ಮದ್ಯ ವ್ಯಸನ ಪ್ರೋತ್ಸಾಹಿಸಿದ್ದು ಮನೆಮುರುಕ ಕೆಲಸವಲ್ಲವೇ?: HDK ಗೆ ಕಾಂಗ್ರೆಸ್ ತಿರುಗೇಟು

ಮದ್ಯದ ಬೆಲೆಯ ಬಗ್ಗೆ ಮಾತನಾಡುತ್ತಾ ಮದ್ಯ ವ್ಯಸನವನ್ನು ಪ್ರೋತ್ಸಾಹಿಸಿದ್ದಿರಿ, ಇದು ಪುರುಷರನ್ನು ದಾರಿ ತಪ್ಪಿಸುವ ಕೆಲಸವಲ್ಲವೇ? ಕುಟುಂಬವನ್ನು ಹಾಳು ಮಾಡುವುದಲ್ಲವೇ, ಮನೆಮುರುಕ ಕೆಲಸವಲ್ಲವೇ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಕಾಂಗ್ರೆಸ್
ಕಾಂಗ್ರೆಸ್

ಬೆಂಗಳೂರು: ಮದ್ಯದ ಬೆಲೆಯ ಬಗ್ಗೆ ಮಾತನಾಡುತ್ತಾ ಮದ್ಯ ವ್ಯಸನವನ್ನು ಪ್ರೋತ್ಸಾಹಿಸಿದ್ದಿರಿ, ಇದು ಪುರುಷರನ್ನು ದಾರಿ ತಪ್ಪಿಸುವ ಕೆಲಸವಲ್ಲವೇ? ಕುಟುಂಬವನ್ನು ಹಾಳು ಮಾಡುವುದಲ್ಲವೇ, ಮನೆಮುರುಕ ಕೆಲಸವಲ್ಲವೇ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿತಪ್ಪಿದ್ದಾರೆಂಬ ಕುಮಾರಸ್ವಾಮಿಯವರ ಹೇಳಿಕೆಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನು ಮಾಡುವ ಮೂಲಕ ತಿರುಗೇಟು ನೀಡಿದೆ.

ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ" ಎನ್ನುವ ಮೂಲಕ ಕುಮಾರಸ್ವಾಮಿ ಅವರು ಮಹಿಳೆಯರ ನಡತೆಯನ್ನು ಪ್ರಶ್ನಿಸಿ ಇಡೀ ಮಹಿಳಾ ಸಮುದಾಯವನ್ನು ಅವಮಾನಿಸಿದ್ದಾರೆ. ಮಹಿಳೆಯರು ಸಬಲರಾಗುವುದು ಬಿಜೆಪಿ ಹಾಗೂ ಜೆಡಿಎಸ್ ನವರ ಕಣ್ಣಿಗೆ ದಾರಿ ತಪ್ಪಿದಂತೆ ಕಾಣುತ್ತದೆಯೇ? ಇದೇ ಕುಮಾರಸ್ವಾಮಿಯವರು ಮದ್ಯದ ಬೆಲೆಯ ಬಗ್ಗೆ ಮಾತನಾಡುತ್ತಾ ಮದ್ಯ ವ್ಯಸನವನ್ನು ಪ್ರೋತ್ಸಾಹಿಸಿದ್ದರು, ಇದು ಪುರುಷರನ್ನು ದಾರಿ ತಪ್ಪಿಸುವ ಕೆಲಸವಲ್ಲವೇ? ಕುಟುಂಬವನ್ನು ಹಾಳು ಮಾಡುವುದಲ್ಲವೇ, ಮನೆಮುರುಕ ಕೆಲಸವಲ್ಲವೇ? ಎಂದು ಪ್ರಶ್ನಿಸಿದೆ. ಕುಮ

ಕಾಂಗ್ರೆಸ್
ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ: ಹೆಚ್'ಡಿ.ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ, ಕುಟುಂಬದ ಬಗ್ಗೆ ಚಿಂತಿಸುತ್ತಿಲ್ಲ ಎಂದು ಮಾತನಾಡಿದ ಕುಮಾರಸ್ವಾಮಿ ಅವರಿಗೆ ಸಂಘಿ ಸಹವಾಸದಿಂದ ಈ ದುರ್ಬುದ್ಧಿ ಬಂದಿದೆಯೇ? ಮೈಮೇಲೆ ಬಿಜೆಪಿಗರು ಹಾಕಿದ್ದ ಸಂಘಿ ಶಾಲಿನ ಪ್ರಭಾವದಿಂದ ಈ ಮಾತುಗಳು ಬಂದಿರುವುದೇ? ದಾರಿ ತಪ್ಪಿದ ಮಗ ಕುಮಾರಸ್ವಾಮಿಯವರೇ, ದಾರಿ ತಪ್ಪಿದ್ದು ಹೆಣ್ಣು ಮಕ್ಕಳಲ್ಲ, ನೀವು ಎಂದು ವ್ಯಂಗ್ಯವಾಡಿದೆ.

ದಾರಿ ತಪ್ಪಿದ್ದು ಮಹಿಳೆಯರಲ್ಲ, ಕುಮಾರಸ್ವಾಮಿಯವರು. ಮಹಿಳೆಯರು ಸ್ವತಂತ್ರರಾಗುವುದು, ಸ್ವಾವಲಂಬಿಗಳಾಗುವುದು, ಸಬಲರಾಗುವುದು ಸಂಘಿ ಸಹವಾಸದವರಿಗೆ ದಾರಿ ತಪ್ಪಿದಂತೆ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಕುಮಾರಸ್ವಾಮಿ ಅವರೇ, ನೀವು ದಾರಿ ತಪ್ಪಿ ಯಾವ್ಯಾವ ಮನೆಗೆ ಹೋಗಿದ್ದಿರಿ ಎನ್ನುವುದು ರಾಜ್ಯದ ಜನತೆ ಕಂಡಿದ್ದಾರೆಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com