ಎಂಇಎಸ್ ಮತಗಳು ಬಿಜೆಪಿಗೆ ಹೋಗಿದ್ದರಿಂದಲೇ ನನ್ನ ಮಗನಿಗೆ ಸೋಲಾಯಿತು: ಲಕ್ಷ್ಮಿ ಹೆಬ್ಬಾಳ್ಕರ್

ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮತಗಳು ಬಿಜೆಪಿಗೆ ಹೋಗಿದ್ದರಿಂದಲೇ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸೋಲು ಕಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್
ಲಕ್ಷ್ಮಿ ಹೆಬ್ಬಾಳ್ಕರ್
Updated on

ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮತಗಳು ಬಿಜೆಪಿಗೆ ಹೋಗಿದ್ದರಿಂದಲೇ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸೋಲು ಕಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಲಕ್ಷ್ಮಿ ಈ ವಿಷಯ ತಿಳಿಸಿದರು.

ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಅವರ ಪುತ್ರ ಮೃಣಾಲ್ ಬಿಜೆಪಿಯ ಜಗದೀಶ್ ಶೆಟ್ಟರ್ ವಿರುದ್ಧ 1.78 ಲಕ್ಷ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

'ಬೆಳಗಾವಿಯಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿತ್ತು. ಆದರೆ, ಈ ಬಾರಿ ಬಿಜೆಪಿ ಮತ್ತು ಎಂಇಎಸ್ ಒಟ್ಟಿಗೆ ಬಂದಂತೆ ಕಾಣುತ್ತಿದೆ' ಎಂದು ಲಕ್ಷ್ಮಿ ಹೇಳಿದರು.

'ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮಾಂತರದಲ್ಲಿ ಎಂಇಎಸ್ 45 ಸಾವಿರ ಮತಗಳನ್ನು ಪಡೆದಿದೆ. ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ 4 ಲಕ್ಷ ಮತ ಪಡೆದಿದ್ದರೆ, ಎಂಇಎಸ್ 1.30 ಲಕ್ಷ ಮತ ಪಡೆದಿತ್ತು. ಈ ಬಾರಿ ಎಂಇಎಸ್ ಅಭ್ಯರ್ಥಿ ಕೇವಲ 9 ಸಾವಿರ ಮತ ಪಡೆದಿದ್ದಾರೆ' ಎಂದು ಹೇಳಿದರು.

ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದನ್ನು ಲಕ್ಷ್ಮಿ ಸಮರ್ಥಿಸಿಕೊಂಡಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ನಾನು ಯಾರ ಸ್ಥಾನವನ್ನು ಕಿತ್ತುಕೊಂಡಿಲ್ಲ, ಮಂಗಳಾ ಅಂಗಡಿಗೆ ರಾಜಕೀಯ ಅನುಭವ ಕಡಿಮೆ- ಲಕ್ಷ್ಮಿ ಹೆಬ್ಬಾಳ್ಕರ್

'2018ರಲ್ಲಿ ನಾನು 52,000 ಮತಗಳ ಅಂತರದಿಂದ ಗೆದ್ದಿದ್ದೆ. ಒಂದು ವರ್ಷದ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ನನ್ನ ಭಾಗದಲ್ಲಿ ಸುರೇಶ ಅಂಗಡಿ 79 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದರು. 2023ರಲ್ಲಿ ನಾನು 59,000 ಮತಗಳಿಂದ ಗೆದ್ದಿದ್ದೆ. ಆದ್ದರಿಂದ, ಮತದಾರರ ಮನಸ್ಥಿತಿಯು ಚುನಾವಣೆಯಿಂದ ಚುನಾವಣೆಗೆ ವಿಭಿನ್ನವಾಗಿದೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com