ರಾಜ್ಯದ ಜನತೆ ಬಿಜೆಪಿ ತಿರಸ್ಕರಿಸಿದ ಬಳಿಕ ಪ್ರಧಾನಿ ಮೋದಿ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ: ಕಾಂಗ್ರೆಸ್

2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ ತಿರಸ್ಕರಿಸಿದ ಬಳಿಕ ಪ್ರಧಾನಿ ಮೋದಿಯವರು ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ನವದೆಹಲಿ/ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ ತಿರಸ್ಕರಿಸಿದ ಬಳಿಕ ಪ್ರಧಾನಿ ಮೋದಿಯವರು ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಚ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೊದಲನೆಯದಾಗಿ ಆಹಾರ ಭದ್ರತಾ ಯೋಜನೆ ಅನ್ನಭಾಗ್ಯ ಯೋಜನೆ ಹಾಳು ಮಾಡಲು ಮೋದಿ ಪ್ರಯತ್ನಿಸಿದ್ದರು. ಆದರೆ, ಕಾಂಗ್ರೆಸ್ ಅಲುಗಾಡಲಿಲ್ಲ. ನಂತ 4.49 ಕೋಟಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಯೋಜನೆಯನ್ನು ಪ್ರಾರಂಭಿಸಿದೆವು. ಎರಡನೆಯದಾಗಿ, ಕರ್ನಾಟಕಕ್ಕೆ ಹಣವನ್ನು ಕಡಿತಗೊಳಿಸಿದರು. ಕರ್ನಾಟಕಕ್ಕೆ ಕೇಂದ್ರದ ಅನುದಾನ ಶೇಕಡಾ 23 ರಷ್ಟು ಕಡಿಮೆಯಾಗಿದೆ.

ಮೂರನೆಯದಾಗಿ, ರಾಜ್ಯದ ರೈತರಿಗೆ ಬರಬೇಕಾದ ನ್ಯಾಯಸಮ್ಮತವಾದ ಬರ ಪರಿಹಾರ ಹಣವನ್ನು ಕೇಂದ್ರವು ವಿಳಂಬಗೊಳಿಸಿತು. ಕರ್ನಾಟಕದ 236 ತಾಲೂಕುಗಳಲ್ಲಿ 223 ಬರ ಪರಿಸ್ಥಿತಿಯನ್ನು ಎದುರಿಸುತ್ತಿವೆ, 196 ತಾಲೂಕುಗಳನ್ನು ತೀವ್ರ ಹಾನಿಗೊಳಗಾಗಿವೆ. ಸೆಪ್ಟೆಂಬರ್ 2023 ರಲ್ಲಿ ರಾಜ್ಯ ಸರ್ಕಾರವು ಬರ ಪರಿಹಾರಕ್ಕಾಗಿ 18,172 ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಲು ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.

ಆದರೂ ಬಿಡುಗಡೆ ಮಾಡಿರಲಿಲ್ಲ. ಬರ ಪರಿಹಾರ ನೀಡಲು ವಿಫಲವಾದ ಮೋದಿ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗಿತ್ತು. ಕೇಂದ್ರ ಹಣಕಾಸು ಸಚಿವಾಲಯವು ಅಂತಿಮವಾಗಿ ಕರ್ನಾಟಕದ ರೈತರಿಗೆ 3,498 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com