ಯತ್ನಾಳ್ ಉಚ್ಚಾಟನೆ: ಮಾಜಿ ಶಾಸಕ ಮಹೇಶ್ ಕುಮಟಳ್ಳಿ ತೀವ್ರ ಅಸಮಾಧಾನ

ಯತ್ನಾಳ್ ಯಾವಾಗಲೂ ಹಿಂದುತ್ವ ರಾಜಕೀಯದ ಪರವಾಗಿ ನಿಂತಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕತ್ವದ ನಿರ್ಧಾರವನ್ನು ನಾನು ಗೌರವಿಸುತ್ತೇನೆ.
ಮಹೇಶ್ ಕುಮಟಳ್ಳಿ
ಮಹೇಶ್ ಕುಮಟಳ್ಳಿ
Updated on

ಅಥಣಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಣೆ ಮಾಡಿರುವ ಬಿಜೆಪಿ ನಡೆಗೆ ಮಾಜಿ ಶಾಸಕ ಮಹೇಶ್ ಕುಮಟಳ್ಳಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರನ್ನು ಉಚ್ಚಾಟಿಸಿರುವುದು ಬಿಜೆಪಿ ಮೇಲೆ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಮತ್ತು ಕರಾವಳಿ ಪ್ರದೇಶಗಳಲ್ಲಿ ಯತ್ನಾಳ್ ಅವರಿಗೆ ಸಾಕಷ್ಟು ಬೆಂಬಲವಿದೆ, ಅವರಂತಹ ಬಲಿಷ್ಠ ನಾಯಕನನ್ನು ಹೊರಹಾಕುವುದರಿಂದ ಪಂಚಮಸಾಲಿ ಸಮುದಾಯವನ್ನು ಮಾತ್ರವಲ್ಲದೆ ಇತರ ಸಮುದಾಯಗಳ ಮತದಾರರ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.

ಯತ್ನಾಳ್ ಯಾವಾಗಲೂ ಹಿಂದುತ್ವ ರಾಜಕೀಯದ ಪರವಾಗಿ ನಿಂತಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕತ್ವದ ನಿರ್ಧಾರವನ್ನು ನಾನು ಗೌರವಿಸುತ್ತೇನೆ, ಆದರೆ, ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ನಿಲುವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಪಕ್ಷದಲ್ಲಿನ ಆಂತರಿಕ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯುತ್ತವೆ. 2028 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ನಾಯಕರು ಒಂದಾಗುತ್ತಾರೆ ಎಂಬ ವಿಶ್ವಾಸವಿದೆ. ಯತ್ನಾಳ್ ಬಿಜೆಪಿಯ ಪ್ರಮುಖ ತತ್ವಗಳನ್ನು ಅನುಸರಿಸುತ್ತಿದ್ದು, ರಾಷ್ಟ್ರೀಯ ನಾಯಕರು ತಮ್ಮ ತೀರ್ಪು ನೀಡಿದ್ದರೂ, ಮರುಪರಿಶೀಲಿಸಿ ಮತ್ತೊಂದು ಅವಕಾಶ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು,

ಮಹೇಶ್ ಕುಮಟಳ್ಳಿ
2028ಕ್ಕೆ ನಾನೇ ಸಿಎಂ: ಉಚ್ಛಾಟನೆ ಬೆನ್ನಲ್ಲೇ ಅಪ್ಪ-ಮಗನ ವಿರುದ್ಧ ತೊಡೆ ತಟ್ಟಿದ ಶಾಸಕ ಯತ್ನಾಳ್!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com