ಮಹಿಳೆಯರ ಬಗ್ಗೆ ಗೌರವವಿದ್ದರೆ ಲೈಂಗಿಕ ದೌರ್ಜನ್ಯ ಸಂತ್ರಸ್ತರ ಭೇಟಿ ಮಾಡಿ: BJP-JDSಗೆ ಡಿಕೆ ಶಿವಕುಮಾರ್

ಮಹಿಳೆಯರ ಬಗ್ಗೆ ಗೌರವವಿದ್ದರೆ ಲೈಂಗಿಕ ದೌರ್ಜನ್ಯ ಸಂತ್ರಸ್ತರ ಭೇಟಿ ಮಾಡಿ ಎಂದು ಬಿಜೆಪಿ-ಜೆಡಿಎಸ್'ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಯಾದಗಿರಿ: ಮಹಿಳೆಯರ ಬಗ್ಗೆ ಗೌರವವಿದ್ದರೆ ಲೈಂಗಿಕ ದೌರ್ಜನ್ಯ ಸಂತ್ರಸ್ತರ ಭೇಟಿ ಮಾಡಿ ಎಂದು ಬಿಜೆಪಿ-ಜೆಡಿಎಸ್'ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಕುಮಾರಸ್ವಾಮಿಯವರು ನಾರಿ ಶಕ್ತಿ ಬಗ್ಗೆ ತಂದೆ ತಾಯಿ ಬಗ್ಗೆ ಬಹಳ ಗೌರವಿದೆ. ಹೆಣ್ಣುಮಕ್ಕಳಿಗೆ ಗೌರವ ಇದೆ ಅಂತ ಹೇಳುತ್ತಾರಲ್ಲ. ಹಾಗಾದರೆ ಮೊದಲು ಹೋಗಿ ಆ ತಾಯಂದಿರಿಗೆ ಧೈರ್ಯ ಹೇಳುವ ಹಾಗೂ ಸಾಂತ್ವನ ತುಂಬುವಂತ ಕೆಲಸವನ್ನು ಬಿಜೆಪಿಯವರು ಹಾಗೂ ಜನತಾದಳದವರು ಮಾಡಲಿ ಎಂದು ಟಾಂಗ್ ಕೊಟ್ಟರು.

ಡಿಕೆ.ಶಿವಕುಮಾರ್
ಜೆಡಿಎಸ್ ಜೊತೆಗಿನ ನಮ್ಮ ಕರಾಳ ಮೈತ್ರಿ ಸಂದರ್ಭದಲ್ಲಿ ಪ್ರಜ್ವಲ್ ಕರ್ಮಕಾಂಡಗಳು ಬೆಳಕಿಗೆ ಬಂದಿತ್ತೇ?

ವಿಡಿಯೋಗಳಿರುವ ಪೆನ್‌ಡ್ರೈವ್ ಹಿಂದೆ ಮಹಾನಾಯಕರ ಕೈವಾಡವಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿ, ದೇವರಾಜೇಗೌಡ ಯಾರ್ಯಾರನ್ನು ಭೇಟಿಯಾಗಿದ್ದಾರೆ ಎಂದು ಗೊತ್ತಿದೆ. ಮುಂಚಿತವಾಗಿಯೇ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು. ರಾಜಕೀಯ ಮಾಡೋದಾದರೆ ಏನು ಬೇಕಾದರೂ ಮಾಡುತ್ತಿದ್ದೆವು. ನಾನು ಏನು ಮಾಡಬೇಕು ಅನ್ನೋದು ನನಗೂ ಗೊತ್ತಿದೆ ಎಂದು ಹೇಳಿದರು.

ಸೂರಜ್ ರೇವಣ್ಣ ಅವರನ್ನು ಭೇಟಿ ಮಾಡಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಹೌದು, ಅವರು ನನ್ನನ್ನು ಭೇಟಿ ಮಾಡಿದ್ದರು, ನನ್ನನ್ನು ಏಕೆ ಭೇಟಿ ಮಾಡಿದ್ದಾರೆ ಎಂದು ನೀವು ಅವರನ್ನೇ ಕೇಳಬಹುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com