ಚನ್ನಪಟ್ಟಣ ಉಪಚುನಾವಣೆ: 'ಔಟ್ ಸೈಡರ್ ಕಾರ್ಡ್' ಪ್ರಯೋಗಿಸಿದ ಕಾಂಗ್ರೆಸ್, ನಿಖಿಲ್ ವಿರುದ್ಧ ವಾಗ್ದಾಳಿ

ಕೇಂದ್ರದಲ್ಲಿ ಮಂತ್ರಿಯಾಗುವ ಆಸೆಯಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ತ್ಯಜಿಸಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.
ಸಿಪಿ ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ
ಸಿಪಿ ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ
Updated on

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗೆ ಕೆಲ ದಿನಗಳು ಬಾಕಿಯಿರುವಂತೆಯೇ ಪ್ರಚಾರದ ಅಖಾಡ ರಂಗೇರುತ್ತಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ವಾಕ್ಸಮರ, ಆರೋಪ, ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಜೋರಾಗುತ್ತಿದೆ.

ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದ ಶಾಸಕ ಕದಲೂರು ಉದಯ್.ಕೆ.ಎಂ ಅವರ ನಿವಾಸದಲ್ಲಿ ಸುದ್ಧಿಗಾರರರೊಂದಿಗೆ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಔಟ್ ಸೈಡರ್ (ಹೊರಗಿನವ) ಕಾರ್ಡ್ ಪ್ರಯೋಗಿಸುವ ಮೂಲಕ ನಿಖಿಲ್ ಹಾಗೂ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ನಾವು ಕ್ಷೇತ್ರದಲ್ಲಿಯೇ ಇದ್ದು ಅಭಿವೃದ್ಧಿ ಮಾಡುವಂತೆ ಜೆಡಿಎಸ್ ಬೆಂಬಲಿಗರೇ ಹೇಳಿಕೊಳ್ಳುತಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗುವ ಆಸೆಯಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ತ್ಯಜಿಸಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಆದರೆ, ಕ್ಷೇತ್ರದ ಅಭಿವೃದ್ದಿಗೆ ಕೊಡುಗೆ ನೀಡುವಲ್ಲಿ ವಿಫಲರಾಗಿದ್ದಾರೆಂದು ಹೇಳಿದರು.

ಸಿಪಿ ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣ ಉಪಚುನಾವಣೆ: ಅಖಾಡಕ್ಕೆ ದೇವೇಗೌಡ ಎಂಟ್ರಿ, ಮೊಮ್ಮಗ ನಿಖಿಲ್ ಪರ ಇಂದು ಮತಯಾಚನೆ

ಚನ್ನಪಟ್ಟಣದಲ್ಲಿ ಚುನಾವಣೆ ಎದುರಿಸಿ ನಿಖಿಲ್ ಕುಮಾರಸ್ವಾಮಿ ಸೋತಿಲ್ಲ. ಆದರೆ, ಒಮ್ಮೆ ರಾಮನಗರ ವಿಧಾನಸಭಾ ಕ್ಷೇತ್ರ, ಒಮ್ಮೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಈಗಾಗಲೇ ಎರಡು ಬಾರಿ ಸೋತಿದ್ದಾರೆ. ಮಂಡ್ಯದ ಜನರಂತೆಯೇ ನಿಖಿಲ್ ಕುಮಾರಸ್ವಾಮಿ ಅವರು ಸ್ಥಳೀಯರು ಅಲ್ಲ ಎನ್ನುವುದನ್ನು ಚನ್ನಪಟ್ಟಣ ಜನ ತಿಳಿದಿದ್ದಾರೆ. ಸಿ.ಪಿ.ಯೋಗೇಶ್ವರ್ ಸ್ಥಳೀಯರು, ಚನ್ನಪಟ್ಟಣ ಅಭಿವೃದ್ಧಿಯನ್ನೇ ಜೀವನದ ಗುರಿಯಾಗಿಸಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ ಸ್ಥಳೀಯರನ್ನು ಗೆಲ್ಲಿಸಬೇಕೆ ಅಥವಾ ಕ್ಷೇತ್ರಬಿಟ್ಟು ಕ್ಷೇತ್ರಗಳನ್ನು ಹುಡುಕಿಕೊಂಡು ಹೋದ ಹೊರಗಿನವರನ್ನು ಗೆಲ್ಲಿಸಬೇಕೆ? ಎಂಬ ಪ್ರಶ್ನೆಗೆ ಚನ್ನಪಟ್ಟಣ ಜನರೇ ಉತ್ತರ ನೀಡುವರು.

ಎರಡು ಬಾರಿ ಸೋತು ಅನ್ಯಾಯವಾಗಿದೆ ಎಂದು ನಿಖಿಲ್ ಹೇಳುತಿದ್ದಾರೆ, ಇವರು ಸೋತದ್ದು ಚನ್ನಪಟ್ಟಣದಲ್ಲಿ ಅಲ್ಲ, ಚನ್ನಪಟ್ಟಣದ ಅಭಿವೃದ್ಧಿಗೆ ನಿಂತ ಯೋಗಿಶ್ವರ್ ಚನ್ನಪಟ್ಟಣದಲ್ಲೇ ಎರಡು ಬಾರಿ ಸೋತಿದ್ದಾರೆ. ಮುಖ್ಯವಾಗಿ ಚನ್ನಪಟ್ಟಣದಲ್ಲಿ ಯೋಗಿಶ್ವರ್ ಅವರಿಗೆ ಅನ್ಯಾಯವಾಗಿದೆ. ಯೋಗಿಶ್ವರ್ ಗೆದ್ದು ಮೂರುವರೆ ವರ್ಷಗಳ ಕಾಲ ಚನ್ನಪಟ್ಟಣದ ಅಭಿವೃದ್ಧಿ ಮಾಡಲಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com