'ದಕ್ಷಿಣ ಭಾರತದಲ್ಲಿ ಬಿಜೆಪಿಯ ಶೋಚನೀಯ ಸ್ಥಿತಿ ಬಗ್ಗೆ ನಿರ್ಮಲಾ ಸೀತಾರಾಮನ್ ಗೆ ಅರಿವಿಲ್ಲ': ಪ್ರಿಯಾಂಕ್ ಖರ್ಗೆ

ದಕ್ಷಿಣ ಭಾರತದಲ್ಲಿ ಬಿಜೆಪಿ ಅಳಿವಿನಂಚಿನಲ್ಲಿದೆ. ಇತ್ತೀಚೆಗಿನ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಒಂದೆರಡು ರಾಜ್ಯಗಳನ್ನು ಬಿಟ್ಟರೆ ಎಲ್ಲಿಯೂ ಬಿಜೆಪಿ ಪಕ್ಷಕ್ಕೆ ಸರಿಯಾದ ಜನಾದೇಶ ಸಿಕ್ಕಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್(ಸಂಗ್ರಹ ಚಿತ್ರ)
ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್(ಸಂಗ್ರಹ ಚಿತ್ರ)

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಳಿವಿನಂಚಿನಲ್ಲಿದೆ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಕರ್ನಾಟಕ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡುತ್ತಿದ್ದರೂ ಕೂಡ ರಾಜ್ಯಕ್ಕೆ ಸಿಗಬೇಕಾದ ಅನುದಾನದಲ್ಲಿ ಅತ್ಯಲ್ಪ ಮೊತ್ತ ಮಾತ್ರ ದೊರಕುತ್ತಿದ್ದು, ಕೇಂದ್ರ ಸರ್ಕಾರ ಪ್ರತ್ಯೇಕತಾವಾದ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ.

“ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷದ ದಯನೀಯ ಸ್ಥಿತಿಯ ಬಗ್ಗೆ ನಿರ್ಮಲಾ ಸೀತಾರಾಮನ್ ಅವರಿಗೆ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಅಳಿವಿನಂಚಿನಲ್ಲಿದೆ. ಇತ್ತೀಚೆಗಿನ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಒಂದೆರಡು ರಾಜ್ಯಗಳನ್ನು ಬಿಟ್ಟರೆ ಎಲ್ಲಿಯೂ ಬಿಜೆಪಿ ಪಕ್ಷಕ್ಕೆ ಸರಿಯಾದ ಜನಾದೇಶ ಸಿಕ್ಕಿಲ್ಲ, ಕೆಲವು ರಾಜ್ಯಗಳಲ್ಲಿ ಬಿಜೆಪಿ ಸೃಷ್ಟಿ ಮಾಡಿಕೊಂಡ ಜನಾದೇಶವಾಗಿದ್ದು, ಪ್ರಜಾಸತ್ತಾತ್ಮಕವಾಗಿ ಗೆದ್ದಿಲ್ಲ. ಅದಕ್ಕೆ ಮಹಾರಾಷ್ಟ್ರ ರಾಜ್ಯ ಉತ್ತಮ ಉದಾಹರಣೆ. ಹಿಂದೆ ಕರ್ನಾಟಕ ಕೂಡ ಉದಾಹರಣೆಯಾಗಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ (The New Indian Express) ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

TNIEಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದರು. ದಕ್ಷಿಣದ ರಾಜ್ಯಗಳು ಕೇಂದ್ರದಿಂದ ಬರಬೇಕಾದ ಧನಸಹಾಯದಲ್ಲಿ ಪ್ರಮಾಣಾನುಗುಣವಾಗಿ ಹಣವನ್ನು ಪಡೆಯುತ್ತಿಲ್ಲ. ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಿಗೆ ಹೋಗುತ್ತಿದೆ ಎಂದರು.

ನ್ಯಾಯಯುತ ಪರಿಹಾರ ಸಿಗುತ್ತಿಲ್ಲ: "ಪ್ರತಿ 100 ರೂಪಾಯಿ ತೆರಿಗೆ ಪಾವತಿಸಿದರೆ, ಬಿಹಾರಕ್ಕೆ 922 ರೂಪಾಯಿ, ಉತ್ತರ ಪ್ರದೇಶಕ್ಕೆ 333 ರೂಪಾಯಿ ಸಿಕ್ಕಿದರೆ ಮತ್ತು ನಮಗೆ ಕರ್ನಾಟಕಕ್ಕೆ ಸಿಗುತ್ತಿರುವುದು ಕೇವಲ 13 ರೂಪಾಯಿ. ನಾವು ವಿನಂತಿಸುವುದೇನೆಂದರೆ, ಮೂಲಸೌಕರ್ಯ, ಉದ್ಯೋಗವನ್ನು ಸೃಷ್ಟಿಸುತ್ತಿರುವವರು ನಾವೇ ಆಗಿರುವುದರಿಂದ ಅಧಿಕಾರ ವಿಕೇಂದ್ರೀಕರಣವನ್ನು ಸ್ವಲ್ಪ ಹೆಚ್ಚು ನ್ಯಾಯಯುತವಾಗಿ ಮಾಡಬೇಕು. ಜನರನ್ನು ಬಡತನದಿಂದ ಹೊರತರುವುದು. ಫೆಡರಲ್ ರಚನೆಯಲ್ಲಿ ಇತರ ರಾಜ್ಯಗಳೊಂದಿಗೆ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್(ಸಂಗ್ರಹ ಚಿತ್ರ)
ಚುನಾವಣಾ ಆಯೋಗ ಅನುಮತಿ ನೀಡದಿರುವುದು ಬರ ಪರಿಹಾರ ವಿಳಂಬಕ್ಕೆ ಕಾರಣ: ನಿರ್ಮಲಾ ಸೀತಾರಾಮನ್

ಸಮಸ್ಯೆ ಏನೆಂದರೆ, ಕರ್ನಾಟಕದಂತಹ ಪ್ರಗತಿಪರ ರಾಜ್ಯಕ್ಕೆ ನ್ಯಾಯಯುತ ಪಾಲನ್ನು ವಂಚಿಸುವ ಮೂಲಕ 13 ರೂಪಾಯಿ ನೀಡಿ ನಮ್ಮನ್ನು ಬಡ ರಾಜ್ಯದ ಕೂಪಕ್ಕೆ ಕೇಂದ್ರ ಸರ್ಕಾರ ತಳ್ಳುತ್ತಿದೆ ಎಂದು ಟೀಕಿಸಿದರು.

“ಬಿಜೆಪಿ ಅಥವಾ ಆರೆಸ್ಸೆಸ್ ಸಿದ್ಧಾಂತಕ್ಕೆ ಹೊಂದಿಕೆಯಾಗದ ಯಾವುದೇ ರಾಜ್ಯಗಳನ್ನು, ಜನರನ್ನು ಮತ್ತು ಪಕ್ಷಗಳನ್ನು ಅವರು ಪ್ರತ್ಯೇಕತಾವಾದಿ, ನಗರ ನಕ್ಸಲರು ಮತ್ತು ‘ತುಕ್ಡೆ ತುಕ್ಡೆ’ ಗ್ಯಾಂಗ್ ಎಂದು ಕರೆಯುತ್ತಾರೆ. ಇವು ಕೇಂದ್ರ ಸರ್ಕಾರದ ಜನಪ್ರತಿನಿಧಿಗಳು ಮಾತನಾಡುವ ಭಾಷೆಗಳು. ಅವರು 10 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಪ್ರತ್ಯೇಕತಾವಾದಿ ಧ್ವನಿಗಳಿದ್ದರೆ ಅವರನ್ನು ಏಕೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ಕೇಂದ್ರದ ವಿರುದ್ಧ ಧ್ವನಿ ಎತ್ತುವ ಮತ್ತು ನ್ಯಾಯ ಕೇಳುವವರನ್ನು ಪ್ರತ್ಯೇಕತಾವಾದಿಗಳು ಎಂದು ಕರೆಯುತ್ತಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಮತ್ತು ಡಿಎಂಕೆ ಸಮಾನ ಪಾಲುದಾರರು ಎನ್ನುತ್ತಾರೆ. ಹಿಂದೆ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿಯನ್ನು ಕೊನೆಗೆ ಕಡೆಗಣಿಸಲಾಯಿತು. ಬಿಜೆಪಿ ಪರವಾಗಿ ಸಿಬಿಐ, ಐಟಿ, ಇಡಿ ಮತ್ತು ಕೆಲವು ಮಾಧ್ಯಮಗಳು ಇಲ್ಲದಿದ್ದರೆ, ಇಂದು ದೇಶದಲ್ಲಿ ಅಸ್ತಿತ್ವದಲ್ಲಿಯೇ ಇರುತ್ತಿರಲಿಲ್ಲ ಎಂದರು.

ಸುಪ್ರಿಂ ಕೋರ್ಟ್‌ಗೆ ತೆರಳುವ ಮೂಲಕ ಬರ ಪರಿಹಾರ ಎದುರಿಸಲು ನಿಧಿ ಹಂಚಿಕೆ ಮತ್ತು ನೆರವು ಬಿಡುಗಡೆ ಮಾಡದಿರುವಂತಹ ಸಮಸ್ಯೆಗಳನ್ನು ರಾಜ್ಯವು ರಾಜಕೀಯಗೊಳಿಸುತ್ತಿದೆ ಎಂಬ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ, “ನಿಸ್ಸಂಶಯವಾಗಿ, ಕರ್ನಾಟಕಕ್ಕೆ ಬರ ಪರಿಹಾರ ಒದಗಿಸುವುದು ಅವರಿಗೆ ಸಮಸ್ಯೆಗಳಲ್ಲ. ಸುಪ್ರೀಂ ಕೋರ್ಟ್ ಗೆ ನಮಗೆ ಹೋಗಬೇಕಾದ ಪರಿಸ್ಥಿತಿ ಬಂದದ್ದು ಕೇಂದ್ರ ಸರ್ಕಾರದ ತಪ್ಪಿನಿಂದ. ಕೇಂದ್ರ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತದೆಯೇ? ರಾಜ್ಯಗಳು ತಮ್ಮ ಬಾಕಿ ಹಂಚಿಕೆಗಾಗಿ ಸುಪ್ರೀಂ ಕೋರ್ಟ್ ನ್ನು ಏಕೆ ಸಂಪರ್ಕಿಸಬೇಕು? ಕೇಂದ್ರವು ಹಿನ್ನಡೆಯಲ್ಲಿದೆ ಎಂಬುದನ್ನು ಅದು ತೋರಿಸುತ್ತದೆಯಲ್ಲವೇ ಎಂದು ಕೇಳಿದರು.

ಸುಪ್ರೀಂ ಕೋರ್ಟ್ ಗೆ ಹೋಗುವುದು ಅನಿವಾರ್ಯವಾಗಿತ್ತು: ರಾಜ್ಯಕ್ಕೆ ಬರ ಪರಿಹಾರ ಮೊತ್ತ ಬಿಡುಗಡೆ ಮಾಡಲು ಏಳು ತಿಂಗಳ ಕಾಲ ಕೇಂದ್ರದೊಂದಿಗೆ ಪಟ್ಟುಬಿಡದೆ ವಿಷಯವನ್ನು ಮುಂದುವರಿಸಿದ ನಂತರ ಪರಿಹಾರ ಸಿಗದೆ ಬೇರೆ ದಾರಿಯಿಲ್ಲದೆ ಕರ್ನಾಟಕವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ನಾವು ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ, ಆರ್ಥಿಕ ಸಚಿವರು, ಗೃಹ ಸಚಿವರು, ಮತ್ತು ಸ್ವತಃ ಪ್ರಧಾನ ಮಂತ್ರಿಗಳನ್ನೇ ಭೇಟಿ ಮಾಡಿದ್ದೆವು. ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ರಾಜ್ಯವು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿರುವುದರಿಂದ, ಕೇಂದ್ರವು ಕರ್ನಾಟಕದ "ಬರ ಘೋಷಣೆ" ಯನ್ನು ಇತರ ರಾಜ್ಯಗಳು ಪುನರಾವರ್ತಿಸಲು ಅನುಕರಣೀಯ ವಿಧಾನವೆಂದು ಕರೆದಿದೆ. ಕೇಂದ್ರದ ನಿಯಮಗಳ ಪ್ರಕಾರ ನವೆಂಬರ್‌ನಲ್ಲಿ ನಮಗೆ ಪರಿಹಾರ ಸಿಗಬೇಕಿತ್ತು. ಆದರೆ ಕೇಂದ್ರ ಬಿಜೆಪಿ ಸರಕಾರ ರಾಜ್ಯದ ರೈತರ ಬೇಡಿಕೆಗಳನ್ನು ಕಡೆಗಣಿಸಿದೆ. ಕೊನೆಯ ಉಪಾಯವಾಗಿ, ನಮ್ಮ ನ್ಯಾಯಯುತ ಪಾಲನ್ನು ಪಡೆಯಲು ನಾವು ಸುಪ್ರೀಂ ಕೋರ್ಟ್ ನ ಮಧ್ಯಸ್ಥಿಕೆ ಕೋರಿದೆವು ಎಂದರು.

ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್(ಸಂಗ್ರಹ ಚಿತ್ರ)
ಲೋಕಸಭಾ ಚುನಾವಣೆ ನಂತರ ದೇಶದಲ್ಲಿ ಬದಲಾವಣೆಯಾಗಲಿದೆ ಎಂಬುದು ನನ್ನ ದೃಢ ನಂಬಿಕೆ: ಡಿ.ಕೆ.ಶಿವಕುಮಾರ್ (ಸಂದರ್ಶನ)

“ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಎಲ್ಲಾ ತೆರಿಗೆ ಹಣವನ್ನು ಗುಜರಾತ್‌ಗೆ ಹಿಂತಿರುಗಿಸಬೇಕೆಂದು ಒತ್ತಾಯಿಸಿದಾಗ, ಅವರು ಪ್ರತ್ಯೇಕತಾವಾದಿಯಾಗಿರಲಿಲ್ಲವೇ? ನಮ್ಮ ನ್ಯಾಯಯುತ ಪಾಲನ್ನು ನಾವು ಕೇಳುತ್ತಿದ್ದೇವೆ. ಕರ್ನಾಟಕದ ಅಗತ್ಯಗಳನ್ನು ಹತ್ತಿಕ್ಕುವ ಮೂಲಕ ಬಿಜೆಪಿ ಸರಕಾರ ಕರ್ನಾಟಕದ ಜನತೆಯನ್ನು ಅವಮಾನಿಸುತ್ತಿದೆ ಮತ್ತು ಒಕ್ಕೂಟವಾದವನ್ನು ದುರ್ಬಲಗೊಳಿಸುತ್ತಿದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಕಂಡು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಪರಿಹಾರಗಳನ್ನು ನೀಡಬೇಕು. ಇದು ಒಕ್ಕೂಟವನ್ನು ಬಲಪಡಿಸುತ್ತದೆ. ಬಿಜೆಪಿ ಅಧಿಕಾರೇತರ ರಾಜ್ಯಗಳ ಮೇಲೆ ಬಿಜೆಪಿಯ ದಾಳಿಯು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಟೀಕಿಸಿದರು.

ಕೆಪಿಸಿಸಿ ಮೀಡಿಯಾ ಸೆಲ್ ಅಧ್ಯಕ್ಷ ಹಾಗೂ ಮಾಜಿ ಎಂಎಲ್ ಸಿ ರಮೇಶ್ ಬಾಬು ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಅತಂತ್ರ ಪಕ್ಷ ಎಂದು ಕರೆಯುತ್ತಿರುವುದು ನಿರ್ಮಲಾ ಸೀತಾರಾಮನ್ ಅವರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದರು.

“ಕರ್ನಾಟಕವು ಬರ ಮತ್ತು ಅದರ ತೆರಿಗೆ ಪಾಲನ್ನು ನಿಭಾಯಿಸಲು NDRF ನಿಂದ ಹಣವನ್ನು ಪಡೆಯುತ್ತಿಲ್ಲ. ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಪರ ಧ್ವನಿ ಎತ್ತದಿರುವುದು ಬೇಸರದ ಸಂಗತಿ. ರಾಜ್ಯಸಭೆಯಲ್ಲಿ ತಾನು ಕನ್ನಡಿಗರನ್ನು ಪ್ರತಿನಿಧಿಸುತ್ತೇನೆ ಎಂಬುದನ್ನು ಅವರು ಮರೆತಿರಬಹುದು. ರಾಜ್ಯದ ಜನ ನಿರ್ಧರಿಸಲಿ. ಅವರಿಗೆ ಮತ್ತು ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com