ಪ್ರತ್ಯೇಕ ರಾಷ್ಟ್ರದ ಬೇಡಿಕೆ: ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ವಿರುದ್ಧ ನಿರ್ಮಲಾ ಸೀತಾರಾಮನ್ ವಾಗ್ದಾಳಿ

ಕೇಂದ್ರದಿಂದ ಅನುದಾನ ಬಿಡುಗಡೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿರುವ ದಕ್ಷಿಣ ರಾಜ್ಯಗಳು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಬೇಕಾಗುತ್ತದೆ ಎಂಬ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಹೇಳಿಕೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ಬೆಂಗಳೂರು: ಕೇಂದ್ರದಿಂದ ಅನುದಾನ ಬಿಡುಗಡೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿರುವ ದಕ್ಷಿಣ ರಾಜ್ಯಗಳು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಬೇಕಾಗುತ್ತದೆ ಎಂಬ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಹೇಳಿಕೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

ಈ ವಿಚಾರದಲ್ಲಿ ಹಣಕಾಸು ಆಯೋಗದ ನಿರ್ಧಾರ ಪಾಲಿಸುವುದನ್ನು ಹೊರತುಪಡಿಸಿ ಕೇಂದ್ರ ಸರ್ಕಾರವು ಯಾವುದೇ ಪಾತ್ರ ವಹಿಸುವುದಿಲ್ಲ. ರಾಜ್ಯಗಳು ಆಯೋಗದೊಂದಿಗೆ ಮಾತನಾಡುವ ಮೂಲಕ ಅನುದಾನ ಪಡೆಯುವ ಅಗತ್ಯವನ್ನು ಒತ್ತಿಹೇಳಬೇಕಿರುತ್ತದೆ ಎಂದು ಹೇಳಿದರು.

'ದಕ್ಷಿಣದ ರಾಜ್ಯಗಳಾಗಿದ್ದರೆ... ಅವುಗಳನ್ನು ದಕ್ಷಿಣದ ರಾಜ್ಯಗಳೆಂದು ಸೇರಿಸಲು ನಾನು ಬಯಸುವುದಿಲ್ಲ. ಪ್ರತಿಯೊಂದಕ್ಕೂ ತನ್ನದೇ ಆದ ಸಾಮರ್ಥ್ಯವಿದೆ ಮತ್ತು ಅದು ಈಗ 'ದಕ್ಷಿಣ ರಾಜ್ಯಗಳು ಒಟ್ಟಾಗಿ' ಎಂಬ ಅತ್ಯಂತ ಅಪಾಯಕಾರಿ ಮಿತಿಗೆ ಸಿಲುಕುತ್ತಿವೆ. ನಾವು ಈಗಾಗಲೇ ಪ್ರತ್ಯೇಕ ರಾಷ್ಟ್ರ ಹೊಂದಿದ್ದೇವೆ' ಎಂದು ಹಣಕಾಸು ಸಚಿವೆ ಬುಧವಾರ ಇಲ್ಲಿ ನಡೆದ 'ದಿ ಇಂಡಿಯನ್ ಎಕ್ಸ್‌ಪ್ರೆಸ್ ಅಡ್ಡಾ' ಸಂವಾದದ ಸಂದರ್ಭದಲ್ಲಿ ಹೇಳಿದರು.

ನಿರ್ಮಲಾ ಸೀತಾರಾಮನ್
‘ಪ್ರತ್ಯೇಕ ರಾಷ್ಟ್ರ’ ಹೇಳಿಕೆ: ಡಿಕೆ.ಸುರೇಶ್ ನಿವಾಸವನ್ನು ಮುತ್ತಿಗೆ ಹಾಕಿದ ಬಿಜೆಪಿ, ವಿರೋಧ ಬೆನ್ನಲ್ಲೇ ಯೂಟರ್ನ್ ಹೊಡೆದ ಸಂಸದ?

ಈ ತಿಂಗಳ ಆರಂಭದಲ್ಲಿ, ಬೆಂಗಳೂರು ಗ್ರಾಮಾಂತರದ ಸಂಸದ ಸುರೇಶ್, ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ 'ಅನ್ಯಾಯ'ವನ್ನು ಸರಿಪಡಿಸದಿದ್ದರೆ, ದಕ್ಷಿಣದ ರಾಜ್ಯಗಳು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಬೇಕಾಗುತ್ತದೆ ಎಂದು ಹೇಳಿದ್ದರು.

ದಕ್ಷಿಣದಿಂದ ಸಂಗ್ರಹಿಸಲಾದ ತೆರಿಗೆಯನ್ನು ಉತ್ತರ ಭಾರತಕ್ಕೆ ನೀಡಲಾಲಾಗುತ್ತಿದೆ ಮತ್ತು ದಕ್ಷಿಣ ರಾಜ್ಯಗಳು ಸರಿಯಾದ ಪಾಲು ಪಡೆಯುತ್ತಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.

'ನಿಮ್ಮಲ್ಲಿ ಓರ್ವ ಜವಾಬ್ದಾರಿಯುತ ಸಂಸದರು ಮತ್ತು ಕರ್ನಾಟಕದ ಉಪ ಮುಖ್ಯಮಂತ್ರಿಗಳ ಸಹೋದರ ಇದ್ದಾರೆ. ಅವರು ದಕ್ಷಿಣ ರಾಜ್ಯಗಳ ಪ್ರತ್ಯೇಕ ರಾಷ್ಟ್ರವನ್ನು ಹೊಂದುತ್ತೇವೆ ಎಂದು ಹೇಳುತ್ತಾರೆ. ಅದು ಆ ಮಟ್ಟಕ್ಕೆ ಹೋಗುವುದಿಲ್ಲ. ಕ್ಷಮಿಸಿ, ನಾನು ಅದರೊಂದಿಗೆ ಇರಲು ಸಾಧ್ಯವಿಲ್ಲ' ಎಂದು ಸೀತಾರಾಮನ್ ಹೇಳಿದರು.

ನಿರ್ಮಲಾ ಸೀತಾರಾಮನ್
'ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಕೇಳಲು ಸಾಧ್ಯವಿಲ್ಲ': ಸಂಸದ DK ಸುರೇಶ್ ‘ಭಾರತ ವಿಭಜನೆ’‌ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ವಿರೋಧ

'ನಾನು ಕೂಡ ದಕ್ಷಿಣದ ರಾಜ್ಯದಿಂದ ಬಂದವಳಾಗಿದ್ದೇನೆ. ದಕ್ಷಿಣ ರಾಜ್ಯಗಳಿಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡುವವರೊಂದಿಗೆ ನಾನು ಒಂದು ಕ್ಷಣ ಕೇಳಲು ಸಾಧ್ಯವಿಲ್ಲ, ಯಾರೊಂದಿಗೂ ನಿಲ್ಲಲು ಸಾಧ್ಯವಿಲ್ಲ. ಅದು ಹಾಗಾಗುವುದಿಲ್ಲ. ನಾನು ಆ ಬಗ್ಗೆ ಚಿಂಚಿತಳಾಗಿದ್ದೇನೆ' ಎಂದರು.

ಸೂಚ್ಯಂಕದಲ್ಲಿ ದಕ್ಷಿಣದ ರಾಜ್ಯಗಳು ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಶ್ಲಾಘಿಸಿದ ಸೀತಾರಾಮನ್, ದಕ್ಷಿಣದ ರಾಜ್ಯಗಳು ಹಣಕಾಸು ಆಯೋಗದೊಂದಿಗೆ ಮಾತನಾಡುವಾಗ, ಅವರು ತಮ್ಮ ಬೇಡಿಕೆಗಳು ಮತ್ತು ತೂಕದ ಬಗ್ಗೆ ಒತ್ತಿ ಹೇಳಬೇಕು ಮತ್ತು ಮಾತನಾಡಬೇಕು. ‘ಹಣಕಾಸು ಆಯೋಗದ ನಿರ್ಧಾರ ಪಾಲಿಸುವುದನ್ನು ಬಿಟ್ಟು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ’ ಎಂದು ವಿತ್ತ ಸಚಿವೆ ಒತ್ತಿ ಹೇಳಿದರು.

'ನೀವು ತಿಂಗಳಿಗೆ ಇಷ್ಟು ಹಣವನ್ನು ರಾಜ್ಯಗಳಿಗೆ ನೀಡಿ ಎಂದು ಹಣಕಾಸು ಆಯುಕ್ತರು ನನಗೆ ಹೇಳಿದರೆ, ನಾನು ಅದನ್ನು ಮಾಡಬೇಕಾಗಿದೆ. ಯಾವುದೇ ಹಣಕಾಸು ಸಚಿವರು ಅದನ್ನು ಒಬ್ಬ ಅಥವಾ ಇನ್ನೊಬ್ಬರ ಪರವಾಗಿ ತಿರುಚಲು ಯಾವುದೇ ಮಾರ್ಗವಿಲ್ಲ' ಎಂದು ಸೇರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com