ಕರ್ನಾಟಕ ಚುನಾವಣಾ ಫಲಿತಾಂಶ: ನಾಳೆವರೆಗೂ 141 ಸ್ಥಾನಗಳ ಕನಸಿನಲ್ಲಿ ಡಿಕೆಶಿ ಸಂತೋಷವಾಗಿರಲಿ: ಬೊಮ್ಮಾಯಿ ವ್ಯಂಗ್ಯ

ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಇದೀಗ ಎಲ್ಲರ ಚಿತ್ತ ನಾಳೆ ನಡೆಯಲಿರುವ ಮತಎಣಿಕೆ ಮತ್ತು ಫಲಿತಾಂಶ ಘೋಷಣೆ ಮೇಲೆ ನೆಟ್ಟಿದೆ.
ಸಿಎಂ ಬೊಮ್ಮಾಯಿ ಮತ್ತು ಡಿಕೆ ಶಿವಕುಮಾರ್
ಸಿಎಂ ಬೊಮ್ಮಾಯಿ ಮತ್ತು ಡಿಕೆ ಶಿವಕುಮಾರ್

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಇದೀಗ ಎಲ್ಲರ ಚಿತ್ತ ನಾಳೆ ನಡೆಯಲಿರುವ ಮತಎಣಿಕೆ ಮತ್ತು ಫಲಿತಾಂಶ ಘೋಷಣೆ ಮೇಲೆ ನೆಟ್ಟಿದೆ.

ಇದೀಗ ಸರ್ಕಾರ ರಚನೆ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು ಮುಳುಗಿದ್ದು, ಪರಸ್ಪರ ವಾಗ್ಯುದ್ಧ ಕೂಡ ಮುಂದುವರೆದಿದೆ. 141 ಸ್ಥಾನಗಳಿಗೂ ಅಧಿಕ ಸ್ಥಾನಗಳಿಂದ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲಿದೆ ಎಂಬ ಕೆಪಿಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿರುವ ಸಿಎಂ ಬೊಮ್ಮಾಯಿ, ನಾಳೆವರೆಗೂ 141 ಸ್ಥಾನಗಳ ಕನಸಿನಲ್ಲಿ 'ಡಿಕೆಶಿ ಸಂತೋಷವಾಗಿರಲಿ' ಎಂದು ವ್ಯಂಗ್ಯವಾಡಿದ್ದಾರೆ.

ನಾಳೆಯ ಫಲಿತಾಂಶದ ಬಗ್ಗೆ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದು, "ಹಂಗ್ (ಅತಂತ್ರ) ಅಸೆಂಬ್ಲಿಗೆ ಅವಕಾಶವಿಲ್ಲ, ನಾವು ಆರಾಮವಾಗಿ ಸರ್ಕಾರ ರಚಿಸಲಿದ್ದೇವೆ, ನಾಳೆಯವರೆಗೆ ಅವರು (ಡಿಕೆ ಶಿವಕುಮಾರ್) 141 ಸ್ಥಾನದ ಕನಸಿನಲ್ಲಿ ಸಂತೋಷವಾಗಿರಲಿ, ನಾವು ಶಾಸಕಾಂಗ ಪಕ್ಷದ ಸಭೆ ನಡೆಸುತ್ತೇವೆ. ಸಿಎಂ ಆಯ್ಕೆ ಬಗ್ಗೆ ನಿರ್ಧರಿಸಬೇಕು ಎಂದು ಬೊಮ್ಮಾಯಿ ಹೇಳಿದರು.

ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಶನಿವಾರ ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್ ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಿವೆ. ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದ್ದು, ಬಿಜೆಪಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್‌ನ ಪ್ರಮುಖರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಹಲವರ ಚುನಾವಣಾ ಭವಿಷ್ಯ ಶನಿವಾರ ತಿಳಿಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com