ಮಂಗಳೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ, ಕರಾವಳಿ ಸಂಸ್ಕೃತಿ ಅನಾವರಣ!

ಮಂಗಳೂರಿನಲ್ಲಿ ಭಾನುವಾರ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋಗೆ ಅಪಾರ ಜನಸ್ತೋಮವೇ ಹರಿದು ಬಂದಿತ್ತು. ಸಂಜೆ 7.15ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯವರು ನೇರವಾಗಿ ನಗರದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ತೆರಳಿ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.
ಪ್ರಧಾನಿ ಮೋದಿ, ಕೋಟಾ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ
ಪ್ರಧಾನಿ ಮೋದಿ, ಕೋಟಾ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ
Updated on

ಮಂಗಳೂರು: ಮಂಗಳೂರಿನಲ್ಲಿ ಭಾನುವಾರ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋಗೆ ಅಪಾರ ಜನಸ್ತೋಮವೇ ಹರಿದು ಬಂದಿತ್ತು. ಸಂಜೆ 7.15ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯವರು ನೇರವಾಗಿ ನಗರದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ತೆರಳಿ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.

ಸಮಾಜ ಸುಧಾರಕ ನಾರಾಯಣ ಗುರುಗಳ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದ ನಂತರ ಶ್ಲೋಕಗಳ ಪಠಣದೊಂದಿಗೆ ರೋಡ್ ಶೋ ಆರಂಭಿಸಿದರು. ಕೇಸರಿ ಟೋಪಿ ಮತ್ತು ಶಾಲುಗಳನ್ನು ಹಾಕಿಕೊಂಡು ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ ಸಾವಿರಾರು ಜನರು ಬಿಜೆಪಿ ಧ್ವಜ, ಕೇಸರಿ ಶಾಲು ಬೀಸುವ ಮೂಲಕ ಹೂಮಳೆ ಗರೆದು ಸ್ವಾಗತಿಸಿದರು.

ಅಲಂಕೃತವಾದ ತೆರೆದ ವಾಹನದಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡ ಪ್ರಧಾನಿ, ಕೇಸರಿ ಟೋಪಿ ಧರಿಸಿ, ಕೈಯಲ್ಲಿ ಬಿಜೆಪಿ ಚಿಹ್ನೆಯಾದ ಕಮಲದೊಂದಿಗೆ ಉತ್ಸಾಹಭರಿತ ಪ್ರೇಕ್ಷಕರತ್ತ ಕೈ ಬೀಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕೋಟಾ ಶ್ರೀನಿವಾಸ್ ಪೂಜಾರಿ ಅವರ ಪಕ್ಕದಲ್ಲಿದ್ದರು. ನಾರಾಯಣ ಗುರು ವೃತ್ತದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ನವಭಾರತ್ ವೃತ್ತದಲ್ಲಿ ರಾತ್ರಿ 8.45 ಕ್ಕೆ ರೋಡ್ ಶೋ ಮುಕ್ತಾಯಗೊಂಡಿತು. ನವಭಾರತ ಸರ್ಕಲ್‌ನಲ್ಲಿ ಎಸ್‌ಯುವಿ ಹತ್ತಿದ ಅವರು ಹಂಪನಕಟ್ಟೆ ವೃತ್ತದವರೆಗೆ ರಸ್ತೆಬದಿಯಲ್ಲಿ ನಿಂತಿದ್ದ ಜನರತ್ತ ಕೈ ಬೀಸಿದರು.

ಕರಾವಳಿ ಸಂಸ್ಕೃತಿ ಅನಾವರಣ: ಯಕ್ಷಗಾನ, ಹುಲಿ ಕುಣಿತ ಮತ್ತಿತರ ತಂಡಗಳಿಂದ ಡೋಲು ಹಾಗೂ ಇತರೆ ಸಂಗೀತ ವಾದ್ಯಗಳ ವಾದನ ನೆರೆದಿದ್ದವರಿಗೆ ಚೈತನ್ಯ ತುಂಬಿತು. ರೋಡ್ ಶೋ ಉದ್ದಕ್ಕೂ ಜನರು 'ಜೈ ಜೈ ಮೋದಿ' ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ನೆಚ್ಚಿನ ನಾಯಕನನ್ನು ಹುರಿದುಂಬಿಸಿದರು. ಮೋದಿ ಕಾರ್ಯಕ್ರಮಕ್ಕಾಗಿ ಮಂಗಳೂರು ಬಿಜೆಪಿ ಬಾವುಟ, ಬಂಟಿಂಗ್ಸ್‌ಗಳಿಂದ ಕೇಸರಿಮಯವಾಗಿತ್ತು. ಬೆಳಗ್ಗೆಯಿಂದಲೇ ಪಥಸಂಚಲನ ನಡೆಯುವ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಮಧ್ಯಾಹ್ನ 2 ಗಂಟೆಯಿಂದ ರೋಡ್‌ಶೋ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪ್ರಧಾನ ಮಂತ್ರಿಯ ದರ್ಶನಕ್ಕೆ ಸರಿಯಾದ ಸ್ಥಳವನ್ನು ಹುಡುಕಲು ಜನರು ಸಂಜೆ 5 ಗಂಟೆಯಿಂದಲೇ ರೋಡ್‌ಶೋಗೆ ಬರಲು ಪ್ರಾರಂಭಿಸಿದರು.

ಬಿಜೆಪಿಯ ಮಾಜಿ ಕಾರ್ಪೋರೇಟರ್ ರೂಪಾ ಡಿ ಬಂಗೇರ ಮಾತನಾಡಿ, ರೋಡ್‌ಶೋ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿ ಚೈತನ್ಯವನ್ನು ಮೂಡಿಸಿದೆ ಮತ್ತು ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗುವುದನ್ನು ನೋಡಲು ಕಾಯುತ್ತಿದ್ದಾರೆ ಎಂದು ಹೇಳಿದರು. ರಾಮಮಂದಿರವನ್ನು ಸಾಕಾರಗೊಳಿಸಿದ್ದಕ್ಕಾಗಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಅವರು ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ಮತ್ತೊಬ್ಬ ಬಿಜೆಪಿ ಕಾರ್ಯಕರ್ತರು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಮತ್ತು ಉಡುಪಿಯ ಬಿಜೆಪಿ ಶಾಸಕರು ಮತ್ತು ಇತರ ಬಿಜೆಪಿ ನಾಯಕರು ರೋಡ್ ಶೋ ಆರಂಭಕ್ಕೂ ಮುನ್ನ ಮೋದಿ ಅವರನ್ನು ಸ್ವಾಗತಿಸಿದರು. ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಪ್ರಧಾನಮಂತ್ರಿ ಅವರಿಗೆ ದೇವಿಯ ಭಾವಚಿತ್ರವನ್ನು ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com