ಇದು ಜಾತಿ ಗಣತಿಯೋ ಅಥವಾ ದ್ವೇಷದ ಗಣತಿಯೋ?: ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಕಿಡಿ

ಹಳೇ ಮೈಸೂರು ಪ್ರದೇಶಗಳಾದ ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿತ್ರದುರ್ಗದಲ್ಲಿ ವಾಸಿಸುವ ಒಕ್ಕಲಿಗ ಸಮುದಾಯದ ನಿಜವಾದ ಜನಸಂಖ್ಯೆ ಎಷ್ಟೆಂದು ತಿಳಿಯಬೇಕು ಎಂದರು.
Union Minister HD kumaraswamy
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ
Updated on

ಬೆಂಗಳೂರು: ಸಚಿವ ಸಂಪುಟದ ಮುಂದೆ ಮಂಡಿಸಲಾದ ಜಾತಿ ಗಣತಿ ವರದಿಯನ್ನು ಟೀಕಿಸಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಇದು ಜಾತಿ ಜನಗಣತಿಯೋ ಅಥವಾ ದ್ವೇಷದ ಜನಗಣತಿಯೋ ಎಂದು ಮಂಗಳವಾರ ಪ್ರಶ್ನಿಸಿದ್ದಾರೆ.

'ನಿಜಕ್ಕೂ ಇದೇನು ಜಾತಿ ಗಣತಿಯೋ ಅಥವಾ ದ್ವೇಷ ಗಣತಿಯೋ? ಈ ಜಾತಿ ಗಣತಿಯು ರಾಜ್ಯದಲ್ಲಿ ಉದ್ದೇಶಪೂರ್ವಕವಾಗಿ ಅಶಾಂತಿಯನ್ನು ಉಂಟುಮಾಡಲು ರೂಪಿಸಲಾದ ಪಿತೂರಿಯೇ? ಅಥವಾ ನಿರಂತರ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ಹಗರಣಗಳ ಸರಣಿಯಿಂದ ಉಂಟಾದ ಮುಜುಗರದಿಂದ ಗಮನ ಬೇರೆಡೆ ಸೆಳೆಯಲು ರೂಪಿಸಲಾದ ಒಂದು ತಂತ್ರವೇ?' ಎಂದು ಸಚಿವರು ಪ್ರಶ್ನಿಸಿದ್ದಾರೆ.

'ಇಡೀ ರಾಜ್ಯವು ಜಾತಿ ವಿಭಜನೆಯ ಜ್ವಾಲೆಯಲ್ಲಿ ಮುಳುಗಿರುವಾಗ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಈ ಕ್ರಮವು ಕೆಲವು ಸಮುದಾಯಗಳನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮೂಲೆಗುಂಪು ಮಾಡುವ ಪೂರ್ವನಿಯೋಜಿತ ಪ್ರಯತ್ನವೇ?. ಸೋರಿಕೆಯಾಗಿರುವ ಜಾತಿ ಗಣತಿ ಅಂಕಿಅಂಶಗಳು ಈಗ ಎಲ್ಲೆಡೆ ಹರಡಿವೆ. ಯಾರೋ ಅಪರಿಚಿತ ಕೈಗಳು ಅವುಗಳನ್ನು ವ್ಯವಸ್ಥಿತವಾಗಿ ಸಾರ್ವಜನಿಕ ವಲಯಕ್ಕೆ ಸೋರಿಕೆ ಮಾಡಿವೆ' ಎಂದು ಅವರು ಹೇಳಿದರು.

ಹಳೇ ಮೈಸೂರು ಪ್ರದೇಶಗಳಾದ ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿತ್ರದುರ್ಗದಲ್ಲಿ ವಾಸಿಸುವ ಒಕ್ಕಲಿಗ ಸಮುದಾಯದ ನಿಜವಾದ ಜನಸಂಖ್ಯೆ ಎಷ್ಟೆಂದು ತಿಳಿಯಬೇಕು ಎಂದರು.

Union Minister HD kumaraswamy
ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ

ಈ ಹಿಂದೆ ಜಾತಿ ಗಣತಿಯನ್ನು ವಿರೋಧಿಸಿ ಈಗ ಯೂಟರ್ನ್ ತೆಗೆದುಕೊಂಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಟೀಕಿಸಿದ ಅವರು, 'ಮುಖ್ಯಮಂತ್ರಿ ಕುರ್ಚಿಯನ್ನು ಬೆನ್ನಟ್ಟುವ ಕೆಲಸದಲ್ಲಿ ನಿದ್ರಾಹೀನನಾಗಿದ್ದ ಅವರು (ಶಿವಕುಮಾರ್), 'ನನಗೆ ಒಮ್ಮೆ ಪೆನ್ನು ಮತ್ತು ಕಾಗದವನ್ನು ಕೊಡಿ!' ಎಂದು ಹಿಂದೆ ಸಮುದಾಯವನ್ನು ಬೇಡಿಕೊಂಡಿದ್ದರು ಮತ್ತು ಈಗ, ಅದೇ ವ್ಯಕ್ತಿ ತಲೆ ಬಾಗಿ ಸಿದ್ಧ ಪಿತೂರಿ ವರದಿಯನ್ನು ಅನುಮೋದಿಸುತ್ತಿದ್ದಾರೆಯೇ?. ಈ ಅನ್ಯಾಯದ ವಿರುದ್ಧ ಹೋರಾಡಲು ನಾನು ಸಂಪೂರ್ಣವಾಗಿ ಸಿದ್ಧನಿದ್ದೇನೆ' ಎಂದರು.

ಜಾತಿ ಗಣತಿ ಎಂದು ಕರೆಯಲಾಗುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಏಪ್ರಿಲ್ 11 ರಂದು ಸಚಿವ ಸಂಪುಟದ ಮುಂದೆ ಮಂಡಿಸಲಾಯಿತು. ಈ ವರದಿಯನ್ನು ಕಳೆದ ವರ್ಷ ಫೆಬ್ರುವರಿಯಲ್ಲಿ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.

ಏಪ್ರಿಲ್ 17ರಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವರದಿಯ ಕುರಿತು ವಿವರವಾದ ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Union Minister HD kumaraswamy
ಜಾತಿ-ಜಾತಿ ಅಂತ ಮಂಗ್ಯಾಗಳ ರೀತಿ ಕಿತ್ತಾಡಬೇಡಿ; ಹಿಂದೂಗಳ ಸ್ಥಿತಿ ಏನಾಗಿದೆ ನೋಡಿ: ಪ್ರತಾಪ್​ ಸಿಂಹ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com