ಮುಂಬರುವ ಚುನಾವಣೆಗಳಲ್ಲೂ ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿ ಸಂಸದರು ಉತ್ಸುಕ; ಕೇಸರಿ ಪಾಳಯದ ಕೆಲ ನಾಯಕರಲ್ಲಿ ಆತಂಕ!

ಬಿಬಿಎಂಪಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಉಭಯ ಪಕ್ಷಗಳಿಗೆ ಅನುಕೂಲವಾಗಲಿದೆ ಎಂದು ಒಕ್ಕಲಿಗ ನಾಯಕಿಯೂ ಆಗಿರುವ ಕೇಂದ್ರ ಎಂಎಸ್‌ಎಂಇ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭಾನುವಾರ ಹೇಳಿದ್ದಾರೆ.
ಮುಂಬರುವ ಚುನಾವಣೆಗಳಲ್ಲೂ ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿ ಸಂಸದರು ಉತ್ಸುಕ; ಕೇಸರಿ ಪಾಳಯದ ಕೆಲ ನಾಯಕರಲ್ಲಿ ಆತಂಕ!
Updated on

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯ ಯಶಸ್ಸಿನ ರುಚಿ ಕಂಡಿರುವ ಬಿಜೆಪಿ ಸಂಸದರು, ಅದರಲ್ಲೂ ವಿಶೇಷವಾಗಿ ಹಳೇ ಮೈಸೂರು ಭಾಗದ ಬಿಜೆಪಿ ಸಂಸದರು ಮುಂಬರುವ ಬಿಬಿಎಂಪಿ ಮತ್ತು ಜಿಲ್ಲಾ ಪಂಚಾಯಿತಿ/ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲೂ ಮೈತ್ರಿಯನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆ.

ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜೆಡಿಎಸ್ ಮತಗಳನ್ನು ತಮ್ಮ ಪರವಾಗಿ ಪರಿವರ್ತಿಸುವುದರೊಂದಿಗೆ ಮೈತ್ರಿಯು ಲೋಕಸಭಾ ಚುನಾವಣಾ ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದ್ದು, ಬಿಜೆಪಿ ಸಂಸದರು ಪ್ರಭಾವಿತರಾಗಿದ್ದಾರೆ.

ಬಿಬಿಎಂಪಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಉಭಯ ಪಕ್ಷಗಳಿಗೆ ಅನುಕೂಲವಾಗಲಿದೆ ಎಂದು ಒಕ್ಕಲಿಗ ನಾಯಕಿಯೂ ಆಗಿರುವ ಕೇಂದ್ರ ಎಂಎಸ್‌ಎಂಇ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭಾನುವಾರ ಹೇಳಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬೆಂಬಲ ಸೂಚಿಸಿದ್ದರಿಂದ ಅವರು ಗೆಲುವು ಸಾಧಿಸಿದ್ದು, ಉಭಯ ಪಕ್ಷಗಳ ನಾಯಕರು ಅವರಿಗೆ ಅಭಿನಂದನೆ ಸಲ್ಲಿಸಿದರು. ಭವಿಷ್ಯದಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಬಹುದು ಎಂಬ ಸುಳಿವು ನೀಡಿದರು.

ವೀರಶೈವ ಲಿಂಗಾಯತ ಸಮುದಾಯದವರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಹಾಗೂ ಜಲಶಕ್ತಿ ಸಚಿವ ವಿ ಸೋಮಣ್ಣ ಅವರು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಮತ್ತು ಕೇಂದ್ರದ ಭಾರಿ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಮುಂಬರುವ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಸಲು ಉತ್ಸುಕರಾಗಿದ್ದಾರೆ. ಹಳೇ ಮೈಸೂರು ಭಾಗದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ವಿ ಸೋಮಣ್ಣ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಮಾತು ಮುಖ್ಯವಾಗಿತ್ತು. ಹೀಗಾಗಿ, ಬಿಬಿಎಂಪಿ ಮತ್ತು ಜಿಲ್ಲಾ/ತಾಲ್ಲೂಕು ಪಂಚಾಯಿತಿ ಚುನಾವಣೆ ಸೇರಿದಂತೆ ಮುಂದಿನ ಚುನಾವಣೆಗಳಲ್ಲಿ ಈ ಪ್ರದೇಶದಲ್ಲಿ ಜೆಡಿಎಸ್‌ ಜೊತೆಗೆ ಮೈತ್ರಿ ಮುಂದುವರಿಯಲಿದೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.

ಮುಂಬರುವ ಚುನಾವಣೆಗಳಲ್ಲೂ ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿ ಸಂಸದರು ಉತ್ಸುಕ; ಕೇಸರಿ ಪಾಳಯದ ಕೆಲ ನಾಯಕರಲ್ಲಿ ಆತಂಕ!
ಬೀಸೋ ದೊಣ್ಣೆಯಿಂದ ಪಾರು: ಯಡಿಯೂರಪ್ಪ ಮುಂದಿನ ನಡೆಯೇ ಈಗ ಕುತೂಹಲ! (ಸುದ್ದಿ ವಿಶ್ಲೇಷಣೆ)

'ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಏನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೀರಿ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಈ ಕೆಲಸ ಮಾಡಿದ್ದರೆ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳನ್ನು ಗೆಲ್ಲುತ್ತಿತ್ತು' ಎಂದು ಸೋಮಣ್ಣ ಅವರು ಭಾನುವಾರ ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮೈತ್ರಿ ಮುಂದುವರಿಸಲು ಸಂಸದರು ಒಪ್ಪಿಗೆ ಸೂಚಿಸಿದ್ದರೂ, ಜೆಡಿಎಸ್ ಜೊತೆಗೆ ಮೈತ್ರಿ ಮುಂದುವರಿಸಿದ್ದೇ ಆದರೆ ಭವಿಷ್ಯದಲ್ಲಿ ಪಕ್ಷದ ಮುಂದಿನ ಯೋಜನೆಗಳಲ್ಲಿ ತಮ್ಮ ಪ್ರಭಾವ ಕುಗ್ಗುತ್ತದೆ ಎಂದು ಬಿಜೆಪಿಯೊಳಗಿನ ಕೆಲವು ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮೂಲವೊಂದು ಟಿಎನ್‌ಐಇಗೆ ತಿಳಿಸಿದೆ.

ಮುಂಬರುವ ಚುನಾವಣೆಗಳಲ್ಲೂ ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿ ಸಂಸದರು ಉತ್ಸುಕ; ಕೇಸರಿ ಪಾಳಯದ ಕೆಲ ನಾಯಕರಲ್ಲಿ ಆತಂಕ!
ಬಿಜೆಪಿಯಲ್ಲಿ ಕಿಚ್ಚೆಬ್ಬಿಸಿದ ಕುಮಾರ ಪರ್ವ (ಸುದ್ದಿ ವಿಶ್ಲೇಷಣೆ)

'ಮೈತ್ರಿಯ ಬಲದಿಂದ ರಾಜ್ಯದಲ್ಲಿ ಯಶಸ್ವಿಯಾದ ನಂತರ ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತು ಸಂಸದರು ಜೆಡಿಎಸ್‌ನ ರಾಜ್ಯ ನಾಯಕತ್ವದ ಜೊತೆಗೆ ಉತ್ತಮವಾದ ಸಂಬಂಧ ಹೊಂದುತ್ತಲೇ ಇರುವುದರಿಂದ ಬಿಜೆಪಿಯೊಳಗಿನ ಇತರ ನಾಯಕರಿಗೆ ಅವಕಾಶಗಳು ಕಡಿಮೆಯಾಗುತ್ತವೆ. ಇದರಿಂದ ಬಿಜೆಪಿಯೊಳಗಿನ ಒಕ್ಕಲಿಗ ನಾಯಕರು, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದ್ದಾರೆ. ಒಕ್ಕಲಿಗ ಸಮುದಾಯ ಮತ್ತು ಜೆಡಿಎಸ್ (ಜನತಾ ದಳ (ಜಾತ್ಯತೀತ)) ಎರಡಕ್ಕೂ ಭದ್ರಕೋಟೆಯಾಗಿರುವ ಹಳೆ ಮೈಸೂರು ಭಾಗದಲ್ಲಿ ಇದು ವಿಶೇಷವಾಗಿ ನಿಜವಾಗಿದೆ. ಈ ಪ್ರದೇಶದಲ್ಲಿ, ಮೈತ್ರಿಯು ಬಿಜೆಪಿ ನಾಯಕರ ಪ್ರಭಾವ ಮತ್ತು ಅವಕಾಶಗಳನ್ನು ಸೀಮಿತಗೊಳಿಸಬಹುದು' ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com