ಲೋಕಸಭೆ ಪ್ರವೇಶಿಸಿದ ಪ್ರಮುಖ ನಾಯಕರು: ವಿಧಾನಸಭೆಯಲ್ಲಿ ಬಿಜೆಪಿಯ ಪ್ರಖರ ವಾಗ್ಮಿಗಳ ಕೊರತೆ!

ಕರ್ನಾಟಕ ವಿಧಾನಮಂಡಲ ಅಧಿವೇಶನಕ್ಕೆ ಸಿದ್ಧತೆ ನಡೆಯುತ್ತಿರುವುದರ ಮಧ್ಯೆ ಸರ್ಕಾರವನ್ನು ಧೈರ್ಯದಿಂದ ತರಾಟೆಗೆ ತೆಗೆದುಕೊಳ್ಳುವ ವಿರೋಧ ಪಕ್ಷದ ನಾಯಕರ ಅನುಪಸ್ಥಿತಿ ವಿಧಾನಸಭೆಯಲ್ಲಿ ಈ ಬಾರಿ ಕಾಡಲಿದೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Updated on

ಬೆಂಗಳೂರು: ಕರ್ನಾಟಕ ವಿಧಾನಮಂಡಲ ಅಧಿವೇಶನಕ್ಕೆ ಸಿದ್ಧತೆ ನಡೆಯುತ್ತಿರುವುದರ ಮಧ್ಯೆ ಸರ್ಕಾರವನ್ನು ಧೈರ್ಯದಿಂದ ತರಾಟೆಗೆ ತೆಗೆದುಕೊಳ್ಳುವ ವಿರೋಧ ಪಕ್ಷದ ನಾಯಕರ ಅನುಪಸ್ಥಿತಿ ವಿಧಾನಸಭೆಯಲ್ಲಿ ಈ ಬಾರಿ ಕಾಡಲಿದೆ. ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಲೋಕಸಭೆಗೆ ಆಯ್ಕೆಯಾಗಿರುವುದರಿಂದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ ಮಂಕಾಗುವ ಸಾಧ್ಯತೆಯೇ ಹೆಚ್ಚು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾಂವ್ ಶಾಸಕರಾಗಿದ್ದರೆ, ಜಗದೀಶ್ ಶೆಟ್ಟರ್ ಎಂಎಲ್ ಸಿ ಆಗಿದ್ದರು. ಚನ್ನಪಟ್ಟಣ ಶಾಸಕರಾಗಿದ್ದ ಎನ್‌ಡಿಎ ಮೈತ್ರಿಕೂಟದ ಜೆಡಿಎಸ್ ಮುಖಂಡ ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ದೆಹಲಿಗೆ ಹಾರಿದ್ದಾರೆ.

2023 ರ ವಿಧಾನಸಭೆ ಚುನಾವಣೆಯ ನಂತರ ಶಾಸಕಾಂಗದಲ್ಲಿ ಬಿಜೆಪಿಯ ಸ್ಫೂರ್ತಿ ಕುಸಿದಿದೆ ಎಂಬುದು ವಾಸ್ತವ. ಹಿರಿಯ ರಾಜಕಾರಣಿ ಬಿಎಸ್ ಯಡಿಯೂರಪ್ಪ ರಾಜಕೀಯ ನಿವೃತ್ತಿಯತ್ತ ಹೆಜ್ಜೆ ಹಾಕಿದ್ದಾರೆ. ಎದುರಾಳಿಗಳನ್ನು ಸಮರ್ಥವಾಗಿ ಎದುರಿಸಬಲ್ಲ ಸಮರ್ಥ ವಾಗ್ಮಿಗಳಾಗಿದ್ದ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಮತ್ತು ಸಿ.ಟಿ.ರವಿಯವರು ಈ ಬಾರಿ ಸೋತಿದ್ದಾರೆ. ಸಿ.ಟಿ.ರವಿ ಅವರಿಗೆ ಈಗ ವಿಧಾನ ಪರಿಷತ್ತಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಬಿಜೆಪಿಯಲ್ಲಿ ಪ್ರಖರ ವಾಗ್ಮಿಗಳ ಕೊರತೆಯಿದೆ ಎಂದು ಬಿಜೆಪಿ ಎಂಎಲ್ಸಿ ಅಡಗೂರು ವಿಶ್ವನಾಥ್ ಹೇಳುತ್ತಾರೆ. “ಕಾಂಗ್ರೆಸ್ ಸರ್ಕಾರದ ಹಲವು ಸಮಸ್ಯೆಗಳು ಮತ್ತು ಲೋಪಗಳನ್ನು ಎತ್ತಿ ತೋರಿಸಬೇಕಾಗಿದ್ದರೂ, ಬಿಜೆಪಿ ನಾಯಕತ್ವವು ಈ ಸಮಸ್ಯೆಯನ್ನು ಸರಿಪಡಿಸಲು ವಿಫಲವಾಗಿದೆ. ವಾಕ್ ಚಾತುರ್ಯಕ್ಕೆ ಹೆಸರಾದ ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್ ಮುಂತಾದ ನಾಯಕರು ಈಗ ವಿಧಾನಸಭೆಯಲ್ಲಿಲ್ಲ. ಸಮರ್ಥವಾಗಿ ಮಾತನಾಡಲು ಮತ್ತು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿ ಹಾಕಿಸಲು ಬಿಜೆಪಿ ನಾಯಕರು ಅಗತ್ಯವಿದೆ ಎಂದರು.

ಬಸವರಾಜ ಬೊಮ್ಮಾಯಿ
ಸ್ಥಳೀಯ ಚುನಾವಣೆಗೆ ಸಿದ್ಧತೆ: ಜಿಲ್ಲಾ ಘಟಕಗಳ ಬಲಪಡಿಸಲು ಬಿಜೆಪಿ ಮುಂದು!

ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ, ಮೂವರು ಮಾಜಿ ಸಿಎಂಗಳಾದ ಹೆಚ್ ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್‌ ಕೇಂದ್ರಕ್ಕೆ ಹೋಗಿರುವುದು ಸದ್ಯಕ್ಕೆ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಅನುಕೂಲವಾಗಿದೆ.

ಹಿರಿಯ ರಾಜಕಾರಣಿಯೊಬ್ಬರು, ಬಿಜೆಪಿಯಲ್ಲಿ ಹಿಂದೆ ಮುಂಚೂಣಿಯಲ್ಲಿದ್ದ ಧೀಮಂತರು ಮತ್ತು ಪ್ರಬಲ ವಾಗ್ಮಿಗಳು ಇಂದು ಇಲ್ಲ. ಪ್ರಸ್ತುತ ನಾಯಕರಲ್ಲಿ ಜ್ಞಾನದ ಕೊರತೆಯಿದೆ. ಬಿಜೆಪಿ ನಾಯಕತ್ವವು ವಿಧಾನಸಭೆಯಲ್ಲಿ ಕಾರ್ಯನಿರ್ವಹಿಸದಿದ್ದರೆ, ಸಿಟಿ ರವಿ ಅವರು ತಮ್ಮ ವಾಕ್ಚಾತುರ್ಯವನ್ನು ವಿಧಾನ ಪರಿಷತ್ತಿನಲ್ಲಿ ತೋರಿಸಲಿದ್ದಾರೆ ಎಂದರು.

ಇಂದು ಬಿಜೆಪಿಯಲ್ಲಿ ಒಂದು ಕಾಲದಲ್ಲಿ ಪ್ರಬಲ ಶಕ್ತಿಯಾಗಿದ್ದ ಬಿಜೆಪಿ ಪ್ರತಿಪಕ್ಷ ನಾಯಕ ಆರ್.ಅಶೋಕ ಮತ್ತು ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಅವಲಂಬಿಸುತ್ತೇವೆ. ಅವರಿಗೆ ಸಾಮರ್ಥ್ಯ ಮತ್ತು ಅವಕಾಶವೂ ಇದೆ. ಇನ್ನು ಮುನಿರತ್ನ ಮತ್ತು ಬೈರತಿ ಬಸವರಾಜ್ ಅಥವಾ ಮಾಜಿ ಸಚಿವರಾದ ಸುರೇಶ್ ಕುಮಾರ್ ಮತ್ತು ಸುನೀಲ್ ಕುಮಾರ್ ಅವರು ಸಹ ತಮ್ಮ ವಾಕ್ಚಾತುರ್ಯವನ್ನು ತೋರಿಸಬಹುದು ಎಂದು ಪಕ್ಷದ ಮೂಲಗಳು ಹೇಳುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com