ಎಂಬಿ ಪಾಟೀಲ್
ಎಂಬಿ ಪಾಟೀಲ್

ನಾನೂ ಒಂದು ದಿನ ಮುಖ್ಯಮಂತ್ರಿ ಆಗುತ್ತೇನೆ: ಎಂಬಿ ಪಾಟೀಲ್ ವಿಶ್ವಾಸ

ಪ್ರಹ್ಲಾದ್ ಜೋಶಿ ತಿಳಿದವರು. ಅವರು ಈ ರೀತಿ ಮಾತನಾಡೋದು ಸರಿಯಲ್ಲ. ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವುದು ಗಂಭೀರವಾದ ವಿಚಾರವಾಗಿದೆ.
Published on

ಬೆಂಗಳೂರು: ನಾನೂ ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಚಿವ ಎಂಬಿ ಪಾಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಮಾತನಾಡಿದ ಅವರು, ಎಂ.ಬಿ.ಪಾಟೀಲ್‌ ಸಿಎಂ ಆಗಲ್ಲವೆಂಬ ಶಿವಾನಂದ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಪ್ರಸ್ತುತ ಅಂತಹ ಸನ್ನಿವೇಶ ಬಂದಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಮುಂದೆಯೂ ಇರುತ್ತಾರೆ. ನಾನು ಕೂಡಾ ಹಿರಿಯನಿದ್ದೇನೆ. ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತೇನೆ. ಶಿವಾನಂದ ಪಾಟೀಲ್ ಹೇಳಿದಂತೆ ನಾನು ಆಗುತ್ತೇನೆ. ಆದರೆ, ಶಿವಾನಂದ ಪಾಟೀಲರು‌ ಆಗಲ್ಲ, ಅವರು ಜೆಡಿಎಸ್ ನಿಂದ ಬಂದವರು. ಬದಲಾಗಿ ವಿಜಯಪುರದಿಂದ ಸಿಎಂ ಆಗೋದು ನಾನೇ ಎಂದು ಹೇಳಿದರು.

ಎಂಬಿ ಪಾಟೀಲ್
ಮುಡಾ ನಿವೇಶನ ಹಗರಣ: ಸಿಎಂ ಭವಿಷ್ಯ ನ್ಯಾಯಾಲಯದ ತೀರ್ಪಿನ ಮೇಲೆ ನಿಂತಿದೆ- ಬಸವರಾಜ ಬೊಮ್ಮಾಯಿ
ಎಂಬಿ ಪಾಟೀಲ್
ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ: ಹಗರಣ ವಿಷಯ ಮುಚ್ಚಿ ಹಾಕಲು ಸರ್ಕಾರವೇ ಫೋಟೋ ವೈರಲ್ ಮಾಡಿದೆ- ಪ್ರಹ್ಲಾದ್ ಜೋಶಿ

ನಾನೂ ಗೃಹ ಸಚಿವನಾಗಿದ್ದೆ. ಆಗಲೂ ಜೈಲಿನಲ್ಲಿ ಇಂತಹ ವ್ಯವಸ್ಥೆ ನೋಡಿದ್ದೇನೆ. ಘಟನೆಯನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಅದಕ್ಕಾಗಿ ದರ್ಶನ್ ಆ್ಯಂಡ್ ಟೀಮ್ ಚದುರಿಸಲಾಗಿದೆ. ಚದುರಿಸಿ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ ಎಂದರು.

ಫೋಟೋ ಲೀಕ್ ಸೇರಿ ಎಲ್ಲರದರ ತನಿಖೆ ಆಗಲಿದೆ. ಮುಡಾ ಡೈವರ್ಟ್ ಮಾಡೋಕೆ ಅದರಲ್ಲಿ ಏನಾಗಿದೆ? ಸುಮ್ಮನೆ ಮಾತನಾಡೋದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಮುಡಾ ಸೈಟ್ ಹಂಚಿಕೆ ಆಗಿದ್ದು ಬಿಜೆಪಿ ಅವಧಿಯಲ್ಲಿ. ಇದರಲ್ಲಿ ಸಿದ್ದರಾಮಯ್ಯನವರ ಪಾಲೇನಿದೆ. ಮುಡಾದಿಂದ ಯಾರು ಭಯಗೊಂಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಇದರಲ್ಲಿ ನಮಗೆ‌ ಜಯ ಸಿಕ್ಕೇ ಸಿಗುತ್ತದೆ. ಹಗಲು ಗನಸು ಬೇಡ. ಆದರೆ ಗವರ್ನರ್ ನಡವಳಿಕೆ ಮಾತ್ರ ಕಾನೂನು ಬಾಹಿರ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com