ರಾಜ್ಯಸಭಾ ಚುನಾವಣೆ: ಪ್ರತಿಪಕ್ಷಗಳ ಆಫರ್ ತಿರಸ್ಕರಿಸಿದ ನಾಯಕರ ಕುರಿತು ಸಿಎಂ-ಡಿಸಿಎಂ ಮೆಚ್ಚುಗೆ

ಕಾಂಗ್ರೆಸ್ ಪಕ್ಷದ ಕೆಲ ಶಾಸಕರಿಗೆ ಪ್ರತಿಪಕ್ಷಗಳ ನಾಯಕರು ಭಾರೀ ಮೊತ್ತದ ಆಫರ್ ನೀಡಿದ್ದು, ಈ ಆಫರ್'ನ್ನು ತಿರಸ್ಕರಿಸಿ ಪ್ರಾಮಾಣಿಕತೆ ಪ್ರದರ್ಶಿಸಿದ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೆಲ ಶಾಸಕರಿಗೆ ಪ್ರತಿಪಕ್ಷಗಳ ನಾಯಕರು ಭಾರೀ ಮೊತ್ತದ ಆಫರ್ ನೀಡಿದ್ದು, ಈ ಆಫರ್'ನ್ನು ತಿರಸ್ಕರಿಸಿ ಪ್ರಾಮಾಣಿಕತೆ ಪ್ರದರ್ಶಿಸಿದ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಗರದ ಹೋಟೆಲ್‌ನಲ್ಲಿ ಕಳೆದ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ನಾಯಕರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಪರವಾಗಿ ಮತ ಹಾಕಿದರೆ ಕೆಲವು ಕಾಂಗ್ರೆಸ್ ಶಾಸಕರಿಗೆ ಭಾರಿ ಮೊತ್ತದ ಹಣ ನೀಡುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ವಿರೋಧ ಪಕ್ಷಗಳ ಪ್ರಸ್ತಾಪದ ಬಗ್ಗೆ ನಮ್ಮ ಶಾಸಕರು ನಮಗೆ ಮಾಹಿತಿ ನೀಡಿದರು. ಒಗ್ಗಟ್ಟಿನಿಂದ ಇರುವ ಮೂಲಕ ಅವರ ತಂತ್ರವನ್ನು ಸೋಲಿಸಿದ್ದಾರೆಂದು ಡಿಕೆ. ಶಿವಕುಮಾರ್ ಅವರು ಹೇಳಿದರು. ಅಲ್ಲದೆ, ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಯಾರೂ ಅಡ್ಡ ಮತದಾನ ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಸಂಗ್ರಹ ಚಿತ್ರ
ರಾಜ್ಯಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ: ಅಡ್ಡ ಮತದಾನದ ಭೀತಿ, ಶಾಸಕರಿಗೆ ಸಿಎಂ-ಡಿಸಿಎಂ ಕಿವಿಮಾತು

ಸಭೆಯಲ್ಲಿ ಯಾವುದೇ ಮತವು ಅಸಿಂಧುವಾಗದಂತೆ ಖಾತ್ರಿಪಡಿಸಲು ಯಾವುದೇ ತಪ್ಪು ಮಾಡದೆ ಮತ ಚಲಾಯಿಸುವ ಬಗ್ಗೆ ಶಾಸಕರಿಗೆ ತರಬೇತಿ ನೀಡಲು ಅಣಕು ಮತದಾನ ನಡೆಸಲಾಯಿತು.

ಮೊದಲು ಪಕ್ಷದ ಅಭ್ಯರ್ಥಿ ಅಜಯ್ ಮಾಕನ್ ಪರ ಅಣಕು ಮತದಾನ ನಡೆದಿದ್ದು, ನಂತರ ಸೈಯದ್ ನಸೀರ್ ಹುಸೇನ್ ಮತ್ತು ಜಿ.ಸಿ.ಚಂದ್ರಶೇಖರ್ ಪರ ಮತಯಾಚನೆ ನಡೆಸಲಾಯಿತು.

ಇಂದು ಬೆಳಗ್ಗೆ ಶಾಸಕರು ವಿಧಾನಸೌಧಕ್ಕೆ ಆಗಮಿಸಲಿದ್ದು, ಪ್ರತಿ ಅಭ್ಯರ್ಥಿಗೆ 46 ಮತಗಳನ್ನು ಹಂಚಿಕೆ ಮಾಡಲಾಗುವುದು. ಪ್ರತಿಸ್ಪರ್ಧಿ ಪಕ್ಷಗಳಿಂದ ಪಕ್ಷವು ಇನ್ನೂ ನಾಲ್ಕು ಹೆಚ್ಚುವರಿ ಮತಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ನಾಯಕರು ಆಶಿಸಿದ್ದಾರೆ.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸ್ವತಂತ್ರ ಅಭ್ಯರ್ಥಿಗಳಾದ ಲತಾ ಮಲ್ಲಿಕಾರ್ಜುನ್‌, ಪುಟ್ಟಸ್ವಾಮಿಗೌಡ, ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಸೇರಿದಂತೆ 134 ಕಾಂಗ್ರೆಸ್‌ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com