ಮೋದಿಯನ್ನು ಚರ್ಚೆಗೆ ಆಹ್ವಾನಿಸಲು ರಾಹುಲ್​ ಗಾಂಧಿ ಯಾರು? ಪ್ರಧಾನಿ ಅಭ್ಯರ್ಥಿಯೇ?: ಕಾಂಗ್ರೆಸ್ ವಿರುದ್ದ ತೇಜಸ್ವಿ ಸೂರ್ಯ ವಾಗ್ದಾಳಿ

ಪ್ರಧಾನಿ ಮೋದಿಯನ್ನು ಚರ್ಚೆಗೆ ಆಹ್ವಾನಿಸಲು ರಾಹುಲ್​ ಗಾಂಧಿ ಯಾರು? ಪ್ರಧಾನಿ ಅಭ್ಯರ್ಥಿಯೇ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ಬೆಂಗಳೂರು: ಪ್ರಧಾನಿ ಮೋದಿಯನ್ನು ಚರ್ಚೆಗೆ ಆಹ್ವಾನಿಸಲು ರಾಹುಲ್​ ಗಾಂಧಿ ಯಾರು? ಪ್ರಧಾನಿ ಅಭ್ಯರ್ಥಿಯೇ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ಮೋದಿಯನ್ನು ಚರ್ಚೆಗೆ ಆಹ್ವಾನಿಸಲು ರಾಹುಲ್​ ಗಾಂಧಿ ಯಾರು? ಪ್ರಧಾನಿ ಅಭ್ಯರ್ಥಿಯೇ? ಇಂಡಿಯಾ ಮೈತ್ರಿಯ ಮಾತು ಬಿಡಿ, ಮೊದಲು ಕಾಂಗ್ರೆಸ್​ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು, ಪಕ್ಷದ ಸೋಲಿನ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದಾಗಿ ಹೇಳಿದ ಬಳಿಕ ಪ್ರಧಾನಿ ಮೋದಿಯೊಂದಿಗೆ ಚರ್ಚೆ ಮಾಡಬಹುದು ಎಂದು ಹೇಳಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಇದೇ ಪ್ರಶ್ನೆ ಮಾಡಿದ್ದು, ರಾಹುಲ್​ ಗಾಂಧಿಗೆ ಸಾಮಾನ್ಯ ಬಿಜೆಪಿ ಕಾರ್ಯಕರ್ತನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವಿಲ್ಲ. ಎರಡನೆಯದಾಗಿ ಮೋದಿ ಸಮನಾಗಿ ಚರ್ಚಿಸಲು ಬಯಸುವವರು ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯೇ? ಎಂದು ಪ್ರಶ್ನೆ ಮಾಡಿದ್ದಾರೆ.​

ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಆರೋಪ-ಪ್ರತ್ಯಾರೋಪಗಳನ್ನು ಗಮನಿಸಿರುವ ಮಾಜಿ ನ್ಯಾಯಾಧೀಶರು ಮತ್ತು ಹಿರಿಯ ಪತ್ರಕರ್ತರು ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯನ್ನು ಒಂದೇ ವೇದಿಕೆಯಲ್ಲಿ ಸಾರ್ವಜನಿಕ ಚರ್ಚೆಗೆ ಕರೆದಿದ್ದಾರೆ. ಈ ಚರ್ಚೆಯಲ್ಲಿ ಭಾಗಿಯಾಗಲು ರಾಹುಲ್‌ ಗಾಂಧಿ ಒಪ್ಪಿಕೊಂಡಿದ್ದು, ಲೋಕಸಭೆ ಚುನಾವಣೆಯ ಸಾರ್ವಜನಿಕ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು ಶೇ.100ರಷ್ಟು ಸಿದ್ಧ ಎಂದು ಹೇಳಿದ್ದರು,

ತೇಜಸ್ವಿ ಸೂರ್ಯ
ಪ್ರಧಾನಿ ಮೋದಿ ಟೆಂಪೋ ಬಿಲಿಯನೇರ್‌ಗಳ ಕೈಗೊಂಬೆ: ರಾಹುಲ್ ಗಾಂಧಿ

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮದನ್ ಲೋಕುರ್, ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಅಜಿತ್ ಪ್ರಕಾಶ್ ಶಾ ಹಾಗೂ ಹಿರಿಯ ಪತ್ರಕರ್ತ, ‘ದಿ ಹಿಂದೂ’ ಮಾಜಿ ಸಂಪಾದಕ ಎನ್ ರಾಮ್ ಅವರು ಗುರುವಾರ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದರು,

ಎರಡೂ ಪಕ್ಷದವರು ಪ್ರಣಾಳಿಕೆಗಳ ಬಗ್ಗೆ ಮಾಡುತ್ತಿದ್ದಾರೆ. ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ, ಉತ್ತರಗಳು ದೊರೆಯುತ್ತಿಲ್ಲ. ದೇಶದ ಜನರು ಎರಡೂ ಕಡೆಯಿಂದ ಉತ್ತರವನ್ನು ನಿರೀಕ್ಷಿಸುತ್ತಿದ್ದಾರೆ. ಹೀಗಾಗಿ, ಇಬ್ಬರಿಗೂ ಸಾರ್ವಜನಿಕ ಚರ್ಚೆಯಲ್ಲಿ ಭಾಗಿಯಾಗಲು ವೇದಿಕೆ ಸಿದ್ದಪಡಿಸುವುದಾಗಿ ಆಹ್ವಾನಿಸಿದ್ದರು.

ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಈ ಆಹ್ವಾನದ ಬಗ್ಗೆ ರಾಹುಲ್‌ ಗಾಂಧಿ ಅವರಿಗೆ ಪ್ರಶ್ನಿಸಲಾಗಿತ್ತು. ಅವರು ಆಹ್ವಾನವನ್ನು ಸ್ವಾಗತಿಸಿದ್ದರು.

ನಾನು ಅಥವಾ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚರ್ಚೆಯಲ್ಲಿ ಭಾಗವಹಿಸಲು ಸಂತೋಷ ಪಡುತ್ತೇವೆ. ಪ್ರಧಾನಿ ಮೋದಿ ಅವರು ಚರ್ಚೆಗೆ ಬರಲು ಒಪ್ಪಿದರೆ, ನಾವು ಖಂಡತಾ ಹೋಗುತ್ತೇವೆ. ಮೋದಿ ಒಪ್ಪಿದರೆ ಆ ಬಗ್ಗೆ ಸಂಘಟಕರು ನನಗೆ ತಿಳಿಸುವಂತೆ ಮನವಿ ಮಾಡುತ್ತೇನೆಂದು ಹೇಳಿದ್ದರು.

ಇದು ಐತಿಹಾಸಿಕ ಚರ್ಚೆಯಾಗಲಿದೆ. ಚರ್ಚೆಯಲ್ಲಿ ಭಾಗವಹಿಸಲು ನಾನು ಎದುರು ನೋಡುತ್ತಿದ್ದೇನೆ. ಪ್ರಧಾನಿ ಈ ಸಂವಾದದಲ್ಲಿ ಭಾಗವಹಿಸುವುದನ್ನು ದೇಶವು ನಿರೀಕ್ಷಿಸುತ್ತದೆ. ನಿಮ್ಮ ಆಹ್ವಾನದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿದ್ದೇನೆ. ಅಂತಹ ಚರ್ಚೆಯು ಜನರು ನಮ್ಮ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಜನರಲ್ಲಿ ಅರಿವು ಮೂಡಿಸುತ್ತದೆ ಎಂಬುದನ್ನು ನಾವು ಒಪ್ಪುತ್ತೇವೆ. ಯಾವುದೇ ಆಧಾರರಹಿತ ಆರೋಪಗಳನ್ನು ತಳ್ಳಿಹಾಕುವುದು ಸಹ ಮುಖ್ಯವಾಗಿದೆ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com