HD Ranganath
ಕಾಂಗ್ರೆಸ್ ಶಾಸಕ ಎಚ್‌ಡಿ ರಂಗನಾಥ್

ಡಿಕೆಶಿ ಹಾದಿಯಲ್ಲಿ ಎಚ್‌.ಡಿ ರಂಗನಾಥ್: RSS ಗೀತೆ ಹಾಡಿ ಹೊಗಳಿದ ಕುಣಿಗಲ್ ಶಾಸಕ!

ಬಲಪಂಥೀಯರು ಜಾತಿ ಮತ್ತು ಧರ್ಮವನ್ನು ವಿಭಜಿಸಲು ಒತ್ತಾಯಿಸುತ್ತಾರೆ. ಅದನ್ನು ನಾವು ವಿರೋಧಿಸುತ್ತೇವೆ. ಅವರ ಸಿದ್ಧಾಂತವು ನಮ್ಮ ಸಿದ್ಧಾಂತಕ್ಕೆ ಎಂದಿಗೂ ಹೊಂದಿಕೆಯಾಗುವುದಿಲ್ಲ.
Published on

ತುಮಕೂರು: 'ನಮಸ್ತೆ ಸದಾ ವತ್ಸಲೇ ಮಾತೃಭೂಮಿ' ಎಂಬ ಆರ್‌ಎಸ್‌ಎಸ್ ಗೀತೆಯ ಮೊದಲ ಕೆಲವು ಸಾಲುಗಳನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸದನದಲ್ಲಿ ಹಾಡಿದ ನಂತರ, ಆಡಳಿತಾರೂಢ ಕಾಂಗ್ರೆಸ್ ಶಾಸಕ ಎಚ್‌ಡಿ ರಂಗನಾಥ್ ಕೂಡ ಭಾನುವಾರ ಆರ್‌ಎಸ್ಎಸ್ ಗೀತೆಯ ಆರಂಭಿಕ ಸಾಲುಗಳನ್ನು ಹಾಡಿ ಹೊಗಳಿದ್ದಾರೆ.

11 ಜನರ ಪ್ರಾಣವನ್ನು ಬಲಿತೆಗೆದುಕೊಂಡ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದ ಕುರಿತು ರಾಜ್ಯ ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಆಗಸ್ಟ್ 21 ರಂದು ಡಿಕೆ ಶಿವಕುಮಾರ್ ಆರ್‌ಎಸ್ಎಸ್ ಗೀತೆಯನ್ನು ಹಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.

ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಂಗನಾಥ್, ಆರ್‌ಎಸ್‌ಎಸ್ ಗೀತೆ 'ನಮಸ್ತೆ ಸದಾ ವತ್ಸಲೇ'ದ ಆರಂಭಿಕ ಸಾಲುಗಳನ್ನು ಹಾಡಿದರು. ಈ ಗೀತೆ 'ತುಂಬಾ ಒಳ್ಳೆಯ ಹಾಡು'. ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಅದನ್ನು ಹಾಡಿದ ನಂತರ ನಾನು ಅದನ್ನು ಕೇಳಿದೆ' ಎಂದು ಹೇಳಿದರು.

'ನಾನು ಅದರ ಅರ್ಥವನ್ನು ಓದಿದ್ದೇನೆ. ನಾವು ಹುಟ್ಟಿದ ಭೂಮಿಗೆ ನಮಸ್ಕರಿಸಬೇಕು ಎಂದು ಅದು ಹೇಳುತ್ತದೆ. ಅದರಲ್ಲಿ ನನಗೆ ಯಾವುದೇ ತಪ್ಪಿಲ್ಲ. ನಮ್ಮದು ಜಾತ್ಯತೀತ ಪಕ್ಷ ಮತ್ತು ನಾವು ಇತರರಿಂದ ಒಳ್ಳೆಯದನ್ನು ಸ್ವೀಕರಿಸಬೇಕು' ಎಂದು ಹೇಳಿದರು.

HD Ranganath
ಸದನದಲ್ಲಿ RSS ಗೀತೆ ಸಾಲು ಹೇಳಿ ಅಚ್ಚರಿ ಮೂಡಿಸಿದ ಡಿ.ಕೆ ಶಿವಕುಮಾರ್; ನೀಡಿದ ಸ್ಪಷ್ಟನೆಯೇನು? Video

ಬಿಜೆಪಿಯನ್ನು ಟೀಕಿಸಿದ ಅವರು, 'ಬಲಪಂಥೀಯರು ಜಾತಿ ಮತ್ತು ಧರ್ಮವನ್ನು ವಿಭಜಿಸಲು ಒತ್ತಾಯಿಸುತ್ತಾರೆ. ಅದನ್ನು ನಾವು ವಿರೋಧಿಸುತ್ತೇವೆ. ಅವರ ಸಿದ್ಧಾಂತವು ನಮ್ಮ ಸಿದ್ಧಾಂತಕ್ಕೆ ಎಂದಿಗೂ ಹೊಂದಿಕೆಯಾಗುವುದಿಲ್ಲ. ಆದರೆ, ಯಾರಾದರೂ ಆರ್‌ಎಸ್‌ಎಸ್‌ನ ಹಾಡನ್ನು ಹಾಡಿದರೆ ತಪ್ಪೇ? ನಾನು ಈ ಪ್ರಶ್ನೆಯನ್ನು ಮಾತ್ರ ಕೇಳುತ್ತಿದ್ದೇನೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com