ಕಾಂಗ್ರೆಸ್ ಎಂಎಲ್ ಸಿ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ರಾಜೀನಾಮೆ ಅಂಗೀಕರಿಸಿದ ಹೊರಟ್ಟಿ

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಕಾಂಗ್ರೆಸ್ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಗುರುವಾರ ಅಂಗೀಕರಿಸಿದ್ದಾರೆ.
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಕಾಂಗ್ರೆಸ್ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಗುರುವಾರ ಅಂಗೀಕರಿಸಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಇಮೇಲ್ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದು, ಅದನ್ನು ಅವರು ಅಂಗೀಕರಿಸಿದ್ದಾರೆ.

ಇದಕ್ಕೂ ಮುನ್ನ ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊರಟ್ಟಿ ಅವರು, . ನನಗೆ 11:45ಕ್ಕೆ ಜಗದೀಶ್ ಶೆಟ್ಟರ್ ಕಾಲ್ ಮಾಡಿದ್ದರು. ನಾನು ಬಿಜೆಪಿಗೆ ಹೋಗ್ತಿದ್ದೀನಿ ರಾಜಿನಾಮೇ ಕೊಡುತ್ತೇನೆ ಎಂದು ಹೇಳಿದರು. ನಾನು ಕೊಡಿ ಅಂತ ಹೇಳಿದೆ ಎಂದರು.

ಆದರೆ, ಶೆಟ್ಟರ್​ ಅವರು ರಾಜೀನಾಮೆ ಪತ್ರವನ್ನು ಮೇಲ್ ಮಾಡ್ತಿನಿ ಎಂದಿದ್ದರು, ನನಗೆ ಇನ್ನೂ ಮೇಲ್ ಬಂದಿಲ್ಲ. ಮೇಲ್ ಬಂದರೂ ಸಹ ಅದನ್ನು ಗಣನೆ ತೆಗೆದುಕೊಳ್ಳಲು ಆಗೋದಿಲ್ಲ. ಯಾವುದೇ ಸದಸ್ಯ ನೇರವಾಗಿ ಬಂದು ರಾಜೀನಾಮೆ ಕೊಡಬೇಕು ಎಂದು ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ಪಡೆಯುವ ವೇಳೆ ನಾವು ಅವರನ್ನು ಸ್ವ-ಇಚ್ಛೆಯಿಂದ ರಾಜೀನಾಮೆ ಕೊಡ್ತಿದ್ದರಾ ಅಂತ ಕೇಳ್ತೀವಿ. ಅವರು ಪಕ್ಷ ಬಿಟ್ಟು ಪಕ್ಷ ಹೋಗೋದು ಅವರ ಇಷ್ಟ. ಆದರೆ ಜಗದೀಶ್ ಶೆಟ್ಟರ್ ಅವರು ಈಗಲೂ ಕಾಂಗ್ರೆಸ್​ ಸದಸ್ಯರು. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆದರೂ ಆಗಬಹುದು ಎಂದು ಸಭಾಪತಿಗಳು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com