ಶಿಗ್ಗಾಂವಿ ಉಪ ಚುನಾವಣೆ: ಮತದಾನಕ್ಕೂ ಮುನ್ನ ಕಾಂಗ್ರೆಸ್ ಅಭ್ಯರ್ಥಿಗೆ ಬಿಗ್ ಶಾಕ್, BJP ದೂರು ದಾಖಲು

ಶಿಗ್ಗಾವಿ ವಿಧಾನಸಭೆ ಉಪ ಚುನಾವಣೆಗೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿರುವಂತೆಯೇ ಕಾಂಗ್ರೆಸ್ ಗೆ ಬಿಜೆಪಿ ಶಾಕ್ ನೀಡಿದ್ದು, ಕೈ ಅಭ್ಯರ್ಥಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
BJP files complaint against Congress candidate Yasir Khan Pathan
ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ವಿರುದ್ಧ ಬಿಜೆಪಿ ದೂರು (ಸಾಂದರ್ಭಿಕ ಚಿತ್ರ)
Updated on

ಹಾವೇರಿ: ಕರ್ನಾಟಕದ ಮೂರು ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ದಾಖಲಿಸಿದೆ.

ಶಿಗ್ಗಾವಿ ವಿಧಾನಸಭೆ ಉಪ ಚುನಾವಣೆಗೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿರುವಂತೆಯೇ ಕಾಂಗ್ರೆಸ್ ಗೆ ಬಿಜೆಪಿ ಶಾಕ್ ನೀಡಿದ್ದು, ಕೈ ಅಭ್ಯರ್ಥಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ರೌಡಿ ಶೀಟ್​ ಪ್ರಕರಣ ಇದ್ದು, ಆದರೆ ಅವರು ನಾಮಪತ್ರದ ಅಫಡವಿಟ್ ನಲ್ಲಿ ತಮ್ಮ ವಿರುದ್ಧ ಯಾವುದೇ ಕೇಸ್ ಗಳಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.

ಹೀಗಾಗಿ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಚುನಾವಣಾ ಏಜೆಂಟ್ ಎಸ್ ಕೆ ಅಕ್ಕಿ ಅವರು ಇ – ಮೇಲ್ ಮೂಲಕ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

BJP files complaint against Congress candidate Yasir Khan Pathan
ಶಿಗ್ಗಾಂವಿ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಚುನಾವಣಾ ಆಯೋಗಕ್ಕೆ ಬೊಮ್ಮಾಯಿ ದೂರು

ಅಲ್ಲದೆ ಯಾಸೀರ್ ಖಾನ್ ಪಠಾಣ್ ಮೇಲೆ ರೌಡಿ ಶೀಟರ್ ಸ್ಟೇಟಸ್ ಇದೆ ಎಂದು ಹಾವೇರಿ ಎಸ್ ಪಿ ಹೇಳಿಕೆ ನೀಡಿದ್ದಾರೆ. ಆದ್ರೆ, ಪಠಾಣ್ ಅಫಡವಿಟ್ ನಲ್ಲಿ ತಮ್ಮ ವಿರುದ್ಧ ಯಾವುದೇ ಕೇಸ್ ಗಳಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಕಳೆದ ಚುನಾವಣೆ ವೇಳೆ ಅವರ ಮೇಲೆ ಹಲವು ಕೇಸ್ ಇದ್ದವು.

ಆದರೆ ಆಶ್ಚರ್ಯ ಅಂದರೆ ಉಪ ಚುನಾವಣೆಗೆ ಸಲ್ಲಿಸಿರುವ ಅಪಡವಿಟ್ ನಲ್ಲಿ ಯಾವುದೇ ಕೇಸ್ ಗಳು ಇಲ್ಲ ಎಂದಿದ್ದಾರೆ. ಹೀಗಾಗಿ ಈ ಬಗ್ಗೆ ವಿಸ್ತೃತ ತನಿಖೆ ಆಗಲಿ ಎಂದು ದೂರು ನೀಡಿದ್ದಾರೆ.

ಅಲ್ಲದೆ ದೂರಿನೊಂದಿಗೆ ಯಾಸೀರ್ ಖಾನ್ ಪಠಾಣ್ 2023 ರ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಅಫಡವಿಟ್, ಈ ಬಾರಿ ಶಿಗ್ಗಾವಿ ಉಪಚುನಾವಣೆಗೆ ಕೈ ಅಭ್ಯರ್ಥಿಯಾಗಿ ಪಠಾಣ್​ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದ ಅಫಿಡೆವಿಟ್ ಹಾಗೂ ಹಾವೇರಿ ಎಸ್ ಪಿ ಅಂಶುಕುಮಾರ್ ಸುದ್ದಿಗೋಷ್ಟಿಯಲ್ಲಿ ಪಠಾಣ್ ಮೇಲೆ ರೌಡಿ ಶೀಟರ್ ಇನ್ನೂ ಇದೆ ಎಂಬ ಹೇಳಿಕೆಯ ವಿಡಿಯೋ ಕ್ಲಿಪ್ಪಿಂಗ್ಸ್ ನೊಂದಿಗೆ ದೂರು ನೀಡಿದ್ದಾರೆ.

BJP files complaint against Congress candidate Yasir Khan Pathan
ಉಪ ಚುನಾವಣೆ: ಚನ್ನಪಟ್ಟಣದಲ್ಲಿ 29 ಕೋಟಿ ರೂ ಮೌಲ್ಯದ ಮದ್ಯ ಜಪ್ತಿ!

ಗೊಂದಲ ಮೂಡಿಸಿದ ಎಸ್ಪಿ ಹೇಳಿಕೆ

ಇದೇ ವೇಳೆ ಪಠಾಣ್ ವಿರುದ್ಧ ರೌಡಿಶೀಟ್ ಕೇಸ್ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರೋಪ ಮಾಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದರು. ಬಳಿಕ ಹಾವೇರಿ ಎಸ್ಪಿ ಅಂಶುಕುಮಾರ್ ಅವರು ಪಠಾಣ್ ಮೇಲೆ ರೌಡಿ ಶೀಟರ್ ಎನ್ನುವ ಹೇಳಿಕೆ ನೀಡಿದ್ದರು.

ಇದಾದ ಬಳಿಕ ಕ್ಷೇತ್ರದಲ್ಲಿ ರೌಡಿಶೀಟ್ ಪ್ರಕರಣ ಭಾರೀ ಸದ್ದು ಮಾಡಲಾರಂಭಿಸಿತ್ತು. ಬಳಿಕ ಅದೇನಾಯ್ತೋ ಏನೋ ಏಕಾಏಕಿ ಅದೇ ಹಾವೇರಿ ಎಸ್ಪಿ, ಪಠಾಣ್ ವಿರುದ್ಧ ಯಾವುದೇ ರೌಡಿಶೀಟ್ ಪ್ರಕರಣ ಇಲ್ಲ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು. ಹೀಗಾಗಿ ಎಸ್ಪಿ ಅವರ ಎರಡು ಹೇಳಿಕೆಗಳು ಭಾರೀ ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಬಿಜೆಪಿ ಆಗ್ರಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com