ಕನಕಪುರ ಶಾಲೆಗಳಿಗೆ 25 ಎಕರೆ ದಾನ ಮಾಡಿದ್ದೇನೆ, ದೇವೇಗೌಡ ಕುಟುಂಬ ಏನು ನೀಡಿದೆ?: JDS ಗೆ DKS ಸವಾಲು

ಡಿಕೆ.ಶಿವಕುಮಾರ್ ಅವರು ಚಕ್ಕೆರೆ, ಹೊನ್ನನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಪರ ಶುಕ್ರವಾರ ಪ್ರಚಾರ ನಡೆಸಿದರು. ಈ ವೇಳೆ ಕೊತ್ವಾಲ್ ಹತ್ತಿ ರೂ.100ಗೆ ಕೆಲಸ ಮಾಡುತ್ತಿದ್ದ ಡಿಕೆಶಿ, ರೈತನಿಗೆ ನೋವಾದರೆ ಎಂದಾದರೂ ಕಣ್ಣೀರು ಹಾಕಿದ್ದಾರಾ ಎಂಬ ದೇವೇಗೌಡ ಟೀಕೆಗೆ ತಿರುಗೇಟು ನೀಡಿದರು.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್
Updated on

ಬೆಂಗಳೂರು: ಶಾಲೆಗಳ ನಿರ್ಮಾಣಕ್ಕೆ ಕನಕಪುರದಾದ್ಯಂತ 25 ಎಕರೆ ಭೂಮಿಯನ್ನು ದಾನ ಮಾಡಿದ್ದೇನೆ ದೇವೇಗೌಡರ ಕುಟುಂಬ ಹಾಸನ, ರಾಮನಗರ, ಚನ್ನಪಟ್ಟಣದಲ್ಲಿ ಒಂದೇ ಒಂದು ಗುಂಟಾ ಭೂಮಿಯನ್ನಾದರೂ ಕೊಟ್ಟಿದೆಯೇ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಪ್ರಶ್ನಿಸಿದ್ದಾರೆ.

ಡಿಕೆ.ಶಿವಕುಮಾರ್ ಅವರು ಚಕ್ಕೆರೆ, ಹೊನ್ನನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಪರ ಶುಕ್ರವಾರ ಪ್ರಚಾರ ನಡೆಸಿದರು. ಈ ವೇಳೆ ಕೊತ್ವಾಲ್ ಹತ್ತಿ ರೂ.100ಗೆ ಕೆಲಸ ಮಾಡುತ್ತಿದ್ದ ಡಿಕೆಶಿ, ರೈತನಿಗೆ ನೋವಾದರೆ ಎಂದಾದರೂ ಕಣ್ಣೀರು ಹಾಕಿದ್ದಾರಾ ಎಂಬ ದೇವೇಗೌಡ ಟೀಕೆಗೆ ತಿರುಗೇಟು ನೀಡಿದರು.

ಕುಮಾರಸ್ವಾಮಿಯವರು ತಮ್ಮ ಪ್ರಚಾರದ ವೇಳೆ ಡಿಕೆ.ಸಹೋದರರು ಜಮೀನು ಕಬ್ಜ ಮಾಡಿಕೊಂಡಿದ್ದು, ಶಾಲೆ ಕಟ್ಟಲು ಜಾಗ ನೀಡುತ್ತಿಲ್ಲ. ಜಾಗ ಕೇಳಿದರೆ ದುಡ್ಡು, ದುಡ್ಡು ಅಂತಾರೆ ಎಂದು ಆರೋಪ ಮಾಡಿದ್ದಾರೆ. ಕನಕಪುರದಲ್ಲಿ ಶಾಲೆಗಳ ನಿರ್ಮಾಣಕ್ಕೆ ನಾವು ಮೂರು ಕಡೆ ನಮ್ಮ ತಂದೆಗೆ ಸೇರಿದ 25 ಎಕರೆ ಜಾಗವನ್ನು ದಾನ ಮಾಡಿದ್ದೇವೆ. ಯಾರು ಬೇಕಾದರೂ ಹೋಗಿ ನೋಡಬಹುದು. ನಾನು ಚನ್ನಪಟ್ಟಣದಲ್ಲಿ ಉದ್ಯೋಗ ಮೇಳ ನಡೆಸಿದ ಬಳಿಕ ಕುಮಾರಸ್ವಾಮಿಯವರು ಮಂಡ್ಯದಲ್ಲಿ ಉದ್ಯೋಗ ಮೇಳ ನಡೆಸಿದರು. ಆದೇ ಕೆಲಸವನ್ನು ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಯೋಗೇಶ್ವರ್ ಅವರು 4-5 ಕೋಟಿ ರೂಪಾಯಿ ಖರ್ಚು ಮಾಡುವುದರ ಮೂಲಕ ಬಿಸಿಲಮ್ಮ ಮತ್ತು ಮಹದೇಶ್ವರ ದೇವಸ್ಥಾನಗಳನ್ನು ಪರಿವರ್ತಿಸಿದ್ದಾರೆ. ಕುಮಾರಸ್ವಾಮಿ ಅವರು ರಾಮನಗರ ಅಥವಾ ಚನ್ನಪಟ್ಟಣದಲ್ಲಿ ಒಂದೇ ಒಂದು ದೇವಸ್ಥಾನವನ್ನಾದರೂ ಅಭಿವೃದ್ಧಿಪಡಿಸಿದ್ದಾರೆಯೇ? ಜನರಿಗೆ ಒಂದೇ ಒಂದು ಕುಡಿಯುವ ನೀರಿನ ಸೌಲಭ್ಯವನ್ನಾದರೂ ಒದಗಿಸಿದ್ದಾರೆಯೇ?...

ಡಿಕೆ.ಶಿವಕುಮಾರ್
ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವವರೆಗೂ ವಿರಮಿಸುವುದಿಲ್ಲ: ಮಾಜಿ ಪ್ರಧಾನಿ; ಇದೇನು ಕಡಲೆ ಗಿಡ ಅಲ್ಲ: ಡಿಕೆಶಿ ತಿರುಗೇಟು

ದೇವೇಗೌಡ ಅವರು ತಮ್ಮ ಮೊಮ್ಮಗನಿಗೆ ಪಟ್ಟಾಭಿಷೇಕ ಮಾಡಿಸಬಹುದು, ಆದರೆ, ವರ್ಷಗಳಿಂದ ಶ್ರಮಿಸಿದ ಜೆಡಿಎಸ್ ಸದಸ್ಯರ ಕತೆ ಏನು? ಕುಮಾರಸ್ವಾಮಿ ಅವರು ಈ ಕ್ಷೇತ್ರದಲ್ಲಿ ಎಂದಾದರೂ ಪಕ್ಷದ ಒಬ್ಬ ಕಾರ್ಯಕರ್ತನಿಗೆ ಅಧಿಕಾರ ನೀಡಿದ್ದಾರೆಯೇ? ಕುಮಾರಸ್ವಾಮಿಯವರು ನಿಜವಾಗಿಯೂ ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಬಯಸಿದರೆ 200-300 ಎಕರೆ ಭೂಮಿ ನೀಡಲು ನಾನು ಸಿದ್ಧನಿದ್ದೇನೆ. ಕುಮಾರಸ್ವಾಮಿ ರಾಮನಗರದಲ್ಲಿ ಏಕೆ ಸೋತರು? ಮತದಾರರಿಗೂ ಸ್ವಾಭಿಮಾನವಿದೆ, ಅವರ ಬಗ್ಗೆ ಅವರ ಪರವಾಗಿ ಕೆಲಸ ಮಾಡುವವರಿಗೂ ತಿಳಿದಿದೆ. ಈ ಬಾರಿಯೂ ಜನರು ಅವರನ್ನು ತಿರಸ್ಕರಿಸುತ್ತಾರೆಂದು ಹೇಳಿದರು.

ಈ ಮಧ್ಯೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ನಾಲ್ಕನೇ ದಿನ ಚನ್ನಪಟ್ಟಣದಲ್ಲಿ ಪ್ರಚಾರ ನಡೆಸಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ನಾನು ನೋಡಿಲ್ಲ. ಸರ್ಕಾರ ಬದಲಾಯಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದರು. ಅಲ್ಲದೆ, ಮುಂಬರುವ ಚುನಾವಣೆಗಳ ಮೂಲಕ ರಾಜ್ಯಕ್ಕೆ ಹೊಸ ನಾಯಕತ್ವಗಳು ಉದಯವಾಗಲಿದೆ ಎಂದು ತಿಳಿಸಿದರು.

ನಾನು ಪ್ರಧಾನಿ ಮತ್ತು ಮುಖ್ಯಮಂತ್ರಿ ಎರಡೂ ಆಗಿದದೆ. ಯಾವಾಗಲೂ ಏಕತೆಗಾಗಿ ನಿಂತಿದ್ದೇನೆ. ನಾವೆಲ್ಲರೂ ಮನುಷ್ಯರು. ನಮ್ಮ ಮಾನವೀಯತೆಯನ್ನು ನಾವು ಮರೆಯಬಾರದು. ಉಪಚುನಾವಣೆ ಫಲಿತಾಂಶಗಳು ನ. 23 ರಂದು ಹೊರಬೀಳುತ್ತವೆ, ನಾನು ಮತ್ತೆ ನಿಮ್ಮ ನಡುವೆ, ನಿಮ್ಮೊಂದಿಗೆ ಕೆಲಸ ಮಾಡುತ್ತೇನೆ ಎಂದರು.\

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com