ಸರ್ಕಾರ ರಾಜ್ಯ ರಾಜಧಾನಿಯನ್ನು 'ಉಡ್ತಾ ಬೆಂಗಳೂರು' ಮಾಡುತ್ತಿದೆ: ಕಾಂಗ್ರೆಸ್ ವಿರುದ್ದ ಬಿಜೆಪಿ ವಾಗ್ದಾಳಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸಿಲಿಕಾನ್ ಸಿಟಿ ಮಾದಕ ವಸ್ತುಗಳ ಅಡ್ಡವಾಗುತ್ತಿದೆ. ರೇವ್ ಪಾರ್ಟಿಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಬಿಜೆಪಿ
ಬಿಜೆಪಿ
Updated on

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸಿಲಿಕಾನ್ ಸಿಟಿ ಮಾದಕ ವಸ್ತುಗಳ ಅಡ್ಡವಾಗುತ್ತಿದೆ. ರೇವ್ ಪಾರ್ಟಿಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಬೆಂಗಳೂರಿನ ಹೊರ ಒಲಯದಲ್ಲಿ ಇತ್ತೀಚಿಗೆ ನಡೆದಿದ್ದ ರೇವ್‌ ಪಾರ್ಟಿ, ಸಖತ್‌ ಸದ್ದು ಮಾಡುತ್ತಿದ್ದು, ಇದನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಹದಗೆಟ್ಟಿದೆ ಕಾನೂನು ಸುವ್ಯವಸ್ಥೆ, ಅನಾವರಣಗೊಂಡಿದೆ ಸರ್ಕಾರದ ಅವ್ಯವಸ್ಥೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರಲ್ಲಿ ಅನೈತಿಕ ಕೂಟಗಳು ಎಲ್ಲೆ ಮೀರಿ ನಡೆಯುತ್ತಿವೆ. ಸಿಲಿಕಾನ್ ಸಿಟಿ ಈಗ ಮಾದಕ ವಸ್ತುಗಳ ಅಡ್ಡವಾಗಿದ್ದು, ಗಾಂಜಾ ಡ್ರಗ್ ರೇವ್ ಪಾರ್ಟಿಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಹೇಳಿದೆ.

ಅಲ್ಲದೆ, #BadBengaluru ಮತ್ತು #CongressFailsKarnataka ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಪೋಸ್ಟ್ ನ್ನು ಟ್ಯಾಗ್ ಮಾಡಿದೆ.

ಬಿಜೆಪಿ
ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ; ಗೃಹ ಸಚಿವರನ್ನು ಸಂಪುಟದಿಂದ ಕೈಬಿಡಲು ಬಿಜೆಪಿ ಒತ್ತಾಯ

ಅನುಮತಿ ಪಡೆಯದೇ ದೊಡ್ಡ ಮಟ್ಟದಲ್ಲಿ ಪಾರ್ಟಿ ಆಯೋಜಿಸಿ ತಡರಾತ್ರಿಯಲ್ಲಿ ಗಲಾಟೆ ಮಾಡುತ್ತಿದ್ದ ಪಾರ್ಟಿಯ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ತೆಲುಗು ಸಿನಿಮಾ ನಟ-ನಟಿಯರು ಹಾಗೂ ಶ್ರೀಮಂತರ ಮಕ್ಕಳು, ಉದ್ಯಮಿಗಳ ಮಕ್ಕಳು ಇರುವುದು ಕಂಡುಬಂದಿತ್ತು. ಅಲ್ಲದೆ, ಸ್ಥಳದಲ್ಲಿ ಮಾದಕ ವಸ್ತುಗಳಾದ ಎಂಡಿಎಂಎ, ಕೊಕೇನ್, ಹೈಡ್ರೋ ಗಾಂಜಾ ಪತ್ತೆಯಾಗಿದ್ದವು. ಪಾರ್ಟಿಯಲ್ಲಿದ್ದವರ ರಕ್ತವನ್ನು ಸ್ಯಾಂಪಲ್​ ಪಡೆದುಕೊಳ್ಳಲಾಗಿತ್ತು.

ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಮಂದಿಯ ಪೈಕಿ 86 ಮಂದಿ ಡ್ರಗ್ ಸೇವನೆ ಮಾಡಿರುವುದು ಖಚಿತವಾಗಿದೆ. ಈ ಪೈಕಿ ಪಾರ್ಟಿಯಲ್ಲಿ ಭಾಗಿಯಾಗಿದ್ದ 73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಡ್ರಗ್ಸ್ ಪಾಸಿಟಿವ್ ಬಂದಿದೆ. ಜೊತೆಗೆ, 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಡ್ರಗ್ಸ್ ಪಾಸಿಟಿವ್ ಬಂದಿದೆ. ಇದರಲ್ಲಿ ತೆಲುಗು ನಟಿ ಹೇಮಾ ಅವರ ಡ್ರಗ್ಸ್ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ. ಅದರಲ್ಲಿ ತೆಲುಗು ನಟಿಯರಾದ ಹೇಮಾ ಮತ್ತು ಆಶಿ ರಾಯ್ ಬ್ಲಡ್ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com