ಜೂನ್ 4ಕ್ಕೆ ಪ್ರಧಾನಿ ಮೋದಿ ಕೆಳಗಿಳಿದು, ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ: ಸುರ್ಜೇವಾಲಾ

.4ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಳಗಿಳಿದು, ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಭಾನುವಾರ ಹೇಳಿದರು.
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ

ಬೆಂಗಳೂರು: ಜೂ.4ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಳಗಿಳಿದು, ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಭಾನುವಾರ ಹೇಳಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ನಂತರ ಕಾಂಗ್ರೆಸ್​ನವರು ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುತ್ತಾರೆ ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮುಂದಿನ 5 ವರ್ಷ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಜೊತೆಗೆ ಜೂನ್ 4ರ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದ್ದು ಮೋದಿ ಸರ್ಕಾರ ಅಂತ್ಯವಾಗಲಿದೆ. ನಮ್ಮ ಕಾಂಗ್ರೆಸ್ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪೊಳ್ಳು ಭರವಸೆಗಳಿಂದಾಗಿ ದೇಶದ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ಬಿಜೆಪಿಗೆ 400 ಸ್ಥಾನಗಳು ಬಂದರೆ ಸಂವಿಧಾನವನ್ನೇ ಬದಲಾಯಿಸಲಾಗುವುದು ಎಂದು ಬಿಜೆಪಿಯ ಹಲವು ಸಂಸದರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಸಂವಿಧಾನದ ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಸಿದೆ ಸಂವಿಧಾನದ ವಿರುದ್ಧ ಹೇಳಿಕೆ ನೀಡಿದ ನಾಯಕರ ವಿರುದ್ಧ ಪ್ರಧಾನಿ ಮೋದಿ ಕ್ರಮ ಕೈಗೊಂಡಿಲ್ಲ. ಅಂತಹ ನಾಯಕರ ಉಮೇದುವಾರಿಕೆಯನ್ನು ಅವರು ಹಿಂಪಡೆದಿಲ್ಲ. ಕರ್ನಾಟಕ ಮತ್ತು ಇತರ ಕೆಲವು ರಾಜ್ಯಗಳು ಅನುದಾನ ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ಈ ಮೂಲಕ ಬಿಜೆಪಿ ಹಲವು ರೀತಿಯಲ್ಲಿ ಸಂವಿಧಾನವನ್ನು ದುರ್ಬಲಗೊಳಿಸಿದೆ. "ಹಣಕಾಸಿನ ಸ್ವಾತಂತ್ರ್ಯದ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ ಎಂದು ಕಿಡಿಕಾರಿದರು.

ಸಮವಿಧಾನ ಬದಲಿಸುವ ಹೇಳಇಕೆ ನೀಡುತ್ತಿರುವ ನಾಯಕರಿಗೆ ಚುನಾವಣಾ ಆಯೋಗ ನೋಟಿಸ್ ನೀಡದಿರುವ ವಿಚಾರ ಕುರಿತು ಮಾತನಾಡಿ, ಇದು ದೇಶದ ವಾಸ್ತವ ಸ್ಥಿತಿಯಾಗಿದೆ. ಮೋದಿ ಅವರೇ ಸಚಿವರೊಬ್ಬರ ಸಮ್ಮುಖದಲ್ಲಿ ನಿಯಮಗಳನ್ನು ಬದಲಿಸಿ ಇಸಿಐ ರಚನೆ ಮಾಡಿದ್ದಾರೆ. ಇಸಿಐ ಅನ್ನು ಗುರುತಿಸಲಾಗದಷ್ಟು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ
ಟೆಕ್ ಸಿಟಿಯಿಂದ ಟ್ಯಾಂಕರ್‌ ಸಿಟಿ ಹೇಳಿಕೆ: ಪ್ರಧಾನಿ ಮೋದಿ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ

ಮೋದಿ ಮಾಡೆಲ್ ಅಂದ್ರೆ ಚೊಂಬು ಮಾಡೆಲ್. ಮೋದಿ ಮಾಡೆಲ್ ವಿಫಲವಾಗಿದೆ. ದಲಿತರು ಮತ್ತು ಒಬಿಸಿಗಳು, ಅಲ್ಪಸಂಖ್ಯಾತರು ಮತ್ತು ಬಡವರ ಹಕ್ಕುಗಳನ್ನು ಬಿಜೆಪಿ ಕಿತ್ತುಕೊಳ್ಳಲು ಬಯಸುತ್ತದೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಎಸ್ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧವಿದೆ ಎಂದು ಹೇಳಿದರು.

ವಿವಿಪ್ಯಾಟ್‌ಗಳ ಎಣಿಕೆಗೆ ಕಾಂಗ್ರೆಸ್ ಒತ್ತಾಯಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಮತಯಂತ್ರಗಳನ್ನು ಹ್ಯಾಕ್ ಮಾಡುವ ಗಂಭೀರ ಅನುಮಾನಗಳಿವೆ, ಆದ್ದರಿಂದ ಎಲ್ಲಾ ವಿವಿಪ್ಯಾಟ್ ಗಳನ್ನು ಎಣಿಕೆ ಮಾಡುವುದು ಅಗತ್ಯವಿದೆ ಎಂದರು.

ಕಡಿಮೆ ಮತದಾನವಾಗಿರುವುದು ಒಳ್ಳೆಯ ಲಕ್ಷಣವಲ್ಲ, ಭ್ರಷ್ಟಾಚಾರ, ಹಣದುಬ್ಬರ, ನಿರುದ್ಯೋಗ ಅಥವಾ ಸಂಪತ್ತಿನ ಕೇಂದ್ರೀಕರಣದ ಬಗ್ಗೆ ಎಂದಿಗೂ ಮಾತನಾಡದ ಬಿಜೆಪಿ ಮತ್ತು ಮೋದಿ ಬಗ್ಗೆ ಜನರಿಗೆ ಅಸಮಾಧಾನವಿದೆ. ಬಿಜೆಪಿಯ ಡಿಎನ್‌ಎ ತುಳಿತಕ್ಕೊಳಗಾದವರ ವಿರುದ್ಧವಾಗಿದೆ ಎಂದು ಕಿಡಿಕಾರಿದರು. ಇದೇ ವೇಳೆ ಎಸ್‌ಸಿ/ಎಸ್‌ಟಿ ಜನರ ಮೇಲಿನ ಹಲ್ಲೆಗಳು ಹೆಚ್ಚುತ್ತಿರುವುದನ್ನು ಸುರ್ಜೇವಾಲಾ ಅವರು ಖಂಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com