ಗೆದ್ದಾಯ್ತು ವಿಧಾನಸಭೆ ಚುನಾವಣೆ; ಕಾಂಗ್ರೆಸ್ ಮುಂದಿದೆ 'ಮಿನಿ ಮಹಾಸಮರ' ಜಯಿಸುವ ಹೊಣೆ!

ಎಲ್ಲವೂ ಸರಿಯಾಗಿ ನಡೆದರೆ ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯಲಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಎಲ್ಲವೂ ಸರಿಯಾಗಿ ನಡೆದರೆ ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯಲಿವೆ.

ಚುನಾವಣೆಯನ್ನು ನಡೆಸಲು, ರಾಜ್ಯ ಚುನಾವಣಾ ಆಯೋಗವು ಹಲವು ತಿಂಗಳುಗಳಿಂದ ಬಿಬಿಎಂಪಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ತೀರ್ಪುಗಳಿಗಾಗಿ ಕಾಯುತ್ತಿದೆ. BBMP ಕೌನ್ಸಿಲ್ ಅವಧಿಯು ಸೆಪ್ಟೆಂಬರ್ 2020 ರಲ್ಲಿ ಕೊನೆಗೊಂಡಿತು.

ಹೊಸ ಸರ್ಕಾರದಿಂದ ಜನತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಒತ್ತಿ ಹೇಳಿದ್ದಾರೆ. ಕೆಆರ್ ವೃತ್ತದಲ್ಲಿ ಮುಳುಗಿ ಅಂಡರ್‌ಪಾಸ್‌ನಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ನಂತರ ಸರ್ಕಾರದ ಮೇಲೆ ಮತ್ತಷ್ಟು ನಿರೀಕ್ಷೆಗಳು ಹೆಚ್ಚಿವೆ.

ಹಿಂದಿನ ಬಿಜೆಪಿ ಸರ್ಕಾರವು ಕಾಂಗ್ರೆಸ್‌ನ ಪ್ರಬಲ ವಿರೋಧಧ ನಡುವೆ ಎಲ್ಲಾ 243 ವಾರ್ಡ್‌ಗಳ ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತ್ತು. ಈಗ, ಸರ್ಕಾರವು ಡಿಲಿಮಿನೇಷನ್ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿರುವುದರಿಂದ ಚುನಾವಣೆಯನ್ನು ಮುಂದೂಡುವ ಸಾಧ್ಯತೆಯಿದೆ.

ಪ್ರತಿಪಕ್ಷವಾಗಿ ಚುನಾವಣೆಗೆ ಬೇಡಿಕೆ ಇಟ್ಟಿರುವುದರಿಂದ ಬಿಬಿಎಂಪಿ ಚುನಾವಣೆ ವಿಳಂಬವಾಗುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಬೆಂಗಳೂರಿನ 28 ಸ್ಥಾನಗಳಲ್ಲಿ ಬಿಜೆಪಿ 16 ಸ್ಥಾನಗಳನ್ನು ಗೆದ್ದಿರುವುದರಿಂದ ಇದು ಸವಾಲಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಮತ್ತೊಂದೆಡೆ, 31 ಜಿಲ್ಲಾ ಪಂಚಾಯಿತಿ ಮತ್ತು 238 ತಾಲ್ಲೂಕು ಪಂಚಾಯಿತಿಗಳ ಚುನಾವಣೆಯೂ ಬಾಕಿ ಉಳಿದಿದೆ. ಎರಡೂವರೆ ವರ್ಷಗಳ ಹಿಂದೆಯೇ ನಡೆಯಬೇಕಿತ್ತು. ವಿವಿಧ ಕಾರಣಗಳಿಗಾಗಿ, ಹಿಂದಿನ ಬಿಜೆಪಿ ಸರ್ಕಾರವು ರಾಜ್ಯ ಚುನಾವಣಾ ಆಯೋಗದಿಂದ ಡಿಲಿಮಿಟೇಶನ್ ಮಾಡುವ ಅಧಿಕಾರವನ್ನು ಹಿಂಪಡೆದಿತ್ತು. ಕೋವಿಡ್ ಸಾಂಕ್ರಾಮಿಕವು ಸಹ ಪ್ರಕ್ರಿಯೆಯನ್ನು  ದುರ್ಬಲಗೊಳಿಸಿತು.

ಡಿಲಿಮಿಟೇಶನ್ ಮತ್ತು ಮೀಸಲಾತಿ ಪ್ರಕ್ರಿಯೆಯು ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು,  ಡಿಲಿಮಿಟೇಶನ್ ಮತ್ತು ಮೀಸಲಾತಿ ಕಾಂಗ್ರೆಸ್ ಗೆ ಸವಾಲಾಗಿರುವ ಕಾರಣ ಎರಡು ಪ್ರಕ್ರಿಯೆಯನ್ನು ಮತ್ತೆ ಮಾಡುವವ ಸಾಧ್ಯತೆಯಿದೆ.

ಚುನಾವಣೆ ನಡೆಸಲು ಸಿದ್ಧರಿದ್ದೇವೆ ಮತ್ತು ಉತ್ಸುಕರಾಗಿದ್ದೇವೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜ್ ದಿ ನ್ಯೀ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ನಾವು ದೀರ್ಘಕಾಲದಿಂದ ಚುನಾವಣೆ ನಡೆಸಲು ಎಲ್ಲಾಸಿದ್ಧತೆ ನಡೆಸುತ್ತಿದ್ದೇವೆ ಆದರೆ, ಮೀಸಲಾತಿ ಪ್ರಕ್ರಿಯೆ ಚೆಂಡು ಸರಕಾರದ ಅಂಗಳದಲ್ಲಿದೆ ಎಂದು ಅವರು ಹೇಳಿದರು, ಎಲ್ಲವೂ ಅಂದುಕೊಂಡಂತೆ ಪ್ರಕಾರ ನಡೆದರೆ, ಮುಂದಿನ ಕೆಲವು ತಿಂಗಳುಗಳಲ್ಲಿ ಚುನಾವಣೆಗಳು ನಡೆಯಬಹುದು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com