ಖರ್ಗೆ ನೋಡಿ ಕಾಂಗ್ರೆಸ್ ಗೆ ದಲಿತರ ಮತ: ಡಿಸಿಎಂ ಸ್ಥಾನ ನೀಡದ್ದಕ್ಕೆ ಅತೃಪ್ತ; ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಎಫೆಕ್ಟ್!

ಸಿಎಂ ಸ್ಥಾನಕ್ಕೆ ಇಬ್ಬರು ಪ್ರಬಲ ನಾಯಕರು ನಡೆಸಿದ ಹೋರಾಟ ನೋಡಿದ ದಲಿತ ಸಮುದಾಯ 'ದಲಿತ ಸಿಎಂ' ಆಸೆಯನ್ನು ಕೈ ಬಿಟ್ಟಿತು, ಕೊನೆ ಪಕ್ಷ ತಮ್ಮ ಸಮುದಾಯಕ್ಕೆ ಡಿಸಿಎಂ ಸ್ಥಾನ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದರು.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಮೈಸೂರು: ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹುದ್ದೆಗಳ ಮೇಲಿನ ಬಿಕ್ಕಟ್ಟನ್ನು ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿ ಪರಿಹರಿಸಿದೆ, ಆದರೆ ಈ ನಿರ್ಧಾರವು ದಲಿತರ ರಾಜಕೀಯ ಆಕಾಂಕ್ಷೆಗಳಿಗೆ ತೀವ್ರ ಹೊಡೆತ ನೀಡಿದೆ, ದಲಿತ (ಎಡ) ಪಂಗಡದ ಆರು ಮಂದಿ ಸೇರಿದಂತೆ ದಲಿತ ಸಮುದಾಯದ ಒಟ್ಟು 21 ಶಾಸಕರಿದ್ದಾರೆ.

ದಲಿತ ಸಮುದಾಯದ ಈ ಬಹುದೊಡ್ಡ ಜನಾದೇಶ ನೀಡಿದೆ. ಆದರೆ ಸಿಎಂ ಆಯ್ಕೆಗೆ ಬಿಕ್ಕಟ್ಟು ಎದುರಾಗಿತ್ತು, ಹೈಕಮಾಂಡ್ ಆದೇಶದಂತೆ ಅಧಿಕಾರ ಹಂಚಿಕೆ ಸೂತ್ರಕ್ಕೆ ಇಬ್ಬರು ಸಮ್ಮತಿಸಿದ್ದಾರೆ. ಸಿಎಂ ಸ್ಥಾನಕ್ಕೆ ಇಬ್ಬರು ಪ್ರಬಲ ನಾಯಕರು ನಡೆಸಿದ ಹೋರಾಟ ನೋಡಿದ ದಲಿತ ಸಮುದಾಯ ದಲಿತ ಸಿಎಂ ಆಸೆಯನ್ನು ಕೈ ಬಿಟ್ಟಿತು, ಕೊನೆ ಪಕ್ಷ ತಮ್ಮ ಸಮುದಾಯಕ್ಕೆ ಡಿಸಿಎಂ ಸ್ಥಾನ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದರು.

ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ ಅವರಿಗೆ ಡಿಸಿಎಂ ಸ್ಥಾನ ದೊರಕಲಿಗೆ ಎಂಬ ಆಸೆಗೆ ತಣ್ಣೀರು ಎರೆಚಿದಂತಾಗಿದೆ. ಡಿ,ಕೆ ಶಿವಕುಮಾರ್ ಏಕೈಕ ಡಿಸಿಎಂ ಆಗಲಿದ್ದಾರೆ.

ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳಿಂದ ವಂಚಿತರಾದ ದಲಿತರು, ಹಿರಿಯ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.  ಖರ್ಗೆ ಮುಖ ನೋಡಿ ಕಾಂಗ್ರೆಸ್ ಗೆ ಹೆಚ್ಚಿನ ದಲಿತ ಮತಗಳು ಬಂದಿದ್ದು, ಸಮುದಾಯದ ಮತಗಳನ್ನು ಕ್ರೋಢೀಕರಿಸಲು ಇದು ಕೂಡ ಪ್ರಮುಖ ಅಂಶವಾಗಿದೆ.

ಹಿಜಾಬ್ ವಿವಾದ ಹಾಗೂ ಶೇ.4ರ ಮೀಸಲಾತಿ ರದ್ದತಿಯಿಂದ ಕೆರಳಿದ ಅಲ್ಪಸಂಖ್ಯಾತರು, ತಾವು ಅಧಿಕಾರಕ್ಕೆ ಬಂದರೆ ಕೋಟಾವನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಬೆನ್ನಿಗೆ ನಿಂತರು.ಕಾಂಗ್ರೆಸ್ ಕೂಡ ಎರಡು ಉನ್ನತ ಹುದ್ದೆಗಳನ್ನು ಲಿಂಗಾಯತರಿಗೆ ನೀಡುವ ಬಗ್ಗೆ ಭರವಸೆ ನೀಡಿದ್ದು ಎಷ್ಟರ ಮಟ್ಟಿಗೆ ಲಿಂಗಾಯತರ ವಿಶ್ವಾಸವನ್ನು ಉಳಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಉಪಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮನ್ನು ಏಕೆ ಪರಿಗಣಿಸಿಲ್ಲ ಎಂದು ದಲಿತ ಮುಖಂಡರಿಗೆ ವಿವರಿಸಲು ಕಷ್ಟವಾಗುವುದರಿಂದ ಈ ನಿರ್ಧಾರವು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರನ್ನೂ ಅತಂತ್ರ ಸ್ಥಿತಿಗೆ ತಳ್ಳುತ್ತದೆ. ಅಲ್ಪಸಂಖ್ಯಾತ ಸಮುದಾಯದ ಒಂಬತ್ತು ಶಾಸಕರು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರುವಾಗ, ಕಳೆದ 7 ವರ್ಷಗಳಲ್ಲಿ ಅನುಭವಿ ಮತ್ತು ಗೌರವಾನ್ವಿತ ರಾಜಕಾರಣಿಗಳ ಹೊರತಾಗಿಯೂ ಉನ್ನತ ಹುದ್ದೆಗಳನ್ನು ನಿರಾಕರಿಸಿದ ದಲಿತರನ್ನೂ ಕಾಂಗ್ರೆಸ್ ಪರಿಗಣಿಸಬೇಕಿತ್ತು ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಅತೃಪ್ತ ದಲಿತರು ಕಾಂಗ್ರೆಸ್‌ಗೆ ಮತ ಹಾಕುವ ಉತ್ಸಾಹವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ರಾಜಕೀಯ ವೀಕ್ಷಕರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com