ಸುರೇಶ್ ಡೆಲ್ಲಿಯಲ್ಲಿ ಕೂರೋ ಎಂಪಿ ಅಲ್ಲ, ಹಳ್ಳಿಯ ಸಂಸದ, ಕುಮಾರಸ್ವಾಮಿ ಅವನ ವಿರುದ್ಧ ಸ್ಪರ್ಧಿಸಿದರೆ ಭಯವಿಲ್ಲ!

ಜೆರೋಸಾ ಶಾಲೆ ವಿಚಾರದಲ್ಲಿ ಕಾನೂನು ಪ್ರಕ್ರಿಯೆ, ಮಂಗಳೂರಿನ ಅಭಿವೃದ್ಧಿಗೆ ಹೊಸ ಆಲೋಚನೆ ಇದೆ
ಡಿ ಕೆ ಶಿವಕುಮಾರ್(ಸಂಗ್ರಹ ಚಿತ್ರ)
ಡಿ ಕೆ ಶಿವಕುಮಾರ್(ಸಂಗ್ರಹ ಚಿತ್ರ)
Updated on

ಮಂಗಳೂರು: ಜೆರೋಸಾ ಶಾಲೆ ವಿಚಾರದಲ್ಲಿ ಕಾನೂನು ರೀತಿಯಲ್ಲಿ ಪ್ರಕ್ರಿಯೆಗಳು ನಡೆಯಲಿವೆ. ಯಾರೇ ರಾಜಕೀಯ ಮಾಡಿದ್ದರೂ ಕಾನೂನು ಅದರ ಕೆಲಸ ಮಾಡಲಿದೆ. ಅವರು ಹೋರಾಟ ಮಾಡುತ್ತಾ ಇರಲಿ, ಕಾನೂನು ಕೆಲಸ ಮಾಡುತ್ತದೆ. ನಾನು ಪೊಲೀಸ್ ಕೆಲಸ ಮಾಡಲು ಆಗಲ್ಲ, ಪೊಲೀಸರು ಮಾಡುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ಅನ್ಯಾಯ ಆದಾಗ ಬಿಜೆಪಿ ಮಾತನಾಡಿಲ್ಲ. ಬಜೆಟ್​ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೂ ಕೊಟ್ಟಿದ್ದೇವೆ, ಮುಸ್ಲಿಮರಿಗೆ ಕೊಡಬಾರದೇ, ಬಿಜೆಪಿ ರಾಜಕಾರಣ ಮಾಡುತ್ತಾ ಇದೆ, ಮಾಡಲಿ ಬಿಡಿ ಎಂದು ಟೀಕಿಸಿದರು.

ಮಂಗಳೂರು ಅಭಿವೃದ್ಧಿ ಬಗ್ಗೆ ಹೊಸ ಆಲೋಚನೆ: ಮಂಗಳೂರಿನಲ್ಲಿ ಧರ್ಮ ರಾಜಕೀಯ ಇದೆ. ಬಿಜೆಪಿ ಅಭಿವೃದ್ಧಿ ಮಾಡುತ್ತಾ ಇಲ್ಲ. ಈ ಜಿಲ್ಲೆಯ ಬಗ್ಗೆ ನಾವು ಹೊಸ ಅಲೋಚನೆ ಮಾಡುತ್ತೇವೆ. ಉದ್ಯೋಗ ಸೃಷ್ಟಿಸುತ್ತೇವೆ, ಸಂಜೆ ಏಳು ಗಂಟೆ ಬಳಿಕ ಮಂಗಳೂರು ಡೆಡ್ ಸಿಟಿ ಆಗಿದೆ. ವ್ಯಾಪಾರ ವಹಿವಾಟು ನಡೆದು ಜನರಿಗೆ ಉದ್ಯೋಗ ಸಿಗಬೇಕು. ಇಲ್ಲಿನ ಬ್ಯಾಂಕ್​​ಗಳು ಕೂಡ ಇಲ್ಲಿಂದ ಬೇರೆ ಕಡೆ ಹೋಗುತ್ತಾ ಇವೆ. ಇಲ್ಲಿನ ಜನ ದೇವಸ್ಥಾನಗಳಲ್ಲಿ ಭಕ್ತಿಯಿಂದ ಇರುತ್ತಾರೆ. ಅದೇ ವ್ಯವಹಾರಗಳಲ್ಲೂ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಲೋಕಸಭೆ ಚುನಾವಣೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ನಾಲ್ಕು ಹೆಸರುಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದೇವೆ. ಟೀಂ ಸರ್ವೇ ಬಳಿಕ ನೋಡೋಣ ಎಂದು ಹೇಳಿದರು.

ಡಿ ಕೆ ಸುರೇಶ್ ವಿರುದ್ಧ ಕುಮಾರಸ್ವಾಮಿ ಸ್ಪರ್ಧಿಸಲಿ ಬಿಡಿ: ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸದ ಡಿಕೆ ಸುರೇಶ್ ವಿರುದ್ಧವೇ ಸ್ಪರ್ಧಿಸಿದರೂ ಬೇಸರವಿಲ್ಲ. ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ, ಕುಮಾರಸ್ವಾಮಿ ವಿರುದ್ಧವೇ ಸ್ಪರ್ಧಿಸಿದ್ದವನು ನಾನು. ನನ್ನ ಸಹೋದರನ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೂ ಆತನೇ ಗೆದ್ದಿದ್ದಾನೆ. ಬಿಜೆಪಿ, ಜೆಡಿಎಸ್ ನನ್ನ ಸಹೋದರನ ವಿರುದ್ಧ ಸ್ಪರ್ಧಿಸಿದ್ದಾಗಲೂ ಗೆದ್ದಿದ್ದಾನೆ. ಸುರೇಶ್ ದೆಹಲಿಯಲ್ಲಿ ಕೂರುವ ಎಂಪಿ ಅಲ್ಲ, ಹಳ್ಳಿಯ ಸಂಸದ ಎಂದು ಹೇಳಿದರು.

ಡಿ ಕೆ ಶಿವಕುಮಾರ್(ಸಂಗ್ರಹ ಚಿತ್ರ)
ಬೇರೆಯವರು ಏಕೆ, ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ, ನೀವೇ ನನ್ನನ್ನು ಕೊಂದುಬಿಡಿ ಈಶ್ವರಪ್ಪನವರೇ: ಡಿ ಕೆ ಸುರೇಶ್

ದೇವೇಗೌಡ, ಕುಮಾರಸ್ವಾಮಿ ನಮ್ಮಲ್ಲಿ ಎಂಪಿ ಆಗಿದ್ದವರು. ಹಳೇ ಎಂಪಿಗಳು ಹಾಗೂ ಈಗಿನ ಎಂಪಿ ವ್ಯತ್ಯಾಸ ಜನ ನೋಡಿದ್ದಾರೆ‌. ಬೆಂಗಳೂರು ಗ್ರಾಮಾಂತರದಲ್ಲಿ ಯಾರೇ ನಿಂತರೂ ಸ್ವಾಗತಿಸುತ್ತೇವೆ ಎಂದರು.

ರಾಜಕೀಯದಲ್ಲಿ ಯಾವುದೂ ಶಾಶ್ವತ ಹಾಗೂ ಅಸಾಧ್ಯವಲ್ಲ. ರಾಜಕಾರಣ ಸಾಧ್ಯತೆಗಳ ಕಲೆ, ಹೀಗಾಗಿ ಇಲ್ಲಿ ಬದಲಾವಣೆ ವಿಶ್ವಾಸವಿದೆ. ಹೀಗಾಗಿ ಮಂಗಳೂರಿನಲ್ಲಿ ಈ ಬಾರಿ ಸಮಾವೇಶ ಮಾಡುತ್ತಾ ಇದ್ದೇವೆ. ಈ ಭಾಗದಲ್ಲಿ ನಾವು ಗೆಲ್ಲುವ ಸಾಧ್ಯತೆ ಹೆಚ್ಚಿದೆ, ಹಾಗಾಗಿ ಸಮಾವೇಶ ಮಾಡುತ್ತಿದ್ದೇವೆ. ಇಲ್ಲಿ ನಿರುದ್ಯೋಗ ಇದೆ, ಇಲ್ಲಿನ ಜನ ಬೇರೆ ಕಡೆ ಉದ್ಯೋಗಕ್ಕೆ ಹೋಗುತ್ತಾ ಇದ್ದಾರೆ. ಇಲ್ಲಿನವರು ಸೌದಿ, ಬೆಂಗಳೂರು, ಮುಂಬೈ ಕಡೆ ಹೋಗುತ್ತಾ ಇದ್ದಾರೆ. ಇಲ್ಲಿ ಎಷ್ಟೇ ಶಿಕ್ಷಣ ಸಂಸ್ಥೆಗಳಿದ್ದರೂ ಮಕ್ಕಳು ಡ್ರಾಪ್ ಔಟ್ ಆಗುತ್ತಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com