ಸಂವಿಧಾನ ಬದಲಾಯಿಸುವ ಷಡ್ಯಂತ್ರ, ಗಟ್ಟಿಯಾಗಿ ನಿಲ್ಲದಿದ್ದರೆ ಸರ್ವಾಧಿಕಾರ: ಖರ್ಗೆ

ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಭಾನುವಾರ ಹೇಳಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗಟ್ಟಿಯಾಗಿ ಮತ್ತು ಒಗ್ಗಟ್ಟಾಗಿ ನಿಲ್ಲದಿದ್ದರೆ ಭಾರತದಲ್ಲಿ “ಖಂಡಿತವಾಗಿಯೂ ಸರ್ವಾಧಿಕಾರ” ಇರುತ್ತದೆ ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಭಾನುವಾರ ಹೇಳಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗಟ್ಟಿಯಾಗಿ ಮತ್ತು ಒಗ್ಗಟ್ಟಾಗಿ ನಿಲ್ಲದಿದ್ದರೆ ಭಾರತದಲ್ಲಿ “ಖಂಡಿತವಾಗಿಯೂ ಸರ್ವಾಧಿಕಾರ” ಇರುತ್ತದೆ ಎಂದು ಎಚ್ಚರಿಸಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ 'ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ-2024'ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಖರ್ಗೆ, ಸಂವಿಧಾನವನ್ನು ಬದಲಾಯಿಸಲು ಅನೇಕ ಜನರು ಪ್ರಯತ್ನಿಸುತ್ತಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಗಟ್ಟಿಯಾಗಿ ಒಗ್ಗಟ್ಟಾಗಿ ನಿಲ್ಲದೇ ಸಂವಿಧಾನಕ್ಕೆ ಧಕ್ಕೆ ಉಂಟಾದರೆ ಮುಂದಿನ ದಿನಗಳಲ್ಲಿ ಈ ದೇಶದಲ್ಲಿ ಸರ್ವಾಧಿಕಾರ ನಡೆಯುವುದು ನಿಶ್ಚಿತ. ನೀವು ಸರ್ವಾಧಿಕಾರವನ್ನು ಬಯಸುತ್ತೀರಾ ಅಥವಾ ನ್ಯಾಯದೊಂದಿಗೆ ಜೀವನ ನಡೆಸಲು ಬಯಸುತ್ತೀರಾ? ಎಂಬುದನ್ನು ನಿರ್ಧರಿಸುವುದು ಪ್ರಮುಖವಾಗಿದೆ ಎಂದರು.

‘‘ಸಂವಿಧಾನ ಉಳಿದರೆ ಈ ದೇಶದ ಏಕತೆ ಉಳಿಯುತ್ತದೆ. ಪ್ರಜಾಪ್ರಭುತ್ವ ಉಳಿದರೆ ಎಲ್ಲರೂ ಸಮೃದ್ಧಿಯಿಂದ ಬದುಕಬಹುದು. ಆದರೆ ಇಂದು ಕೇಂದ್ರದಲ್ಲಿ ಸಂವಿಧಾನವನ್ನು ರಕ್ಷಿಸುವ ಅಥವಾ ಸಂವಿಧಾನವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವ ಯಾವುದೇ ಸರ್ಕಾರವಿಲ್ಲ. ಅದಕ್ಕಾಗಿ ಸಂವಿಧಾನವನ್ನು ರಕ್ಷಿಸಬೇಕಾಗಿದೆ. ಒಂದು ನಿರ್ದಿಷ್ಟ ಸಿದ್ಧಾಂತವನ್ನು ಹೇರಲು ಪ್ರಯತ್ನಿಸುವ ಮೂಲಕ ನಾಗರಿಕರನ್ನು ದಾರಿ ತಪ್ಪಿಸುವ ಪ್ರಯತ್ನಗಳ ಬಗ್ಗೆ ಜಾಗೃತರಾಗಬೇಕು ಎಂದು ಕರೆ ನೀಡಿದ ಖರ್ಗೆ, ಈಗಿರುವ ಸಂವಿಧಾನವನ್ನು ತೆಗೆದು ಹೊಸ ಸಂವಿಧಾನ ರಚಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಅವರು ‘ಸರ್ಕಾರದ ಗ್ಯಾರಂಟಿ’ ಬದಲಿಗೆ ‘ನನ್ನ ಗ್ಯಾರಂಟಿ’ ಅಥವಾ ‘ಬಿಜೆಪಿ ಸರ್ಕಾರದ ಗ್ಯಾರಂಟಿ’ ಎನ್ನುವುದನ್ನು ರೂಢಿಸಿಕೊಂಡಿದ್ದಾರೆ. "ಇದು ಮೋದಿ ಗ್ಯಾರಂಟಿ ಹೇಗೆ? ದೇಶದ ಜನರು ತೆರಿಗೆ ಪಾವತಿಸಿ ಹಣ ನೀಡಿದಾಗ ಅದು ನಿಮ್ಮದಲ್ಲ, ಈ ರೀತಿ ಒಬ್ಬ ವ್ಯಕ್ತಿ ನಾನು ಮಾಡಿದ್ದೇನೆ ಎಂದು ಹೇಳಿದರೆ ಮುಂದೊಂದು ದಿನ ದೇಶ ಸರ್ವಾಧಿಕಾರದತ್ತ ಸಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com