ಸಚಿವ ಕೆ.ಎಚ್.ಮುನಿಯಪ್ಪ
ಸಚಿವ ಕೆ.ಎಚ್.ಮುನಿಯಪ್ಪ

ಲೋಕಸಭಾ ಚುನಾವಣೆ: ಕಾಂಗ್ರೆಸ್ ಗೆ 15 ಸ್ಥಾನ ಗ್ಯಾರಂಟಿ- ಸಚಿವ ಕೆ.ಎಚ್. ಮುನಿಯಪ್ಪ

ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಕಾಂಗ್ರೆಸ್ ಲೋಕಸಭೆ ಟಿಕೆಟ್ ನೀಡಬೇಕೆಂದು ಸಚಿವ ಕೆ.ಎಚ್.ಮುನಿಯಪ್ಪ ಅವರು ಪಕ್ಷದ ಮುಂದೆ ಬೇಡಿಕೆಯಿಟ್ಟಿದ್ದರು. ಆದರೆ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಿದರೆ ಪಕ್ಷ ತೊರೆಯುವುದಾಗಿ ರಮೇಶ್ ಕುಮಾರ್ ಅವರ ಬಣದಲ್ಲಿದ್ದ ಹಲವು ನಾಯಕರು ಬೆದರಿಕೆ ಹಾಕಿದ್ದರು.
Published on

ಬೆಂಗಳೂರು: ಕೋಲಾರ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಹಠಕ್ಕೆ ಬಿದ್ದಿದ್ದ ಮಾಜಿ ಸ್ಪೀಕರ್​​ ರಮೇಶ್‌ಕುಮಾರ್‌ ಹಾಗೂ ಆಹಾರ ಸಚಿವ ಕೆ. ಎಚ್​​ ಮುನಿಯಪ್ಪ ಬಣಗಳಿಗೆ ಶಾಕ್ ನೀಡಿದ್ದ ಕಾಂಗ್ರೆಸ್ ಹೈಕಮಾಂಡ್, ಎರಡು ಬಣಗಳ ನಾಯಕರು ಪ್ರಸ್ತಾಪ ಮಾಡಿದ್ದ ನಾಯಕರನ್ನು ಕೈ ಬಿಟ್ಟು ತಟಸ್ಥ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಿದೆ. ಬೆಂಗಳೂರು ಮೂಲದ ಕೆ.ವಿ ಗೌತಮ್ (ಅವರು ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಕಾಂಗ್ರೆಸ್ ಲೋಕಸಭೆ ಟಿಕೆಟ್ ನೀಡಬೇಕೆಂದು ಸಚಿವ ಕೆ.ಎಚ್.ಮುನಿಯಪ್ಪ ಅವರು ಪಕ್ಷದ ಮುಂದೆ ಬೇಡಿಕೆಯಿಟ್ಟಿದ್ದರು. ಆದರೆ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಿದರೆ ಪಕ್ಷ ತೊರೆಯುವುದಾಗಿ ರಮೇಶ್ ಕುಮಾರ್ ಅವರ ಬಣದಲ್ಲಿದ್ದ ಹಲವು ನಾಯಕರು ಬೆದರಿಕೆ ಹಾಕಿದ್ದರು.

ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆದ್ದಿದ್ದ ಮುನಿಯಪ್ಪ 2019ರ ಚುನಾವಣೆಯಲ್ಲಿ ಸೋತಿದ್ದರು. ಇವರ ಸೋಲಿಗಾಗಿ ಪಕ್ಷದೊಳಗಿನ ಹಲವು ಮುಖಂಡರು ಕೆಲಸ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ನಡುವೆ ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮುನಿಯಪ್ಪ ಅವರು ಮಾತನಾಡಿದ್ದಾರೆ.

Q

ನಿಮ್ಮ ಬೇಡಿಕೆಯಂತೆ ಕಾಂಗ್ರೆಸ್ ಕೋಲಾರ ಟಿಕೆಟ್ ನೀಡಲಿಲ್ಲ ಏಕೆ?

A

ಕೋಲಾರ ಕ್ಷೇತ್ರದ ಟಿಕೆಟ್ ನನಗೆ ನೀಡುವಂತೆ ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡಿತ್ತು. ಆದರೆ, ನಾನು ಬೇಡಿಕೆಯಿಟ್ಟ ಬಳಿಕ ಟಿಕಟ್ ನಿರಾಕರಿಸಿದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ವೇಣುಗೋಪಾಲ್ ಮತ್ತು ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ನನಗೆ ಟಿಕೆಟ್ ನೀಡಲಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದರು.

ಆದರೆ, ಕೆಲವರ ವಿರೋಧದಿಂದ ಪಕ್ಷ ಟಿಕೆಟ್ ನೀಡಲಿಲ್ಲ. ರಾಜ್ಯ ನಾಯಕತ್ವವೂ ಅವರ ಮೇಲೆ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. 2019ರಲ್ಲಿ ನನ್ನನ್ನು ಸೋಲಿಸಲು ಇದೇ ಜನ ಬಿಜೆಪಿ ಜೊತೆ ನಿಂತು ಕೆಲಸ ಮಾಡಿದ್ದರು. ಜನ ಇದನ್ನೆಲ್ಲಾ ಗಮನಿಸುತ್ತಿದ್ದಾರೆ. ನಾನು ಎಲ್ಲಾ ನೋವುಗಳನ್ನೂ ನುಂಗಿದ್ದೇನೆ, ಚುನಾವಣೆಗಳು ಹತ್ತಿರ ಬರುತ್ತಿದ್ದು ಈ ಸಮಸ್ಯೆಗಳನ್ನು ದೊಡ್ಡದು ಮಾಡಲು ಬಯಸುವುದಿಲ್ಲ ನನಗೆ ಪಕ್ಷ ಮುಖ್ಯವಾಗಿದ್ದು, ಒಬ್ಬರಿಗೆ ಟಿಕೆಟ್ ನಿರಾಕರಿಸಿದ ಕೂಡಲೇ ಜಗತ್ತು ಅಂತ್ಯವಾಗುವುದಿಲ್ಲ. ನನ್ನ ಪ್ರಚಾರವನ್ನು ನಾನು ಮಾಡುತ್ತೇನೆ. ಇತ್ತೀಚೆಗೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ನಾನು ಚಿಕ್ಕಬಳ್ಳಾಪುರದಲ್ಲಿದ್ದೆ. ಪಕ್ಷವಾಗಿ ನಾವು ಮೊದಲು ಗೆದ್ದು ಅಧಿಕಾರಕ್ಕೆ ಬರಬೇಕು. ಇತರ ಸಣ್ಣ ಸಮಸ್ಯೆಗಳನ್ನು ನಂತರ ಪರಿಹರಿಸಿಕೊಳ್ಳಬೇಕು.

Q

ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತಾ?

A

ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಈಗಲೇ ಹೇಳಲು ಸಾಧ್ಯವಿಲ್ಲ. ನಾನು ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದೇನೆ. ನಮ್ಮ ಗೆಲುವಿನ ಕುರಿತು 4-5 ದಿನಗಳಲ್ಲಿ ತಿಳಿದುಬರಲಿದೆ.

Q

ದಲಿತ ಮತದಾರರು ಕಾಂಗ್ರೆಸ್'ಗೆ ಬೆಂಬಲಿಸುತ್ತಾರಾ?

A

ಸ್ವಾತಂತ್ರ್ಯ ಹೋರಾಟದ ಆರಂಭಿಕ ವರ್ಷಗಳಲ್ಲಿ ದಲಿತರು ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದರು. ನನ್ನ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇಂದು, ಆ ಮತಗಳು ಅದೇ ರೀತಿಯಿಲ್ಲ. ಹಲವಾರು ಒತ್ತಡಗಳಿವೆ, ಆದರೂ ದಲಿತರು ಹೆಚ್ಚಾಗಿ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ.

Q

ನೀವು ದಲಿತ ಎಡಪಂಥೀಯರು ಆದರೆ, ಎಐಸಿಸಿ ಅಧ್ಯಕ್ಷರು ದಲಿತರ ಬಲಪಂಥೀಯರಾಗಿದ್ದಾರೆ?

A

ದಲಿತದಲ್ಲಿಯೂ ಎಡ ಮತ್ತು ಬಲಪಂಥೀಯರೆಂಬುದು ಇದೆ. ಪರಿಶಿಷ್ಟ ಪಂಗಡಗಳ ಜೊತೆಗೆ ದಲಿತರು ಸುಮಾರು ಶೇಕಡ 25 ರಷ್ಟಿದ್ದಾರೆ. ಇದರಲ್ಲಿ ಲಂಬಾಣಿಗಳು, ಭೋವಿಗಳು, ಕೊರಮರು ಮತ್ತು ಕೊರಚರು ಇದ್ದಾರೆ. ಕೆಲವು ಸಮುದಾಯಗಳು ಇನ್ನೂ ಮೂಲೆಗುಂಪಾಗಿವೆ, ಸಿಕ್ಕ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಲಾಗುತ್ತಿಲ್ಲ ಎಂಬ ದೂರುಗಳೂ ಇವೆ. ಅದನ್ನು ಕೈಗೆತ್ತಿಕೊಂಡು ಪರಿಹರಿಸಬೇಕಾಗಿದೆ. ಆದರೆ ದಲಿತರು ಒಗ್ಗಟ್ಟಾಗಬೇಕಿದೆ.

Q

ಚಿತ್ರದುರ್ಗದ ಬಗ್ಗೆ ಏನು ಹೇಳುತ್ತೀರಿ?

A

(ಮಾಜಿ ಸಚಿವ ಎಚ್.ಆಂಜನೇಯ ಅವರತ್ತ ಬೊಟ್ಟು ಮಾಡಿ), ಆಂಜನೇಯ ಅವರನ್ನೇ ಕೇಳಿ.

Q

ರಾಜ್ಯಾದ್ಯಂತ ಕಾಂಗ್ರೆಸ್‌ಗೆ ಯಾವ ಮಟ್ಟಿನ ಜಯ ಸಿಗಲಿದೆ?

A

ಗ್ಯಾರಂಟಿಗಳಿಂದಾಗಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಸುಮಾರು 4.5 ಕೋಟಿ ಜನರು ಗ್ಯಾರಂಟಿ ಯೋಜನಗಳಿಂದ ಲಾಭ ಪಡೆದಿದ್ದಾರೆ. ನಾವು ರಾಜ್ಯಾದ್ಯಂತ ಸುಮಾರು 15 ಸ್ಥಾನಗಳನ್ನು ಗೆಲ್ಲಬೇಕು. ಗ್ಯಾರಂಟಿಗಳಿಂದಾಗಿ ಅನೇಕ ಜನರ ಜೀವನವನ್ನು ಬದಲಾಯಿಸಲಾಗಿದೆ.

Q

ಜೆಡಿಎಸ್ ಬಿಜೆಪಿ ಜೊತೆ ಕೈಜೋಡಿಸಿರುವುದು ಕಾಂಗ್ರೆಸ್‌ಗೆ ಅನಾನುಕೂಲವೇ?

A

ಈ ಎರಡು ಪಕ್ಷಗಳು ಒಗ್ಗೂಡಿರುವುದರಿಂದ ಅನಾನುಕೂಲವಾಗಲಿದೆ ಎಂಬುದು ನನ್ನ ಭಾವನೆಯಾಗಿದೆ. ಜೆಡಿಎಸ್ ತಟಸ್ಥರಾಗಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಕೈಜೋಡಿಸಿ ಪ್ರಬಲ ವಿರೋಧ ಪಕ್ಷಗಳಾಗಿ ಹೋಗಿವೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com