ಕಾಂಗ್ರೆಸ್ ಸರ್ಕಾರಕ್ಕೆ ತಿಂಗಳು ಮೂರು; ಒಳಜಗಳ ನೂರಾರು; ಅನ್ನದಾತನಿಗೆ ಆತ್ಮಹತ್ಯೆ ಗ್ಯಾರಂಟಿ!
ಇದು ಯಾರು ಬರೆದ ಕಥೆಯೋ, ನಮಗಾಗಿ ಬಂದ ವ್ಯಥೆಯೋ ಎಂಬಂತಾಗಿದೆ ಅನ್ನದಾತರ ಬದುಕು, ರಾಜ್ಯದಲ್ಲಿ ದಿನನಿತ್ಯ ರೈತರು ನೇಣಿನ ಕುಣಿಕೆಗೆ ಕೊರಳಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
Published: 16th September 2023 01:50 PM | Last Updated: 16th September 2023 02:49 PM | A+A A-

ಬಿಜೆಪಿ ಮಾಡಿರುವ ಟ್ವೀಟ್
ಬೆಂಗಳೂರು: ಇದು ಯಾರು ಬರೆದ ಕಥೆಯೋ, ನಮಗಾಗಿ ಬಂದ ವ್ಯಥೆಯೋ ಎಂಬಂತಾಗಿದೆ ಅನ್ನದಾತರ ಬದುಕು, ರಾಜ್ಯದಲ್ಲಿ ದಿನನಿತ್ಯ ರೈತರು ನೇಣಿನ ಕುಣಿಕೆಗೆ ಕೊರಳಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, 2013 ರಿಂದ 2018ರ ಸಿದ್ದರಾಮಯ್ಯರ ಮೊದಲ ಅವಧಿಯಲ್ಲಿ ಬರೊಬ್ಬರಿ 4,257 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈಗಾಗಲೇ 150ರ ಗಡಿ ದಾಟಿದೆ
ಸಿದ್ದರಾಮಯ್ಯ ಅವರೇ, ತಮ್ಮ ಅವಧಿಯಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು ಎಂಬ ರಕ್ಕಸ ಇತಿಹಾಸವನ್ನು ತಾವು ಬರೆಯುತ್ತಿದ್ದೀರಿ ಎಂದು ಹೇಳಿದೆ.
ರಾಜ್ಯದ @INCKarnataka ಸರ್ಕಾರದ ಶಾಸಕರು, ಸಚಿವರುಗಳ ಒಳಜಗಳ ಮಾತ್ರ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ರಾಜ್ಯದ ಅಭಿವೃದ್ಧಿಗಿಂತ, ಅಧಿಕಾರಕ್ಕಾಗಿ ಕಚ್ಚಾಡುವುದನ್ನೇ ಮೊದಲ ಆದ್ಯತೆಯನ್ನಾಗಿಸಿಕೊಂಡು, ರಾಜ್ಯದ ಅಭಿವೃದ್ಧಿಯನ್ನು ಕೈ ಸರ್ಕಾರ ರಿವರ್ಸ್ ಗೇರ್‌ನಲ್ಲಿರಿಸಿದೆ.
ರಾಜ್ಯಾದ್ಯಂತ ಬರ ತಾಂಡವವಾಡುತ್ತಿದೆ. ದುಂದು… pic.twitter.com/1K0CRKPSIP— BJP Karnataka (@BJP4Karnataka) September 16, 2023
ರಾಜ್ಯದಲ್ಲಿ ತಾಂಡವವಾಡುತ್ತಿರುವ ವರ್ಗಾವಣೆ ದಂಧೆ ಕಾನೂನು ಸುವ್ಯವಸ್ಥೆಯನ್ನೂ ಹಳ್ಳ ಹಿಡಿಸಿದೆ. ಶ್ಯಾಡೋ ಸಿಎಂ ಹಾಗೂ ಗೃಹ ಸಚಿವ ಡಾ.ಪರಮೇಶ್ವರ ಅವರ ನಡುವಿನ ಮುಸುಕಿನ ಗುದ್ದಾಟದಿಂದಾಗಿ 115 ಪೊಲೀಸ್ ಅಧಿಕಾರಿಗಳು ಎಲ್ಲಿಯೂ ನಿಯುಕ್ತಗೊಳ್ಳದೆ ಅತಂತ್ರರಾಗಿದ್ದಾರೆ.
ಇದನ್ನೂ ಓದಿ: ಡಿಎಂಕೆ ಓಲೈಸಲು ತಮಿಳುನಾಡಿಗೆ ನೀರು; ಬಿಜೆಪಿಯಿಂದ ಕಾವೇರಿ ರಕ್ಷಣಾ ಯಾತ್ರೆ: ಬೊಮ್ಮಾಯಿ, ಬಿಎಸ್ ವೈ
ಇಷ್ಟೇ ಅಲ್ಲದೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಬಿಜೆಪಿ ಸರ್ಕಾರ ಜಾರಿಗೆ ತಂದ ಪೋರ್ಟಲ್ ವ್ಯವಸ್ಥೆಯನ್ನೂ ಹದಗೆಡಿಸಿರುವ ಸಿದ್ದರಾಮಯ್ಯ ಅವರ ಸರ್ಕಾರ ಸುಮಾರು 4,000 ಕಾನ್ಸ್ಟೇಬಲ್‌ಗಳನ್ನೂ ತ್ರಿಶಂಕು ಸ್ಥಿತಿಗೆ ತಳ್ಳಿದೆ. ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣ ಹದಗೆಡಿಸಿ @INCKarnataka ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಲೇವಡಿ ಮಾಡಿದೆ.
"ಇದು ಯಾರು ಬರೆದ ಕಥೆಯೋ, ನಮಗಾಗಿ ಬಂದ ವ್ಯಥೆಯೋ" ಎಂಬಂತಾಗಿದೆ ಅನ್ನದಾತರ ಬದುಕು!
— BJP Karnataka (@BJP4Karnataka) September 16, 2023
ರಾಜ್ಯದಲ್ಲಿ ದಿನನಿತ್ಯ ರೈತರು ನೇಣಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾರೆ.
2013 ರಿಂದ 2018ರ ಸಿದ್ದರಾಮಯ್ಯರ ಮೊದಲ ಅವಧಿಯಲ್ಲಿ ಬರೊಬ್ಬರಿ 4,257 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈಗಾಗಲೇ 150ರ ಗಡಿ ದಾಟಿದೆ!@siddaramaiah ಅವರೇ, ತಮ್ಮ… pic.twitter.com/p22ImMTX9P
ರಾಜ್ಯದ ಕಾಂಗ್ರೆಸ್ ಸರ್ಕಾರದ ಶಾಸಕರು, ಸಚಿವರುಗಳ ಒಳಜಗಳ ಮಾತ್ರ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ರಾಜ್ಯದ ಅಭಿವೃದ್ಧಿಗಿಂತ, ಅಧಿಕಾರಕ್ಕಾಗಿ ಕಚ್ಚಾಡುವುದನ್ನೇ ಮೊದಲ ಆದ್ಯತೆಯನ್ನಾಗಿಸಿಕೊಂಡು, ರಾಜ್ಯದ ಅಭಿವೃದ್ಧಿಯನ್ನು ಕೈ ಸರ್ಕಾರ ರಿವರ್ಸ್ ಗೇರ್‌ನಲ್ಲಿರಿಸಿದೆ. ರಾಜ್ಯಾದ್ಯಂತ ಬರ ತಾಂಡವವಾಡುತ್ತಿದೆ. ದುಂದು ವೆಚ್ಚವನ್ನು ಕಡಿತಗೊಳಿಸಿ, ಬರ ನಿರ್ವಹಣೆಗೆ ಪ್ರಾಶಸ್ತ್ಯ ನೀಡುವ ಬದಲು, ಹೊಸ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿ ಎಂದು ಕಚ್ಚಾಡುವುದು, ರಾಜ್ಯದ ಜನತೆಗೆ ಮಾಡುತ್ತಿರುವ ಮಹಾದ್ರೋಹ ಎಂದು ಟ್ವೀಟ್ ಮಾಡಿದೆ.