
ಮೈಸೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಕುರ್ಚಿಗಾಗಿ ಜಟಾಪಟಿ ನಡೆಯುತ್ತಿದ್ದು, ಈ ಜಟಾಪಟಿ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಮತ್ತು ಎಂಬಿ ಪಾಟೀಲ್ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಅಪಾಯದಲ್ಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಇನ್ನು ಆರು ತಿಂಗಳಷ್ಟೆ ಮುಖ್ಯಮಂತ್ರಿ ಆಗಿರುತ್ತಾರೆ. ಈ ಬಗ್ಗೆ ಒಪ್ಪಂದ ಆಗಿದೆ. ಒಪ್ಪಂದ ಆಗಿರುವುದು ನೋಟರಿ ಬಳಿಯಲ್ಲ, ಉಪನೋಂದಣಾಧಿಕಾರಿ ಕಚೇರಿ (ಕಾಂಗ್ರೆಸ್ ಹೈಕಮಾಂಡ್)ಯಲ್ಲಿ ಎಂದು ತಿಳಿಸಿದರು.
‘ಅಂಥವರು ನಮ್ಮ ಕೇಂದ್ರ ಸರ್ಕಾರಕ್ಕೆ ಅಂಕ ಕೊಡುವುದನ್ನು ನಾವಾಗಲಿ– ಜನರಾಗಲಿ ನಿರೀಕ್ಷಿಸುದಿಲ್ಲ. ಏಕೆಂದರೆ, ಅವರು ಇರುವುದೇ ಗ್ಯಾರಂಟಿ ಇಲ್ಲ. ಶೀಘ್ರದಲ್ಲೇ ನಿರ್ಗಮಿತ ಸಿಎಂ ಆಗಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಆಂತರಿಕ ಕಿತ್ತಾಟ, ಕಳಪೆ ಆಡಳಿತ, ಸಾರ್ವಜನರಿ ಕಲ್ಯಾಣವನ್ನು ನಿರ್ಲಕ್ಷಿಸುತ್ತಿರುವುದು ಅಂತಿಮವಾಗಿ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ. ನಾಲ್ಕು ನಾಯಕರು ಮುಖ್ಯಮಂತ್ರಿ ಕುರ್ಚಿಯನ್ನು ವಿಭಿನ್ನ ದಿಕ್ಕುಗಳಲ್ಲಿ ಎಳೆಯುತ್ತಿದ್ದಾರೆ, ಸರ್ಕಾರ ನಮ್ಮಿಂದಲ್ಲ, ಆಂತರಿಕ ಕಚ್ಚಾಟದಿಂದಲೇ ಸರ್ಕಾರ ಪತನವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದ ಅವರು, ಆಡಳಿತದ ಪರವರ್ತನೆಗಳನ್ನು ವಿಶೇಷವಾಗಿ ಕೋವಿಡ್ -19 ನಂತಹ ಜಾಗತಿಕ ಬಿಕ್ಕಟ್ಟುಗಳನ್ನು ನಿಭಾಯಿಸುವಲ್ಲಿ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದರು.
ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ, ಭಯೋತ್ಪಾದನೆ ಉತ್ತುಂಗದಲ್ಲಿತ್ತು. ಈಗ, ಆಪರೇಷನ್ ಸಿಂಧೂರ್ ನಂತಹ ದಿಟ್ಟ ಕ್ರಮಗಳ ಮೂಲಕ ನಾವು ಉಗ್ರರಿಗೆ ದಿಟ್ಟ ನೀಡಿದ್ದೇವೆಂದು ತಿಳಿಸಿದರು.
Advertisement