಿತ್ರ
ಎಎಪಿ ಸಾಂದರ್ಭಿಕ ಚಿತ್ರ

ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ ಮೂರು ದೊಡ್ಡ ಪಕ್ಷಗಳ ಪ್ರಾಬಲ್ಯ ಹೊಂದಿರುವ ಕರ್ನಾಟಕ ರಾಜಕೀಯ ರಂಗದಲ್ಲಿ, ಎಎಪಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಮತ್ತು ರಾಜ್ಯ ರಾಜಕೀಯದಲ್ಲಿ ಪ್ರಮುಖ ಹಂತಕ್ಕೆ ತಲುಪಲು ಶ್ರಮಿಸುತ್ತಿದೆ.

ಇತ್ತೀಚೆಗಷ್ಟೇ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿರುವ ಎಎಪಿ ರಾಜ್ಯದಲ್ಲಿ 209 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರಲ್ಲಿ ಹಲವರು ರೈತರು, ವೈದ್ಯರು, ವಕೀಲರು ಮತ್ತು ಎಂಜಿನಿಯರ್‌ಗಳು. ಅವರಲ್ಲಿ ಕೆಲವರು ಕೆಲವು ಕ್ಷೇತ್ರಗಳಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಉತ್ತಮ ಫೈಟ್ ನೀಡಬಹುದು. ಆದರೆ, ರಾಜ್ಯ ರಾಜಕೀಯದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಮಾಡಲು ಪಕ್ಷಕ್ಕೆ ಇನ್ನೂ ನಿರ್ಣಾಯಕ ನಾಯಕತ್ವದ ಕೊರತೆಯಿದೆ.

ಹಿಂದಿನ ಚುನಾವಣೆಗಳಲ್ಲಿ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಕೂಡ, 2022ರಲ್ಲಿ ಪಂಜಾಬ್‌ನಲ್ಲಿ ಪಕ್ಷದ ಉತ್ತಮ ಪ್ರದರ್ಶನದ ನಂತರ ಕರ್ನಾಟಕದ ಮತದಾರರ ಒಂದು ವರ್ಗದ ಗಮನ ಸೆಳೆಯಿತು. ಅದರ ಕೆಲವು ಅಭ್ಯರ್ಥಿಗಳು ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ನಿರಾಶೆಗೊಂಡ ಯುವ ಮತದಾರರನ್ನು ಸೆಳೆಯಲು ಸಾಧ್ಯವಾಗುತ್ತದೆ. ಎಎಪಿ ಇದೀಗ ರಾಜ್ಯ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಲು ಹೆಜ್ಜೆಯನ್ನಿಡುತ್ತಿದೆ.

ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತವನ್ನು ಒದಗಿಸುವುದು ಮತ್ತು ಅರವಿಂದ ಕೇಜ್ರಿವಾಲ್ ಅವರ ದೆಹಲಿಯ ಆಡಳಿತ ಮಾದರಿಯು ಅದರ ಪ್ರಮುಖ ಚುನಾವಣಾ ಕಾರ್ಯತಂತ್ರವಾಗಿದೆ. ಆದಾಗ್ಯೂ, ರಾಜ್ಯ ಮಟ್ಟದ ನಾಯಕರು ಅಥವಾ ರಾಜ್ಯದಾದ್ಯಂತ ಮತದಾರರಿಗೆ ಪಕ್ಷದ ಸಂದೇಶವನ್ನು ಕೊಂಡೊಯ್ಯುವ ಕಾರ್ಯಕರ್ತರ ಜಾಲವನ್ನು ಹೊಂದಿಲ್ಲದೇ ಇರುವುದು ಪಕ್ಷದ ಕಾರ್ಯವನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ.

ಪಕ್ಷವು ಕೇಜ್ರಿವಾಲ್ ಅವರ ಕ್ಲೀನ್ ಇಮೇಜ್ ಮತ್ತು ಮತದಾರರನ್ನು ಓಲೈಸಲು ರಾಷ್ಟ್ರ ರಾಜಧಾನಿಯಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳನ್ನು ಆಧರಿಸಿದೆ. ರಾಷ್ಟ್ರ ರಾಜಧಾನಿ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಪಕ್ಷದ ಹಲವು ನಾಯಕರು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಸರ್ಕಾರಿ ಶಾಲೆಗಳು ಮತ್ತು ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುವ ವಿಷಯದಲ್ಲಿ ರಾಷ್ಟ್ರೀಯ ಪಕ್ಷಗಳು ತನ್ನ ಕೆಲಸವನ್ನು ಅನುಕರಿಸಲು ಪ್ರಯತ್ನಿಸುತ್ತಿರುವುದರಿಂದ, ಕಾರ್ಯವೈಖರಿಯನ್ನು ಬದಲಾಯಿಸುವಲ್ಲಿ ಅವರು ಈಗಾಗಲೇ ಯಶಸ್ವಿಯಾಗಿದ್ದಾರೆ ಎಂದು ಎಎಪಿ ರಾಜ್ಯ ನಾಯಕರು ನಂಬಿದ್ದಾರೆ.

ಎಎಪಿ ಬಲಗಳು

ಯುವ ಜನತೆ ಮತ್ತು ಮೊದಲ ಸಲದ ಮತದಾರರಿಗೆ ಮನವಿ.

ವಿಶೇಷವಾಗಿ ಬೆಂಗಳೂರಿನಲ್ಲಿ ಅಸ್ತಿತ್ವ ಕಂಡುಕೊಳ್ಳಲು ಶ್ರಮ

ಇತರ ಪಕ್ಷಗಳಿಂದ ಅನುಭವ, ಉತ್ತಮ ಇಮೇಜ್ ಹೊಂದಿರುವ ನಾಯಕರು ಎಎಪಿ ಸೇರಿರುವುದು.

ದೌರ್ಬಲ್ಯಗಳು

ರಾಜ್ಯ ಮಟ್ಟದ ಇಮೇಜ್ ಹೊಂದಿರುವ ನಾಯಕರು ಇಲ್ಲ

ಅನೇಕ ಅಭ್ಯರ್ಥಿಗಳು ಮತದಾರರಿಗೆ ತಿಳಿದಿಲ್ಲ

ಬಲವಾದ ಕೇಡರ್ ನೆಟ್ವರ್ಕ್ ಇಲ್ಲದಿರುವುದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com