ಬೆಲೆ ಏರಿಕೆ ವಿರುದ್ಧ ಹೋರಾಟ: ಏಕಾಂಗಿ ಹೋರಾಟ ಸರಿಯಲ್ಲ ಎಂದ JDS; ಮೈತ್ರಿ ಪಕ್ಷಗಳ ನಡುವೆ ಮುನಿಸು?

ಬಿಜೆಪಿ ಅಹೋರಾತ್ರಿ ಧರಣಿ ಮಾಡುತ್ತಿದೆ. ಆದರೆ ನಮಗೆ ಆಹ್ವಾನ ನೀಡಿಲ್ಲ. ಜೆಡಿಎಸ್‌ಗೆ ಮೇಲುಗೈ ಆಗುತ್ತದೆ ಎಂದು ಬಿಜೆಪಿ ನಮ್ಮನ್ನ ಕರೆದಿಲ್ಲ. ಮುಡಾ ಪಾದಯಾತ್ರೆಯಲ್ಲಿ ಹೀಗೆಯೇ ಆಯಿತು. ಈಗಲೂ ಹೀಗೆ ಆಗಿದೆ.
ಬಿಜೆಪಿ-ಜೆಡಿಎಸ್ ನಾಯಕರು
ಬಿಜೆಪಿ-ಜೆಡಿಎಸ್ ನಾಯಕರು
Updated on

ಬೆಂಗಳೂರು: ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಗೆ ರಾಜ್ಯ ಸರಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಅಸಮಾಧಾನ ಶುರುವಾಗಿದೆ.

ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಆದರೆ, ಈ ಪ್ರತಿಭಟನೆಗೆ ನಮ್ಮನ್ನು ಆಹ್ವಾನಿಸಿಯೇ ಇಲ್ಲ ಎಂದು ಜೆಡಿಎಸ್ ದೂರಿದೆ.

ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಅವರು ಪ್ರತಿಕ್ರಿಯಿಸಿ ಬಿಜೆಪಿ ಅಹೋರಾತ್ರಿ ಧರಣಿ ಮಾಡುತ್ತಿದೆ. ಆದರೆ ನಮಗೆ ಆಹ್ವಾನ ನೀಡಿಲ್ಲ. ಜೆಡಿಎಸ್‌ಗೆ ಮೇಲುಗೈ ಆಗುತ್ತದೆ ಎಂದು ಬಿಜೆಪಿ ನಮ್ಮನ್ನ ಕರೆದಿಲ್ಲ. ಮುಡಾ ಪಾದಯಾತ್ರೆಯಲ್ಲಿ ಹೀಗೆಯೇ ಆಯಿತು. ಈಗಲೂ ಹೀಗೆ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರಿಗೆ ಮನವಿ ಮಾಡುತ್ತಿದ್ದೇನೆ. ನಾವು ಒಟ್ಟಾಗಿ ಹೋರಾಟ ಮಾಡಬೇಕು. ರಾಜ್ಯದಲ್ಲಿ ಸಮನ್ವಯ ಸಾಧಿಸಲು ಒಂದು ಸಮಿತಿ ರಚಿಸಿಬೇಕು. ನಾವು ಒಟ್ಟಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಡಿದರೆ, ಬಲ ಹೆಚ್ಚಾಗುತ್ತದೆ. ಹೆಚ್ಚಿನ ಜನರನ್ನು ತಲುಪಬಹುದು ಎಂದು ಹೇಳಿದರು.

ಇಲ್ಲಿ ಸಮನ್ವಯದ ಕೊರತೆಯಿದ್ದು, ಅದು ಕೇಂದ್ರ ನಾಯಕರಿಗೆ ತಿಳಿದಿಲ್ಲ. ಬಿಜೆಪಿ ಧರಣಿ ಘೋಷಿಸಿದ ನಂತರ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರೂ ಕೂಡ ಬೆಲೆ ಏರಿಕೆಯ ವಿರುದ್ಧ ಹೋರಾಡುವುದಾಗಿ ಹೇಳಿದ್ದರು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ಹೋರಾಟ ಪ್ರತ್ಯೇಕವಾಗಿ ನಡೆಯಲಿದೆ ಎಂದು ಹೇಳಿದರು. ಇದು ಒಳ್ಳೆಯದಲ್ಲ. ಎರಡೂ ಪಕ್ಷಗಳ ನಾಯಕರು ತಮ್ಮ ನಡುವಿನ ಸಮನ್ವಯದ ಬಗ್ಗೆ ಚರ್ಚಿಸಬೇಕು" ಎಂದು ತಿಳಿಸಿದರು.

ಬಿಜೆಪಿ-ಜೆಡಿಎಸ್ ನಾಯಕರು
ಬೆಲೆ ಏರಿಕೆಗೆ ಖಂಡನೆ: BJP ಅಹೋರಾತ್ರಿ ಧರಣಿ, BSY ಭಾಗಿ, ಸರ್ಕಾರದ ವಿರುದ್ಧ ಆಕ್ರೋಶ

ಏತನ್ಮಧ್ಯೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಸಮನ್ವಯ ಸಮಿತಿ ರಚಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ.

ಏತನ್ಮಧ್ಯೆ, ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿದ್ರೆ ತಕ್ಷಣವೇ ಸ್ಪಂದಿಸಬೇಕಾದದ್ದು ವಿಪಕ್ಷಗಳ ಕರ್ತವ್ಯ. ನಾನು ನಿಖಿಲ್ ಕುಮಾರಸ್ವಾಮಿ ಹೇಳಿಕೆ ಸಹ ಗಮನಿಸಿದ್ದೇನೆ. ನಾವು ಸಹ ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಗ್ರೇಟರ್ ಬೆಂಗಳೂರು ವಿಚಾರದಲ್ಲಿ ಜೆಡಿಎಸ್ ಪ್ರತ್ಯೇಕ ಹೋರಾಟ ಮಾಡಿದ್ದರು. ಸಣ್ಣಪುಟ್ಟ ಗೊಂದಲ ಇದ್ದರೆ ಮಾತಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದರು.

ಇದೇ ವೇಳೆ ಮೈತ್ರಿ ಗೊಂದಲ ಬಗೆಹರಿಸಲು ಸಮನ್ವಯ ಸಮಿತಿ ಮಾಡೋದು ಒಳ್ಳೆಯದೆ. ನಾವು ಕೂಡ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಮೈತ್ರಿ ಗೊಂದಲ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ನಮ್ಮ ಹೋರಾಟ ನಾವು ಮಾಡೋದು. ಅವರ ಹೋರಾಟ ಅವರು ಮಾಡ್ತಾರೆ. ಆದ್ರೆ ವಿಧಾನಸಭೆಯಲ್ಲಿ, ಚುನಾವಣೆ ವೇಳೆ ಹೊಂದಾಣಿಕೆ ಹೋರಾಟ ನಡೆಯಲಿದೆ. ನಮ್ಮ ನಡುವೆ ಹೀಗೆಯೇ ಮಾತುಕತೆ ನಡೆದಿರೋದು ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com